ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ, ಮತ್ತೊಮ್ಮೆ ಮೋದಿ ಪ್ರಧಾನಿ ಪಟ್ಟ ಖಚಿತ-ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ

ಲೋಕಸಭಾ ಚುನಾವಣೆಯಲ್ಲಿ  ಬಿಜೆಪಿ ದಿಗ್ವಿಜಯ, ಮತ್ತೊಮ್ಮೆ ಮೋದಿ ಪ್ರಧಾನಿ ಪಟ್ಟ ಖಚಿತ-ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ

ಕೆ.ಆರ್.ಪೇಟೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಎಲ್ಲಾ 28 ಕ್ಷೇತ್ರಗಳಲ್ಲಿಯೂ ನಮ್ಮ ಬಿಜೆಪಿ ಮತ್ತು ಎನ್.ಡಿ.ಎ ಅಭ್ಯರ್ಥಿಗಳು ಜಯಗಳಿಸುವ ವಿಶ್ವಾಸವಿದೆ. ಅಲ್ಲದೆ ಮತ್ತೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಮತ್ತೊಮ್ಮೆ ಬಹುಮತ ಪಡೆದು ಹ್ಯಾಟ್ರಿಕ್ ಗೆಲುವು ದಾಖಲಿಸಿ ಅಧಿಕಾರಕ್ಕೇರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ತಮ್ಮ ತಂದೆ ಬಿ.ಎಸ್.ಯಡಿಯೂರಪ್ಪ ಅವರ ತವರೂರು ಕೆ.ಆರ್.ಪೇಟೆಗೆ ಬೇಟಿ ನೀಡಿದ್ದ ಅವರು ನಮ್ಮ ತಂದೆಯ ತವರೂರು ಕೆ.ಆರ್.ಪೇಟೆಯಲ್ಲಿ ಮೊದಲ ಭಾರಿಗೆ 2019ರ ಉಪ ಚುನಾವಣೆಯಲ್ಲಿ ನಾನು ಜವಾಬ್ದಾರಿ ತೆಗೆದುಕೊಂಡಾಗ ತಾಲ್ಲೂಕಿನ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಬಿಜೆಪಿ ಅಭ್ಯರ್ಥಿಯಾಗಿದ್ದ ನಾರಾಯಣಗೌಡರನ್ನು ಗೆಲ್ಲಿಸುವ ಮೂಲಕ ಯಡಿಯೂರಪ್ಪ ಅವರ ತವರಿನಲ್ಲಿ ಕಮಲವನ್ನು ಅರಳಿಸುವ ಮೂಲಕ ನಮ್ಮ ತಂದೆಯವರ ಕನಸನ್ನು ನನಸು‌ ಮಾಡಿರುವ ಕೆ.ಆರ್.ಪೇಟೆ ತಾಲ್ಲೂಕಿನ ಜನತೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಅದೇ ರೀತಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ವಿಶ್ವವೇ ಮೆಚ್ಚಿರುವ ಪ್ರಧಾನಿ‌ ನರೇಂದ್ರ ಮೋದಿ ಅವರಿಗೆ ದೇಶ ಸೇವೆ ಮಾಡಲು‌ ಮತ್ತಷ್ಟು ಶಕ್ತಿ ತುಂಬಬೇಕು ಎಂದು ವಿಜಯೇಂದ್ರ ಮನವಿ‌‌ ಮಾಡಿದರು. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಲವು ಬದಲಾವಣೆಗಳಾಗಿದ್ದವು ಹಾಗಾಗಿ ‌ ನಮ್ಮ ನಿರೀಕ್ಷೆಯಂತೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗಿರುವುದಿಲ್ಲ. 

ಆದರೆ ಈಗ ನಮ್ಮ 

ನಮ್ಮ ಮುಂದಿನ ಗುರಿ ಲೋಕಸಭಾ ಚುನಾವಣೆ 28ಕ್ಕೆ 28ನೇ ಗೆದ್ದು ನರೇಂದ್ರ ಮೋದಿ ಅವರನ್ನು ಅವರ ಕೈಯನ್ನು ಬಲಪಡಿಸಬೇಕಾಗಿರುತ್ತದೆ. ಇದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸಲಾಗುವುದು. ಪಕ್ಷದಿಂದ ಯಾರೂ ಸಹ ಹೊರ ಹೋಗದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡಲಾಗುವುದು.  

 ಹಿಂದೆ ಕರ್ನಾಟಕ ಅಂದ್ರೆ ದಕ್ಷಿಣ ಭಾರತದ ಭದ್ರಕೋಟೆ ಆಗಿತ್ತು ಇನ್ನು ಮುಂದಿನ ದಿನಗಳಲ್ಲಿ ಕರ್ನಾಟಕ ಬಿಜೆಪಿಗೆ ಭದ್ರಕೋಟೆಯಾಗಿ ಬದಲಾಗಬೇಕು ಇದಕ್ಕೆ ರಾಜ್ಯದ ಎಲ್ಲಾ ಸಮುದಾಯದ ಸಹಕಾರ ಅಗತ್ಯವಾಗಿದೆ.

ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು 6ತಿಂಗಳಾಗುತ್ತಾ ಬಂದಿದೆ. ಕೇವಲ ತಮ್ಮ ಪಕ್ಷದ ಗ್ಯಾರಂಟಿಗಳನ್ನು ಈಡೇರಿಸಲು ಸಹ ಪರದಾಡುತ್ತಿದೆ. ಇನ್ನು ಇತರೆ ಮೂಲ ಸೌಲಭ್ಯಗಳಿಗೆ ಅನುಧಾನ ನೀಡಲು ಹಣ ವಿಲ್ಲದಂತಾಗಿದೆ. 

ಗ್ರಾಮ ಪಂಚಾಯಿತಿಗಳಿಗೆ ಒಂದೇ ಒಂದು ಮನೆ ಮಂಜೂರು‌ ಮಾಡಿಲ್ಲ. ಶಾಲೆಗಳಿಗೆ, ರಸ್ತೆ ಅಭಿವೃದ್ದಿಗೆ, ಕುಡಿಯುವ ನೀರಿನ ಸೌಲಭ್ಯಕ್ಕೆ ಬಿಡಿಗಾಸು ಅನುಧಾನ ನೀಡಿಲ್ಲ. ಇಂತಹ ಅಭಿವೃದ್ದಿ ವಿರೋಧಿ ರಾಜ್ಯ ಸರ್ಕಾರಕ್ಕೆ ತಕ್ಕಪಾಠ ಕಲಿಸಲು ರಾಜ್ಯದ ಜನತೆ ತುದಿಗಾಲಲ್ಲಿ ನಿಂತಿದ್ದಾರೆ ಎಂದರು.

ಬಿ ಪಿ ಎಲ್ ಕಾರ್ಡಿನಲ್ಲಿ ಕುಟುಂಬದ ಮುಖ್ಯಸ್ಥೆಯನ್ನಾಗಿ ಯಜಮಾನಿಯನ್ನಾಗಿ ಬದಲಾವಣೆ ಮಾಡಿದ ಪಡಿತರ ಚೀಟಿದಾರರಿಗೆ ಅರ್ಜಿ ಸಲ್ಲಿಸದಂತೆ ರಾಜ್ಯ ಸರ್ಕಾರ ಸಾಪ್ಟ್ ವೇರ್ ಅಪ್ ಡೇಟ್ ಮಾಡದೇ ತಡೆ ಹಿಡಿದಿದೆ. ಇದರಿಂದಾಗಿ   

ಪ್ರತಿ ಗ್ರಾಮದಲ್ಲಿ ಶೇ.30ರಷ್ಟು ಮಂದಿಗೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಪ್ರತಿ ಗ್ರಾಮದಲ್ಲಿಯೂ ರಾಜ್ಯ ಸರ್ಕಾರದ ವಿರುದ್ದ ಜನ ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರವು ಸಾಪ್ಟ್ ವೇರ್ ಅಪ್ ಡೇಟ್ ಮಾಡುವ ಮೂಲಕ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ವಿಜಯೇಂದ್ರ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. 

2028ರ ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು.

ಇದರ ಮುಖೇನ ನಾಡಿನ ರೈತರು, ಬಡವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಬಿಜೆಪಿ ಮಾಡಬೇಕಾಗಿದೆ ಎಂದು ವಿಜಯೇಂದ್ರ ಹೇಳಿದರು.

 ನಮ್ಮ ತಂದೆಯವರ ರಾಜಕೀಯ ಜೀವನದಲ್ಲಿ ಎತ್ತರದಿಂದ ನಾನು ಜನರ ಕಷ್ಟಗಳನ್ನು ನೋಡಿದ್ದೇನೆ ಎಲ್ಲ ಸಮಸ್ಯೆಗಳನ್ನು ಸುಲಲಿತವಾಗಿ ಬಗೆಹರಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ ಎಂದು ತಿಳಿಸಿದರು. 

ನಿಮ್ಮ ಆಯ್ಕೆಯಿಂದ ಪಕ್ಷದಲ್ಲಿ ಅಸಮಾಧಾನ ಇದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ 

ಭಾರತೀಯ ಜನತಾ ಪಾರ್ಟಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದು ಪಕ್ಷದ ರಾಷ್ಟ್ರೀಯ ವರಿಷ್ಠರು ಯಾವ ಜವಾಬ್ದಾರಿ ಕೊಡುತ್ತಾರೊ ಅದನ್ನು ಕಾಯಾ ವಾಚಾ ಮನಸ್ಸಿನಿಂದ ನಿರ್ವಹಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಪಕ್ಷದಲ್ಲಿ ಹಿರಿಯರು, ಕಿರಿಯರು ಎಂಬ ಭೇದವಿಲ್ಲದೆ ಎಲ್ಲರಿಗೂ ಸೂಕ್ತ ಅವಕಾಶ ನೀಡುವ ಮೂಲಕ‌ ಪಕ್ಷದ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ 

ಬಿಜೆಪಿ ಸೋಲಿನ ಬಗ್ಗೆ ಕೇಳಲಾಗಿ ಸೋಲನ್ನ ಸಾವಲಾಗಿ ಸ್ವೀಕಾರ ಮಾಡಿ ಸೋಲೇ ಗೆಲುವಿನ ಸೋಪಾನ ಅಂತ ಹಿರಿಯರು ಹೇಳುವ ರೀತಿ ಸೋಲನ್ನು ಮರೆತು ಮುನ್ನುಗ್ಗಿ ಸಂಘಟನೆಗೆ ಹೊತ್ತನ್ನು ಕೊಟ್ಟು ಸಂಘಟನೆಗೆ ಶಕ್ತಿಯನ್ನು ತುಂಬಿ ಮುಂದಿನ ದಿನಗಳಲ್ಲಿ ಪಕ್ಷವು ದಿಗ್ವಿಜಯ ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಈ ದಿನ ಗುಜರಾತಿನ ಅಹಮದಾಬಾದ್ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದು ಬರಬೇಕು ಶುಭ ಹಾರೈಸುತ್ತೇನೆ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೊದಲ ಮೊದಲೇ ಕೆ ಆರ್ ಪೇಟೆಗೆ ಬರುತ್ತಿದ್ದೀರಿ 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪೇಟೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಐತಿಹಾಸಿಕ ವಿಷಯವನ್ನು ತಂದುಕೊಟ್ಟು ನಾರಾಯಣಗೌಡರು ಶಾಸಕರಾಗಿ ಆಯ್ಕೆ ಮಾಡಿರುತ್ತೇವೆ ದಾಖಲೆ ನಿರ್ಮಾಣ ಮಾಡಿರುತ್ತೇವೆ ರಾಜ್ಯದಲ್ಲಿ ಕಳೆದ ಚುನಾವಣೆಯ ಹಲವು ಬದಲಾವಣೆಗಳಾಗಿದ್ದವು ಹಾಗಾಗಿ ‌ ನಮ್ಮ ನಿರೀಕ್ಷೆಯಂತೆ ಚುನಾವಣೆ ಗೆಲ್ಲಲು ಸಾಧ್ಯವಾಗಿರುವುದಿಲ್ಲ ಇದನ್ನು ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಾಧನೆ ಮಾಡುವ ಮೂಲಕ ಕಹಿಯನ್ನು ಮರೆತು ಸಿಹಿ ನೀಡಲಾಗುವುದು. ಕಾರ್ಯಕರ್ತರು ಯಾವುದೇ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಮೂಲಕ ಪಕ್ಷಕ್ಕೆ ಶಕ್ತಿಯಾಗಿ ನಿಲ್ಲಬೇಕು ಎಂದು ವಿಜಯೇಂದ್ರ‌ ಮನವಿ‌ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಹೆಚ್.ಟಿ.ಮಂಜು, ರಾಜ್ಯ ಕುರಿ ಮತ್ತು ಮೇಕೆ ಸಾಕಣೆದಾರರ ಮಹಾಮಂಡಳದ ರಾಜ್ಯಾಧ್ಯಕ್ಷ ಶರಣು.ಬಿ.ತಳ್ಳಿಕೇರಿ, ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಉಮೇಶ್, ಜಿಲ್ಲಾ ಬಿಜೆಪಿ ಮುಖಂಡರಾದ ಇಂಡುವಾಳು ಎಸ್.ಸಚ್ಚಿದಾನಂದ, ಡಾ.ಇಂದ್ರೇಶ್, ಜಿ.ಪಂ.ಮಾಜಿ ಉಪಾಧ್ಯಕ್ಷ ಅಂಬರೀಶ್, ದಯಾನಂದ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ನಿಕಟ ಪೂರ್ವ ತಾಲ್ಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜು, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್, ವಡ್ಡರಹಳ್ಳಿ ಸಿದ್ದಲಿಂಗಪ್ಪ, ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ತಾಲ್ಲೂಕು ಭಾಜಪ ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ, ಸಾರಂಗಿ ನಾಗಣ್ಣ, ಭಾರತೀಪುರ ಶ್ರೀನಿವಾಸ್, ಶೀಳನೆರೆ ಭರತ್, ಸೇರಿದಂತೆ ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow