ಹಲಗೂರು ಲಯನ್ಸ್ ಕ್ಲಬ್ ಗೆ ಜಿಲ್ಲಾ ರಾಜ್ಯಪಾಲರ ಭೇಟಿ.

ಜಿಲ್ಲಾ ರಾಜ್ಯಪಾಲರಾದ ಡಾ. ಕೃಷ್ಣೇಗೌಡ ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡುತ್ತಾ ನಮ್ಮ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯಲ್ಲಿ ಅನೇಕ ಸವಲತ್ತುಗಳು ದೊರಕುತ್ತಿದ್ದು ಅವುಗಳನ್ನು ಸದ್ಬಳಿಕೆ ಮಾಡಿಕೊಂಡು ಲಯನ್ಸ್ ಸಂಸ್ಥೆಯನ್ನು ಅಭಿವೃದ್ಧಿಪಡಿಸಿ ನನ್ನಿಂದಾಗುವ ಪೂರ್ಣ ಸಹಕಾರ ನೀಡುತ್ತೇನೆ ಈ ನಿಮ್ಮ ಸಂಸ್ಥೆ 42 ವರ್ಷ ಪೂರೈಸಿದ್ದು ಇದುವರೆಗೂ ನಿಮ್ಮ ಸಂಸ್ಥೆಯಲ್ಲಿ ಪ್ರತಿ ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ಅನ್ನಪೂರ್ಣೇ ಅನ್ನದಾನ ಕಾರ್ಯಕ್ರಮ ಮತ್ತು ಹೊಲಿಗೆ ತರಬೇತಿ ಹಾಗೂ ಉಚಿತ ಆರೋಗ್ಯ ತಪಾಸಣೆ ನಡೆಸಿರುವುದು ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿ ಇನ್ನೂ ಈ ಜಿಲ್ಲೆಯಲ್ಲಿ ಈ ನಿಮ್ಮ ಸಂಸ್ಥೆ ಹೆಸರು ಕೊಡುವಂತಾಗಲಿ ಅಲ್ಲದೆ ನಮ್ಮ ಲಯನ್ ಸಂಸ್ಥೆಯ ಸ್ವಂತ ಕಟ್ಟಡವಿದೆ ಎಂದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ಬಿನ ಸಂಪುಟ ಕಾರ್ಯದರ್ಶಿ ವೆಂಕಟೇಶ್ ಪ್ರಾಂತೀಯ ಅಧ್ಯಕ್ಷರಾದ ವಿಠಲ್ ರಾವ್ ಮತ್ತು ಹಲಗೂರು ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಸುರೇಶ್ ಕಾರ್ಯದರ್ಶಿ ಶ್ರೀನಿವಾಸಚಾರಿ ಖಜಾಂಚಿ ಮಾದೇಗೌಡ ಸೇರಿದಂತೆ ಡಾಕ್ಟರ್ ಶಂಶುದ್ದೀನ್. ಡಾಕ್ಟರ್ ನಾಗೇಶ್. ಪದ್ಮನಾಭ .ಡಾಕ್ಟರ್ ಸಿದ್ದರಾಜು ಮತ್ತು ಇತರರು ಇದ್ದರು.
ನಂತರ ಹಲಗೂರು ಸಮೀಪದ ನಂಜಪುರದ ಆರು ವರ್ಷದ ಮಗುವಿಗೆ ಬ್ಲಡ್ ಕ್ಯಾನ್ಸರ್ ಇದ್ದು 20,000 ಸಹಾಯಧನ ನೀಡಿದರು.
What's Your Reaction?






