ಕೆ ಆರ್ ಪೇಟೆ: ಹಾಲಿನ ಡೇರಿಗೆ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವುದರ ಮೂಲಕ ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಅಭಿಪ್ರಾಯಪಟ್ಟರು

ಅವರು ತಾಲ್ಲೂಕಿನ ಕಿಕ್ಕೇರಿ ಹೋಬಳಿ ಚಿಕ್ಕಳಲೇ ಗ್ರಾಮದಲ್ಲಿ ನೂತನವಾಗಿ ಆರಂಭಿಸಿದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶದಲ್ಲಿ ಬೇರೆ ಬೇರೆ ಉದ್ಯಮಗಳಂತೆ ಹೈನುಗಾರಿಕೆ ಉದ್ಯಮ ಹೆಮ್ಮರವಾಗಿ ಬೆಳೆಯತೊಡಗಿದೆ.ರೈತರು ಹಾಗೂ ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಮುಖ್ಯ ಉಪಕಸುಬನ್ನಾಗಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ.ಹಾಲಿನ ಡೇರಿಯನ್ನು ನಿಮ್ಮೂರಿನ ದೇವಾಲಯದಂತೆ ಕಾಣಿರಿ.ಎಲ್ಲಾ ವಿದ್ಯಾವಂತರಿಗೆ ಮುಂದಿನ ದಿನಗಳಲ್ಲಿ ಸರ್ಕಾರಿ ಉದ್ಯೋಗಳು ಸಿಗುವುದು ಬಹಳ ಕಡಿಮೆ. ಆದ್ದರಿಂದ ಸಂಘವನ್ನು ಉಳಿಸಿ ಬೆಳೆಸುವುದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಸಂಘವನ್ನು ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು.

ಶಾಸಕರು ಹಾಗೂ ಮನ್ಮುಲ್ ನಿರ್ದೇಶಕರಾದ ಹೆಚ್ ಟಿ ಮಂಜು ಮಾತನಾಡಿ ಅಚ್ಚ ಹಾಲಿಗೆ ಉಪ್ಪು,ಸಕ್ಕರೆ, ನೀರು ಬೇರೆ ಯಾವುದೇ ರಾಸಾಯನಿಕ ವಸ್ತುಗಳನ್ನು ಕಲಬೆರಕೆ ಮಾಡಿ ಡೇರಿಗೆ ಹಾಕುವುದು ಅಕ್ಷಮ್ಯ ಅಪರಾಧ.ಇದರಿಂದ ಆಹಾರ ಸುರಕ್ಷತಾ ಕಾಯ್ದೆಯ ಪ್ರಕಾರ ದಂಡದ ಜೊತೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಭಾಗವಹಿಸಿದ ನಂತರ ಸಂಘದ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ರಾಜಕಾರಣವನ್ನು ಬೆರಸದೇ ಸಂಘದ ಸಮಗ್ರ ಅಭಿವೃದ್ಧಿಗೆ ಕಾರಣರಾಗಬೇಕು.ಸಂಘವು ಉಳಿದರೇ ನೀವು,ನಾವು,ಗ್ರಾಮಗಳು ನೆಮ್ಮದಿಯಿಂದ ಜೀವನ ಮಾಡಬಹುದು. ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ವ್ಯವಸ್ಥೆಯನ್ನು ಸಂಘದ ಆಡಳಿತ ಮಂಡಳಿ ಹಾಗೂ ನೌಕರರು ಸಹಕರಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಹೆಚ್ ಟಿ ಮಂಜು,ಸಂಘದ ಅಧ್ಯಕ್ಷೆ ಶ್ವೇತಾ,ಉಪಾಧ್ಯಕ್ಷೆ ಭಾರತಿ, ಮಾರ್ಗ ವಿಸ್ತರಣಾ ಅಧಿಕಾರಿಗಳಾದ ಗುರುರಾಜ್ ಎ ಸುರಗಿಹಳ್ಳಿ, ಪ್ರಸಾದ್,ಸಂಘದ ನಿ ರೀತನ್,ಸಂಘದ ನಿರ್ದೇಶಕರಾದ ಆಶಾ,ರತ್ನಮ್ಮ, ಶಿವಮ್ಮ,ಯಶೋಧ,ಪವಿತ್ರ, ನೀತು,ನಿಂಗಮ್ಮ, ಮಣಿಯಮ್ಮ,ರಾಜಮ್ಮ,ರಾಧಾ,ಸಂಘದ ಕಾರ್ಯದರ್ಶಿ ಶ್ವೇತಾ, ಹಾಲು ಪರೀಕ್ಷಕಿ ಶಾರದಮ್ಮ ಸೇರಿದಂತೆ ಇತರರು ಹಾಜರಿದ್ದರು.
 ವರದಿ,ರಾಜು ಜಿ ಪಿ ಕಿಕ್ಕೇರಿ

What's Your Reaction?

like

dislike

love

funny

angry

sad

wow