ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಮಕ್ಕಳ ಬೇಸಿಗೆ ಶಿಬಿರ ವರದಾನವಾಗಿವೆ. ಡಾ.ಮಾದೇಶ್ ಗುರೂಜಿ

ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಮಕ್ಕಳ ಬೇಸಿಗೆ ಶಿಬಿರ ವರದಾನವಾಗಿವೆ. ಡಾ.ಮಾದೇಶ್ ಗುರೂಜಿ

ಮಕ್ಕಳ ಸಮಗ್ರವಾದ ವ್ಯಕ್ತಿತ್ವ ವಿಕಸನಕ್ಕೆ ಮಕ್ಕಳ

ಬೇಸಿಗೆ ಶಿಬಿರಗಳು ವರದಾನವಾಗಿವೆ ಎಂದು ದೇವರೂರಿನ ಮಾನವಧರ್ಮ ಪೀಠದ ಪೀಠಾಧ್ಯಕ್ಷರಾದ ಸನಾತನ ಧರ್ಮರತ್ನಾಕರ ಡಾ.ಮಾದೇಶ್ ಗುರೂಜಿ ಹೇಳಿದರು.

ಅವರು ಕೃಷ್ಣರಾಜಪೇಟೆ ತಾಲೂಕಿನ ಬೆಡದಹಳ್ಳಿಯ

ಪಂಚಭೂತೇಶ್ವರ ಮಠದ ಆವರಣದಲ್ಲಿ ಮಂಡ್ಯ ಜಿಲ್ಲಾ ಭಾರತ ಸೇವಾ ದಳದ ಸಂಯುಕ್ತಾಶ್ರಯದಲ್ಲಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ೩೦ ದಿನಗಳ ವಸತಿ ಸಹಿತ ಉಚಿತ ಮಕ್ಕಳ ಬೇಸಿಗೆ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ರಜಾ ದಿನಗಳಲ್ಲಿ ವಿಶೇಷ ಮಕ್ಕಳ ಬೇಸಿಗೆ

ಶಿಬಿರವನ್ನು ರೂಪಿಸಿ ಪಠ್ಯದ ಜೊತೆಗೆ ಸಾಂಸ್ಕೃತಿಕ

ಚಟುವಟಿಕೆಗಳು, ಆಟೋಟ, ಕರಾಟೆ, ಯೋಗ, ಧ್ಯಾನ,

ಚಿತ್ರಕಲೆ, ಕ್ರಾಫ್ಟ್, ಭಾಷಣ ಸ್ಪರ್ಧೆ, ಭರತನಾಟ್ಯ, ಜಾನಪದ

ಗೀತ ಗಾಯನ, ಕಥೆ ಹೇಳುವುದು, ದೇವಾಲಯಗಳ

ವೀಕ್ಷಣೆ, ವಿಜ್ಞಾನ ಆವಿಷ್ಕಾರ, ಓರಿಗಾಮಿ ಸೇರಿದಂತೆ ಗ್ರಾಮೀಣ ಸೊಗಡಿನ ಕ್ರೀಡೆಗಳ ಬಗ್ಗೆ ವಿಶೇಷ ತರಭೇತಿ

ನೀಡುತ್ತಿರುವುದರಿಂದ ಮಕ್ಕಳ ವ್ಯಕ್ತಿತ್ವವು ಸಮಗ್ರವಾಗಿ

ಅಭಿವೃದ್ಧಿಯಾಗುತ್ತದೆ ಆದ್ದರಿಂದ ಭಾರತ ಸೇವಾದಳದ

ಮಂಡ್ಯಜಿಲ್ಲಾ ಶಾಖೆಯ ಆಡಳಿತ ಮಂಡಳಿಗೆ

ಧನ್ಯವಾದಗಳನ್ನು ಸಮರ್ಪಿಸುವುದಾಗಿ ಡಾ.ಮಾದೇಶ್ ಗುರೂಜಿ

ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ

ಮನ್‌ಮುಲ್ ನಿರ್ದೇಶಕ ಡಾಲುರವಿ ಮಾತನಾಡಿ ನಾಲ್ಕು ಗೋಡೆಗಳ ನಡುವೆ ಬಂದಿಗಳಾಗಿ ಸದಾ ಕಾಲವೂ ಪುಸ್ತಕ, ಓದು ಎಂಬ

ಒತ್ತಡದಿಂದ ಮುಕ್ತರಾಗಿ ಮಕ್ಕಳು ತಮ್ಮ ಸ್ನೇಹಿತರೊಂದಿಗೆ

ಆಟವಾಡಿಕೊಂಡು ಸಂತೋಷದಿಂದ ಮುಕ್ತವಾಗಿ ಕಲಿಕೆಗೆ ಮುಂದಾಗಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ. ಮಕ್ಕಳು ತಮ್ಮಲ್ಲಿ ಸುಪ್ತವಾಗಿ ರುವ ಪ್ರತಿಭೆಯನ್ನು ಹೊರಚೆಲ್ಲಲು ಶಿಬಿರವು ಸಹಕಾರಿಯಾಗಿರುವ ಕಾರಣ ಮಕ್ಕಳು ಮುಕ್ತವಾಗಿ

ತಮ್ಮ ಸಾಮರ್ಥ್ಯವನ್ನು ಹೊರಚೆಲ್ಲಲು ಶಿಬಿರ ನೆರವಾಗುತ್ತದೆ. ಮಕ್ಕಳು ತಮ್ಮ ವ್ಯಕ್ತಿತ್ವ ಹಾಗೂ ಸೃಜನಶೀಲತೆ ಯನ್ನು ಬೆಳೆಸಿಕೊಳ್ಳುವ ಜೊತೆಗೆ ತಮ್ಮ ಆರೋಗ್ಯದ ಬಗ್ಗೆಯೂ

ಹೆಚ್ಚಿನ ಕಾಳಜಿ ವಹಿಸಬೇಕು. ಈ ಬಗ್ಗೆ ಶಿಬಿರದ ಆಯೋಜಕರು ನಿಗಾ ವಹಿಸಬೇಕು ಎಂದು ಡಾಲುರವಿ ಕರೆ ನೀಡಿದರು.

ತೆಂಡೇಕೆರೆ ಬಾಳೆಹೊನ್ನೂರು ಶಾಖಾಮಠದ

ಪೀಠಾಧಿಪತಿಗಳಾದ ಶ್ರೀ ಗಂಗಾಧರಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಮೊಗ್ಗಿನಂತಿರುವ ಮಕ್ಕಳ ಮನಸ್ಸು ಹೂವಿನಂತೆ ಅರಳುವಂತೆ ಮಾಡಲು ಬೇಸಿಗೆ ಶಿಬಿರವು ನೆರವಾಗಲಿದ್ದು ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳು ನೀಡುವ ವಿಚಾರ ಹಾಗೂ ಮಾರ್ಗದರ್ಶನವು ಮಕ್ಕಳ ವ್ಯಕ್ತಿತ್ವವು ಸಮಗ್ರವಾಗಿ ವಿಕಸನಗೊಳ್ಳುವಂತೆ ಮಾಡುತ್ತದೆ. ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಶಿಲ್ಪಿಗಳಾದ್ದರಿಂದ ಮಕ್ಕಳು ಹೊಸ ವಿಚಾರಗಳನ್ನು ಕಲಿಯುವ ಮೂಲಕ ಸಾಧನೆ ಮಾಡಲು ಸಹಾಯವಾಗಲಿದೆ. ಮಕ್ಕಳಲ್ಲಿ ರಾಷ್ಟ್ರಪ್ರೇಮ ಮತ್ತು ರಾಷ್ಟ್ರ ಭಕ್ತಿಯನ್ನು ತುಂಬುವ ವಿಚಾರಗಳು ಶಿಬಿರದಲ್ಲಿ ಮಕ್ಕಳಿಗೆ ದೊರೆಯುವುದರಿಂದ ಮಕ್ಕಳು ಅದ್ಭುತವಾದ ಸಾಧನೆ ಮಾಡಲು ಸಹಾಯವಾಗಲಿದೆ. ಮಕ್ಕಳು ತಮ್ಮ ತಂದೆ ತಾಯಿಗಳು ಹಾಗೂ ಗುರು ಹಿರಿಯರಿಗೆ ಕೀರ್ತಿ ತರುವ ಮಕ್ಕಳಾಗಿ ಹೊರಹೊಮ್ಮವ ಮೂಲಕ ಸಾಧನೆ ಮಾಡಬೇಕು ಎಂದು ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ಸಾಂಸ್ಕೃತಿಕ ಸಂಘಟಕ ವೇದಬ್ರಹ್ಮ ಶ್ರೀ.ಗೋಪಾಲಕೃಷ್ಣ

ಅವಧಾನಿಗಳು, ಸಮಾಜಸೇವಕ ಮೊಟ್ಟೆಮಂಜು, ತಾಲ್ಲೂಕು

ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಸಂಪನ್ಮೂಲ ಶಿಕ್ಷಕ ಮಹೇಶ್, ಯೋಗ ಮಾರ್ಗದರ್ಶಿ ಶಿಕ್ಷಕಿ ಸೌಮ್ಯ, ಬೆಡದಹಳ್ಳಿ

ಪಂಚಭೂತೇಶ್ವರ ಮಠದ ಕಾರ್ಯದರ್ಶಿ ಕಾಂತರಾಜು,ಪತ್ರಕರ್ತ ಕಾಡುಮೆಣಸ ಚಂದ್ರು ಕಾರ್ಯಕ್ರಮದಲ್ಲಿ

ಭಾಗವಹಿಸಿ ಮಾತನಾಡಿದರು.

ಬೆಡದಹಳ್ಳಿ ಪಂಚಭೂತೇಶ್ವರ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ

ರುದ್ರಮುನಿ ಸ್ವಾಮೀಜಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಕ್ಕಳು ಅತಿಥಿಗಳೊಂದಿಗೆ ಸಂವಾದ ನಡೆಸಿ ಹಲವು ವಿಚಾರಗಳ ಮಂಥನ ಮಾಡಿ ಅತಿಥಿಗಳ ಮೆಚ್ಚುಗೆಗೆ ಪಾತ್ರರಾದರು.

 *

ವರದಿ, ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow