*ಮಂಡ್ಯ ಜಿಲ್ಲೆಯ ನಾಗಮಂಗಲದಿಂದ ಕೃಷ್ಣರಾಜಪೇಟೆ ತಾಲೂಕನ್ನು ಪ್ರವೇಶಿಸಿದ ಕನ್ನಡ ರಥಕ್ಕೆ ಭವ್ಯವಾಗಿ ಸ್ವಾಗತ ನೀಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಹಾಗೂ ತಾಲೂಕು ಆಡಳಿತ*.

*ಮಂಡ್ಯ ಜಿಲ್ಲೆಯ ನಾಗಮಂಗಲದಿಂದ ಕೃಷ್ಣರಾಜಪೇಟೆ ತಾಲೂಕನ್ನು ಪ್ರವೇಶಿಸಿದ ಕನ್ನಡ ರಥಕ್ಕೆ ಭವ್ಯವಾಗಿ ಸ್ವಾಗತ ನೀಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಹಾಗೂ ತಾಲೂಕು ಆಡಳಿತ*.

ಡಿಸೆಂಬರ್ 20, 21 ಹಾಗೂ 22 ರಂದು ಮಂಡ್ಯ ನಗರದಲ್ಲಿ ನಡೆಯುತ್ತಿರುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲಾಧ್ಯಂತ ಸಂಚರಿಸುತ್ತಿರುವ ಕನ್ನಡ ಜಾಗೃತಿ ರಥವು ಇಂದು ನಾಗಮಂಗಲ ತಾಲೂಕಿನ ಗಡಿ ಗ್ರಾಮವಾದ ಹೊನ್ನಾವರದ ಮೂಲಕ ಕೃಷ್ಣರಾಜಪೇಟೆ ತಾಲೂಕನ್ನು ಪ್ರವೇಶಿಸಿತು. 

ಕೆ.ಆರ್.ಪೇಟೆ ಪುರಸಭೆ ಮುಖ್ಯಾಧಿಕಾರಿ ನಟರಾಜ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣ ಚಂದ್ರ ತೇಜಸ್ವಿ, ಸಂತೆಬಾಚಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಗಳಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹೃದಯಸ್ಪರ್ಶಯಾಗಿ ಬರಮಾಡಿಕೊಂಡರು. ಮಂಡ್ಯ ಜಿಲ್ಲೆಯಲ್ಲಿ ಕಳೆದ 30ವರ್ಷಗಳ ನಂತರ ಮತ್ತೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕನ್ನಡದ ನುಡಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುವ ಜೊತೆಗೆ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿದಿನವೂ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕನ್ನಡದ ಜಾತ್ರೆಗೆ ವಿಶೇಷವಾದ ಕಳೆಯನ್ನು ತಂದುಕೊಡಬೇಕು ಎಂದು ಪೂರ್ಣಚಂದ್ರ ತೇಜಸ್ವಿ ಕೈಮುಗಿದು ಮನವಿ ಮಾಡಿದರು.

ಕನ್ನಡ ರಥದ ಸ್ವಾಗತ ಸಮಾರಂಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ನಟರಾಜ್, ಕಸಾಪ ಉಪಾಧ್ಯಕ್ಷೆ ಸವಿತರಮೇಶ್, ಕನ್ನಡ ನಾಗರಾಜು, ಸಂತೆಬಾಚಹಳ್ಳಿ ಗ್ರಾಮದ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು, ಅಂಗನವಾಡಿ, ಆಶಾ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಕೆ.ಆರ್.ಪೇಟೆ ತಾಲೂಕಿಗೆ ಪಕ್ಕದ ನಾಗಮಂಗಲ ತಾಲೂಕಿನಿಂದ ಕೆ.ಆರ್.ಪೇಟೆ ತಾಲೂಕಿಗೆ ಆಗಮಿಸಿದ ಕನ್ನಡ ಜ್ಯೋತಿ ರಥವನ್ನು ಸ್ವಾಗತಿಸಲು ಖುದ್ದಾಗಿ ಕ್ಷೇತ್ರದ ಶಾಸಕರು ಇರಲೇ ಬೇಕಾಗಿತ್ತು. ಆದರೆ ಶಾಸಕ ಮಂಜು ಅವರು ಕನ್ನಡ ರಥವನ್ನು ಸ್ವಾಗತಿಸಲು ಗೈರಾಗಿದ್ದು, ಕೆಲವೇ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಮಾತ್ರ ಹಾಜರಾಗಿ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಬಗ್ಗೆ ಹಬ್ಬಿರುವ ವದಂತಿಗಳಿಗೆ ಶಾಸಕ ಮಂಜು ಪುಷ್ಟಿ ನೀಡಿದಂತಿತ್ತು.

*ವರದಿ.ರಾಜು ಜಿ ಪಿ , ಕಿಕ್ಕೇರಿ ಕೃಷ್ಣರಾಜಪೇಟೆ, ಮಂಡ್ಯ*.

What's Your Reaction?

like

dislike

love

funny

angry

sad

wow