*ಕೆ.ಆರ್.ಪೇಟೆ:ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯ ವ್ಯಾಪ್ತಿಯ ಗ್ರಾಮಗಳಿಗೆ ತಾಲೂಕು ದಂಡಾಧಿಕಾರಿ ನಿಸರ್ಗಪ್ರಿಯ ಭೇಟಿನೀಡಿ,ವಿಷಕಾರಿ ಹಾರುವ ಬೂದಿ ಬಗ್ಗೆ ವೀಕ್ಷಿಸಿ ಪರಿಶೀಲನೆ ನಡೆಸಿದರು.*

*ಕೆ.ಆರ್.ಪೇಟೆ:ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯ ವ್ಯಾಪ್ತಿಯ ಗ್ರಾಮಗಳಿಗೆ ತಾಲೂಕು ದಂಡಾಧಿಕಾರಿ ನಿಸರ್ಗಪ್ರಿಯ ಭೇಟಿನೀಡಿ,ವಿಷಕಾರಿ ಹಾರುವ ಬೂದಿ ಬಗ್ಗೆ ವೀಕ್ಷಿಸಿ ಪರಿಶೀಲನೆ ನಡೆಸಿದರು.*

ತಾಲೂಕಿನ ಕಸಬಾ ಹೋಬಳಿಯ ರೈತರ ಜೀವನಾಡಿ ಹೇಮಾವತಿ ನದಿ ಸಮೀಪವಿರುವ ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆ ಸುತ್ತಮುತ್ತಲಿನಲ್ಲಿರುವ ಗ್ರಾಮಗಳಿಗೆ ಹಾರುವ ಬೂದಿ ಭಾಗ್ಯ ನೀಡುತ್ತಿದೆ.

 ಈ ವಿಷಕಾರಿ ಹಾರುವ ಬೂದಿಯಿಂದ ನಮ್ಮ ಆರೋಗ್ಯದ ಮೇಲೆ ಮತ್ತು ರೈತರು ಬೆಳೆಯುವ ಫಸಲು,ಪರಿಸರದ ಮೇಲೆ ಮಾಲಿನ್ಯ ಎದುರಾಗುತ್ತಿದೆ ಎಂದು ಸ್ಥಳೀಯ ಸಾರ್ವಜನಿಕರು ಮತ್ತು ರೈತ ಮುಖಂಡರು ಹಲವಾರು ಬಾರಿ ಗಂಭೀರ ಆರೋಪದ ಹಿನ್ನೆಲೆಯಲ್ಲಿ. ಮಾಕವಳ್ಳಿ, ಕರೋಟಿ,ಹೆಗ್ಗಡಹಳ್ಳಿ, ಗ್ರಾಮಗಳಿಗೆ ತಹಶೀಲ್ದಾರ್ ನಿಸರ್ಗಪ್ರಿಯ ಇಂದು ಭೇಟಿ ನೀಡಿ ಕಾರ್ಖಾನೆ ಸುತ್ತಮುತ್ತಲಿನ ರೈತ ಬೆಳೆದ ಅಡಕೆ.ತೆಂಗು.ರಾಗಿ.ಮೆಕ್ಕೆಜೋಳ. ಬಾಳೆ ಸೇರಿದಂತೆ ಮುಂತಾದ ಪಸಲು ವೀಕ್ಷಣೆ ಮಾಡುತ್ತಿರುವ ಸಂದರ್ಭದಲ್ಲೆ ಸ್ಥಳೀಯ ಸಾರ್ವಜನಿಕರು 20 ವರ್ಷಗಳಿಂದ ಕಾರ್ಖಾನೆ ವಿಷಕಾರಿ ಹಾರುವ ಬೂದಿ ಮತ್ತು ದುರ್ವಾಸನೆಯಿಂದ ಬೇಸತ್ತು ಜೀವನವೇ ಜುಗುಪ್ಸೆಯಾಗಿದೆ ಇಂತಹ ವ್ಯವಸ್ಥೆಯಿಂದ ಮುಕ್ತಿ ಯಾವಾಗ ಎಂದು ಪ್ರಾರ್ಥಿಸುತ್ತಿರುವ ಸಂದರ್ಭದಲ್ಲಿ ಕೋರಮಂಡಲ ಸಕ್ಕರೆ ಕಾರ್ಖಾನೆ ಮದ್ಯಸಾರ ಹಾಗೂ ಎಥೆನಾಲ್ ಘಟಕ ಸ್ಥಾಪಿಸಲು ಚಿಂತಿಸುತ್ತಿರುವುದು ಈ ಭಾಗದ ರೈತರ ಮರಣ ಶಾಸನ ಕಟ್ಟಿಟ್ಟ ಬುತ್ತಿ ದಯಮಾಡಿ ಇಂತಹ ಅಪಾಯಕಾರಿ ಘಟಕ ಹಾಗೂ ವಿಷಕರಿ ಬೂದಿಯಿಂದ ಮುಕ್ತಿ ದೊರಕಿಸಿಕೊಡಿ ಎಂದು ಸಾರ್ವಜನಿಕರು ಮನವಿ ಮಾಡಿದರು.ಸ್ಥಳ ಪರಿಶೀಲಿಸಿದ ತಾಲೂಕು ದಂಡಾಧಿಕಾರಿ ನಿಸರ್ಗಪ್ರಿಯ ಇಲ್ಲಿ ನಡೆಯುತ್ತಿರುವ ವಾಸ್ತವದ ಬಗ್ಗೆ ಸಂಬಂಧಪಟ್ಟ ಇಲಾಖೆ ಸೂಚಿಸಿ ಮತ್ತು ನಮ್ಮ ಮೇಲಾಧಿಕಾರಿಗಳಿಗೆ ಪ್ರಾಮಾಣಿಕವಾಗಿ ವರದಿ ಸಲ್ಲಿಸುತ್ತೇನೆ ಎಂದು ರೈತರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ರೈತಪರ ಹೋರಾಟಗಾರ ಕರೋಟಿ ತಮ್ಮಯ್ಯ, ಮಾಕವಳ್ಳಿ ದೇವರಸೇಗೌಡ,ಕರೋಟಿ ಶಂಕರ್, ಮಾಕವಳ್ಳಿ ಚಿನ್ನಸ್ವಾಮಿ,ಆನಂದ್,ಯುವ ಮುಖಂಡ ಚೆಲುವರಾಜು, ಹರೀಶ್, ಕೇಶವ್, ಸ್ವಾಮಿ, ಸೇರಿದಂತೆ ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow