*ಕೆ.ಆರ್.ಪೇಟೆ: ಕನ್ನಡ ರಾಜ್ಯೋತ್ಸವದ ಆಚರಣೆ ಮಾಡಲು ಅಡ್ಡಿ ಪಡಿಸಿದ ಮೆಗಾ ಫುಡ್ ಫ್ಯಾಕ್ಟರಿಯ ವ್ಯವಸ್ಥಾಪಕರಿಗೆ ಕನ್ನಡ ಪಾಠ ಕಲಿಸಿದ ಕರುನಾಡು ಯುವಜನ ವೇದಿಕೆ..,*

*ಕೆ.ಆರ್.ಪೇಟೆ: ಕನ್ನಡ ರಾಜ್ಯೋತ್ಸವದ ಆಚರಣೆ ಮಾಡಲು ಅಡ್ಡಿ ಪಡಿಸಿದ ಮೆಗಾ ಫುಡ್ ಫ್ಯಾಕ್ಟರಿಯ ವ್ಯವಸ್ಥಾಪಕರಿಗೆ ಕನ್ನಡ ಪಾಠ ಕಲಿಸಿದ ಕರುನಾಡು ಯುವಜನ ವೇದಿಕೆ..,*

ಕೆ.ಆರ್.ಪೇಟೆ ತಾಲೋಕಿನ ಬಲ್ಲೇನಹಳ್ಳಿ ಬಳಿಯಲ್ಲಿರುವ ಫೇವರಿಜ್ ಇನ್ ಫ್ರಾ ಪ್ರೈವೇಟ್ ಲಿಮಿಟೆಡ್ ಮೆಗಾ ಫುಡ್ ಪಾರ್ಕ್ ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಮೀನಾಮೇಷ ಮಾಡುತ್ತಿದ್ದ ಮ್ಯಾನೇಜರ್ ಹಾಗೂ ವ್ಯವಸ್ಥಾಪಕರ ವಿರುದ್ಧ ಕರುನಾಡು ಯುವಜನ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್.ವಿ, ಜಿಲ್ಲಾಧ್ಯಕ್ಷರಾದ ಎಸ್.ರವಿ, ತಾಲ್ಲೋಕು ಅಧ್ಯಕ್ಷರಾದ ಯುವರಾಜ್ ರವರ ನೇತೃತ್ವದಲ್ಲಿ ಧರಣಿ ನೆಡೆಸಲಾಗಿತು.

ಈ ಘಟನೆ ತಿಳಿದು 

ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಪೊಲೀಸರಾದ ಜಗದೀಶ್ ರವರು ಪ್ರತಿಭಟನೆಕಾರರನ್ನು ಮನವೊಲಿಸಿ ನವೆಂಬರ್.೧೫ ರಂದು ಪ್ಯಾಕ್ಟರಿ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಒಪ್ಪಿಗೆ ನೀಡಿದ ಮೇಲೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್.ವಿ,ಜಿಲ್ಲಾ ಅಧ್ಯಕ್ಷರಾದ ಎಸ್.ರವಿ, ತಾಲ್ಲೋಕು ಅಧ್ಯಕ್ಷರಾದ ಯುವರಾಜ್, ಸುನೀಲ್ ಕುಮಾರ್, ಸುಂದರೇಶ್, ಹೇಮಂತ್.ಜೆ.ಸಿ, ಶ್ಯಾಮ್ ಸುಂದರ್, ಪ್ರಮೋದ್ , ದಿನೇಶ್,ವಿನೋದ್, ಯೋಗೇಶ್, ಧರ್ಮೇಶ್ , ದಾಸೇಗೌಡ,ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಸಾಯಿ ಕುಮಾರ್ ಸೇರಿದಂತೆ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು,

 *ವರದಿ,ರಾಜು ಜಿಪಿ ಕಿಕ್ಕೇರಿ*

What's Your Reaction?

like

dislike

love

funny

angry

sad

wow