*ಚಾರ್ಲ್ಸ್ ಬ್ಯಾಬೇಜ್ ರವರ ಸ್ಮರಣಾರ್ಥ ಕಂಪ್ಯೂಟರ್ ಆಪರೇಟರ್ ಗಳ ದಿನಾಚರಣೆ*
ಕೆ.ಆರ್.ಪೇಟೆ : ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಕ್ಲರ್ಕ್-ಕಂ ಡಾಟಾ ಎಂಟ್ರಿ ಆಪರೇಟರ್ ಗಳ ಕ್ಷೇಮಾಭಿವೃದ್ಧಿ ಸಂಘ ,ಕೃಷ್ಣರಾಜಪೇಟೆ ಘಟಕದ ವತಿಯಿಂದ ಕಂಪ್ಯೂಟರ್ ಪಿತಾಮಹರಾದ ಚಾರ್ಲ್ಸ್ ಬ್ಯಾಬೇಜ್ ರವರ ಸ್ಮರಣಾರ್ಥ ಹಾಗೂ ಹುಟ್ಟುಹಬ್ಬದ ಪ್ರಯುಕ್ತ ಕಂಪ್ಯೂಟರ್ ಆಪರೇಟರ್ ಗಳ ದಿನಾಚರಣೆಯನ್ನು ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ನಂತರ ಮಾತನಾಡಿದ ಉಮಾಶಂಕರ್.ಸಹಾಯಕ ನಿರ್ದೇಶಕರು (ಗ್ರಾ.ಉ)ರವರು ಸಾರ್ವಜನಿಕ ಸೇವೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ರವರ ಪಾತ್ರ ಹಿರಿದಾಗಿದ್ದು ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಲು ನೈಪುಣ್ಯರಾಗಿರುವ ಡಿ.ಇ.ಓ ರವರನ್ನ ಚಾರ್ಲ್ಸ್ ಬ್ಯಾಬೇಜ್ ರವರ ಹಿನ್ನೆಲೆಯಲ್ಲಿ ಸ್ಮರಿಸಲು ಅವಕಾಶ ನೀಡಿರುವುದು ಸಂತೋಷದಾಯಕವಾಗಿದೆ ಎಂದು ತಿಳಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀನಿವಾಸ್. ತಾಲ್ಲೂಕು
ಯೋಜನಾಧಿಕಾರಿಗಳು ಮಾತನಾಡಿ ಸಾಮಾಜಿಕ ಸೇವಾವಲಯದಲ್ಲಿ ಮತ್ತು ಸರ್ಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಡಿ.ಇ.ಓ ರವರ ಶ್ರಮ ಶ್ಲಾಘನೀಯವಾದುದು ಡಿಜಿಟಲ್ ಯುಗದಲ್ಲಿ ಮತ್ತು ಆಡಳಿತ ಯಂತ್ರದ ಚಾಲನೆಯಲ್ಲಿ ಡಿ.ಇ.ಓ.ಗಳ ಅವಶ್ಯಕತೆ ಪ್ರಮುಖವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಲರ್ಕ್-ಕಂ ಡಾಟಾ ಎಂಟ್ರಿ ಆಪರೇಟರ್ ಸಂಘದ ಜಿಲ್ಲಾಧ್ಯಕ್ಷರಾದ ಚರಣ್ ರಾಜ್ ಎಂ.ಎಸ್, ತಾಲ್ಲೂಕು ಅಧ್ಯಕ್ಷರಾದ ಎಂ.ಎಂ.ಅಶೋಕ್ ರವರು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯ ಡಿ.ಇ.ಓರವರು ಹಾಜರಿದ್ದರು. ಇದೇ ವೇಳೆ ತಾಲ್ಲೂಕು ನರೇಗಾ ಯೋಜನೆಯ ತಾಂತ್ರಿಕ ಸಂಯೋಜಕರಾದ ಹೇಮಂತ್.ಎಂ.ಪಿ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಸಿಬ್ಬಂದಿಗಳು ಮತ್ತು ಎನ್.ಆರ್.ಎಲ್.ಎಂ ಸಿಬ್ಬಂದಿಗಳು ಶುಭ ಕೋರಿದರು.
What's Your Reaction?