*ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿ., ಮಂಡ್ಯ, ಚುನಾವಣೆ ನಿಗದಿಯಾಗಿದ್ದು ಯಾರು ನಾಮಪತ್ರ ಸಲ್ಲಿಸದ ಕಾರಣ ಉಪಾಧ್ಯಕ್ಷರಾಗಿ ಎಆರ್ ರಾಜ ನಾಯಕ ಅವಿರೋಧ ಆಯ್ಕೆ*

*ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿ., ಮಂಡ್ಯ, ಚುನಾವಣೆ ನಿಗದಿಯಾಗಿದ್ದು ಯಾರು ನಾಮಪತ್ರ ಸಲ್ಲಿಸದ ಕಾರಣ  ಉಪಾಧ್ಯಕ್ಷರಾಗಿ ಎಆರ್ ರಾಜ ನಾಯಕ  ಅವಿರೋಧ ಆಯ್ಕೆ*

ಎಆರ್ ರಾಜ ನಾಯಕ ರವರನ್ನು ಕೃಷ್ಣರಾಜಪೇಟೆ ಪ್ರವಾಸಿ ಮಂದಿರದಲ್ಲಿ ಕೃಷ್ಣರಾಜಪೇಟೆ ತಾಲೂಕು ನಾಯಕ ಸಮಾಜದ ಪರವಾಗಿ ಅಕ್ಕಿಹೆಬ್ಬಾಳು ಗ್ರಾಮದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

 ತಾಲೂಕು ನಾಯಕ ಸಮಾಜದ ಪ್ರಧಾನ ಕಾರ್ಯದರ್ಶಿಗಳಾದ ರಾಜು ಜಿ ಪಿ ರವರು ಮಾತನಾಡಿ ಸಾರ್ವಜನಿಕ ಬದುಕಿನಲ್ಲಿ ಸಮಾಜಮುಖಿ ಕಾರ್ಯವನ್ನು ಮಾಡಿಕೊಂಡು ನಮ್ಮ ಸಮಾಜದಲ್ಲಿ ತಾಲೂಕು ನಾಯಕ ಸಂಘದ ಅಧ್ಯಕ್ಷರಾಗಿ ಸಮಾಜಮುಖಿ ಕಾರ್ಯವನ್ನು ಮಾಡಿದ್ದ ಹಲವು ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಈ ದಿನ ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶ ನಾಲಯ ನಿ.. ಮಂಡ್ಯ ಸಂಘದಲ್ಲಿ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿ ನಮ್ಮ ಸಮಾಜದ ಎ ಆರ್ ರಾಜನಾಯಕರವರಿಗೆ ನೀಡಿರುವುದಕ್ಕೆ ಸಂಘದ ಅಧ್ಯಕ್ಷರಿಗೆ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳು ಮೊದಲದಾಗಿ ತಿಳಿಸುತ್ತಾ ನಮ್ಮ ಸಮಾಜದ ಪರವಾಗಿ ಹಾಗೂ ನನ್ನ ವೈಯಕ್ತಿಕವಾಗಿ ರಾಜನಾಯಕರವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಈ ಮೂಲಕ ಅರ್ಪಿಸುತ್ತಿದ್ದೇವೆ ಎಂದು ತಿಳಿಸಿದರು.

 ಅಕ್ಕಿಹೆ ಬ್ಬಾಳು ವಾಸು ಮಾತನಾಡಿ ನಮ್ಮ ಗ್ರಾಮದ ಎ ಆರ್ ರಾಜನಾಯಕರವರನ್ನು ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿ. ಮಂಡ್ಯ ಸಂಘದ ಉಪಾಧ್ಯಕ್ಷರಾಗಿ ವಿರೋಧವಾಗಿ ಆಯ್ಕೆ ಮಾಡಿ ನಮ್ಮ ಗ್ರಾಮಕ್ಕೆ ಒಂದು ಸ್ಥಾನವನ್ನು ನೀಡಿರುವುದು ನಮಗೆ ಬಹಳ ಖುಷಿಯನ್ನು ನೀಡಿದೆ ಈ ಸ್ಥಾನದಲ್ಲಿ ಉತ್ತಮವಾಗಿ ಸೇವೆ ಮಾಡುವ ಮೂಲಕ ನಿಮಗೆ ಹೀಗೆ ಇನ್ನೂ ಮುಂದೆ ಉತ್ತಮ ಹುದ್ದೆಗಳು ಸಿಗಲಿ ಎಂದು ಈ ಮೂಲಕ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ತಾಲೂಕು ನಾಯಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತರು ಆದ ರಾಜು ಜಿ ಪಿ ರವರು. ವಾಸು. ಮಹೇಶ್ ನಾಯಕ. ನರಸಿಂಹ ನಾಯಕ. ಹಾಗೂ ಸಮಾಜದ ಮುಖಂಡರು ಸ್ನೇಹಿತರು ಉಪಸ್ಥಿತರಿದ್ದರು.

 *ವರದಿ ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow