*ಕೃಷ್ಣರಾಜಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿ ಕೇಂದ್ರದಲ್ಲಿ ಗೆಳೆಯರ ಬಳಗ ಯುವಕ ಸಂಘದ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದ 66ನೇ ವರ್ಷದ ಅದ್ದೂರಿ ಗಣೇಶೋತ್ಸವ ಸಮಾರಂಭ*

*ಕೃಷ್ಣರಾಜಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿ ಕೇಂದ್ರದಲ್ಲಿ ಗೆಳೆಯರ ಬಳಗ ಯುವಕ ಸಂಘದ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದ 66ನೇ ವರ್ಷದ ಅದ್ದೂರಿ ಗಣೇಶೋತ್ಸವ ಸಮಾರಂಭ*

ಬೆಡದಹಳ್ಳಿ ಶ್ರೀ ಪಂಚಭೂತೇ ಶ್ವರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಹಾಗೂ ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ 66ನೇ ವರ್ಷದ ಗಣೇಶೋತ್ಸವ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಶಾಸಕ ಹೆಚ್.ಟಿ.ಮಂಜು, ಸಮಾಜ ಸೇವಕ ಮಲ್ಲಿಕಾರ್ಜುನ, ಮನಮುಲ್ ನಿರ್ದೇಶಕ ಡಾಲು ರವಿ, ಸದ್ಭಾವನಾ ಸೇವಾ ಟ್ರಸ್ಟ್ ಅಧ್ಯಕ್ಷ ಅಘಲಯ ವಿಜಯ್ ಕುಮಾರ್, ಹಿರಿದೇವಮ್ಮ ಟ್ರೇಡರ್ಸ್ ಭಾರತೀಪುರ ಡಾ. ಪುಟ್ಟಣ್ಣ, ಟಾಟಾ ಕಂಪನಿ ಪುನೀತ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಗಳ, ದಿವಿ ಕುಮಾರ್, ಮೋಹನ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಗೆಳೆಯರ ಬಳಗದ ಸಂಸ್ಥಾಪಕ ಅಧ್ಯಕ್ಷ ಬಿ.ಶಿವಪ್ಪ, ಗೌರವ ಅಧ್ಯಕ್ಷ ಸೋಮೇಶ್, ಅಧ್ಯಕ್ಷ ಗೌಡ ಜಯಕುಮಾರ್ ಹಾಗೂ ಕಾರ್ಯದರ್ಶಿ ಕೃಷ್ಣ, ಚನ್ನರಾಯಪಟ್ಟಣದ ಪತ್ರಕರ್ತ ನಾಗೇಂದ್ರ ನಡೆಸಿಕೊಟ್ಟರು.

ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ವಿವಿಧ ಸಾಧಕರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿ ಗಣೇಶೋತ್ಸವ ನಮ್ಮ ಸಂಸ್ಕೃತಿಯ ಸಂಕೇತವಾಗಿದ್ದು ಸಂತೆಬಾಚಹಳ್ಳಿಯ ಗಣೇಶೋತ್ಸವ ತನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವೈಭವದಿಂದ ರಾಜ್ಯದಲ್ಲಿಯೇ ಹೆಸರು ವಾಸಿಯಾಗಿದೆ. ಕಳೆದ 66 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಗಣೇಶೋತ್ಸವ ದಲ್ಲಿ ರಾತ್ರಿಯಿಡಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾವಿರಾರು ಜನರು ತಮ್ಮ ಮಕ್ಕಳು ಹಾಗೂ ಮರಿ ಮಕ್ಕಳೊಂದಿಗೆ ಕುಳಿತು ವೀಕ್ಷಿಸುವುದು ವಿಶೇಷವಾಗಿದೆ. ನಾನು ಹಾಲು ಒಕ್ಕೂಟದ ನಿರ್ದೇಶಕನಾಗಿ ಹೈನುಗಾರಿಕೆಗೆ ಒತ್ತು ನೀಡಿ ಗ್ರಾಮೀಣ ಪ್ರದೇಶದ ಜನರು ಸ್ವಾವಲಂಭಿ ಜೀವನ ನಡೆಸಲು ಒತ್ತಾಸೆ ನೀಡಿ ಕೆಲಸ ಮಾಡುತ್ತಿದ್ದೇನೆ. ಹೈನುಗಾರಿಕೆಯ ಮೂಲಕ ಕ್ಷೀರ ಕ್ರಾಂತಿಯಾಗಿ ರೈತಾಪಿ ವರ್ಗದ ಜನರು ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಡಾಲು ರವಿ ಹೇಳಿದರು.

ಇದೇ ಸಂದರ್ಭದಲ್ಲಿ ಸಿಂಹ ರೂಪಿಣಿ ಕನ್ನಡ ಚಲನಚಿತ್ರ ನಾಯಕ ನಟ ಸಾಗರ್ ಹಾಗೂ ಖಳ ನಟ ಸಂತೆಬಾಚಹಳ್ಳಿ ಲೋಹಿತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ರಾತ್ರಿಯಿಡಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು, ತುಮಕೂರಿನ ಜ್ಯೋತಿ ಮೆಲೋಡಿಸ್ ಆರ್ಕೆಸ್ಟ್ರಾ ಹಾಗೂ ಕರ್ನಾಟಕ ಜಾದೂಗಾರ್ ಅಕ್ಕಿಹೆಬ್ಬಾಳು ಅಕ್ಬರ್ ಅವರು ನಡೆಸಿಕೊಟ್ಟ ಜಾದೂ ಕಾರ್ಯಕ್ರಮವು ಜನತೆಯ ಮೆಚ್ಚುಗೆಗೆ ಪಾತ್ರವಾಯಿತು. ಗೆಳೆಯರ ಬಳಗದ ಸಂಸ್ಥಾಪಕ ಅಧ್ಯಕ್ಷ ಶಿವಪ್ಪ ಮಾತನಾಡಿ ಚುನಾಯಿತ ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ಗ್ರಾಮಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿ ಶಿಕ್ಷಣ, ಆರೋಗ್ಯ ಹಾಗೂ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ನನಸು ಮಾಡುವ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ನಾಡಿನ ಖ್ಯಾತ ಜಾನಪದ ಗಾಯಕ ಗಾಮನಹಳ್ಳಿ ಮಹದೇವಸ್ವಾಮಿ, ಉಮೇಶರಾಜು ಸ್ವಾಗತಿಸಿ, ಗೌಡ ಜಯಕುಮಾರ್ ವಂದಿಸಿದರು, ಪುರಸಭೆ ಮಾಜಿ ಸದಸ್ಯರಾದ ಕೆ.ಆರ್.ನೀಲಕಂಠ ಕಾರ್ಯಕ್ರಮ ನಿರೂಪಿಸಿದರು.

*ವರದಿ, ರಾಜು ಜಿ,ಪಿ, ಕಿಕ್ಕೇರಿ ಕೃಷ್ಣರಾಜಪೇಟೆ*

What's Your Reaction?

like

dislike

love

funny

angry

sad

wow