ಕೃಷಿ ಮಹಾವಿದ್ಯಾಲಯ ವಿಸಿ ಫಾರಂ ವತಿಯಿಂದ ಕೃಷಿ ವಸ್ತುಪ್ರದರ್ಶನ

ಕೃಷಿ ಮಹಾವಿದ್ಯಾಲಯ ವಿಸಿ ಫಾರಂ ವತಿಯಿಂದ ಕೃಷಿ ವಸ್ತುಪ್ರದರ್ಶನ

ನವೆಂಬರ್ 8ರಂದು ಕೃಷಿ ಮಹಾವಿದ್ಯಾಲಯ, ವಿ. ಸಿ. ಫಾರಂ ವತಿಯಿಂದ ದೊಡ್ಡಗರುಡನಹಳ್ಳಿ ಗ್ರಾಮದಲ್ಲಿ ಕೃಷಿ ವಸ್ತು ಪ್ರದರ್ಶನ. 

ಅಂತಿಮ ವರ್ಷದ ಬಿ. ಎಸ್ ಸಿ. (ಹಾನರ್ಸ್ ) ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ ಆಗಸ್ಟ್ 12ರಿಂದ ಶುರುವಾಗಿ ನವೆಂಬರ್ ತಿಂಗಳಿನಲ್ಲಿ ಮುಕ್ತಾಯವಾಗಲಿದ್ದು ಇದರ ಅಂಗವಾಗಿ ಮಂಡ್ಯ ತಾಲೂಕಿನ ದೊಡ್ಡಗರುಡನಹಳ್ಳಿ ಗ್ರಾಮದಲ್ಲಿ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ನವೆಂಬರ್ ಎಂಟರಂದು ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರಿನ ಕುಲಪತಿಗಳಾದ ಡಾ. ಎಸ್. ವಿ. ಸುರೇಶ ರವರು ಕೃಷಿ ವಸ್ತು ಪ್ರದರ್ಶನದ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. 

ಡಾ. ಎಚ್. ಎಸ್. ಶಿವರಾಮು, ಸಂಶೋಧನ ನಿರ್ದೇಶಕರು ಮತ್ತು ಡಾ. ವೈ. ಎನ್. ಶಿವಲಿಂಗಯ್ಯ, ವಿಸ್ತರಣಾ ನಿರ್ದೇಶಕರು, ಕೃ. ವಿ. ವಿ, ಬೆಂಗಳೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮವು ದೊಡ್ಡಗರುಡನಹಳ್ಳಿ, ಗಂಟೆಗೌಡನಹಳ್ಳಿ, ಉಪ್ಪರಕನಹಳ್ಳಿ, ಬಿ. ಹೊಸೂರು, ಮುದಗಂದೂರು ಮತ್ತು ಬೊಮ್ಮನಹಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ನಡೆಸಲಾಗುವುದು. ಕೃ. ವಿ. ವಿ. ಬೆಂಗಳೂರಿನ ವಿವಿಧ ತಾಂತ್ರಿಕತೆಗಳನ್ನು ವಿದ್ಯಾರ್ಥಿಗಳು ಮಳಿಗೆಯಲ್ಲಿ ಪ್ರದರ್ಶಿಸಲಿದ್ದಾರೆ.

What's Your Reaction?

like

dislike

love

funny

angry

sad

wow