ಶಿಕ್ಷಕರು ಸಮಾಜದ ಪರಿವರ್ತಕರಾಗಿದ್ದು ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವು ನಿರ್ಣಾಯಕ* *ವಾಗಿದೆ ಎಂದು ಶಾಸಕ ಹೆಚ್.ಟಿ. ಮಂಜು ಹೇಳಿದರು
ಅವರು ಕೆ.ಆರ್.ಪೇಟೆ ಪಟ್ಟಣದ ಶತಮಾನದ ಶಾಲೆಯ(KPS) ಆವರಣದಲ್ಲಿ ತಾಲೂಕು ಆಡಳಿತ, ಶಿಕ್ಷಕರ ದಿನಾಚರಣೆ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಅಜ್ಞಾನದ ಅಂಧಕಾರವನ್ನು ಹೊಡೆಡೋಡಿಸಿ ಅಕ್ಷರ ಜ್ಞಾನದ ಮೂಲಕ ಸಂಸ್ಕಾರ ನೀಡುವ ಶಿಕ್ಷಕರು ವಿದ್ಯಾರ್ಥಿಗಳ
ಅಬ್ಯುದಯವನ್ನು ಕಣ್ಣಾರೆ ಕಂಡು ಸಂಭ್ರಮಿಸುತ್ತಾ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ತುಂಬುತ್ತಾ ಮುನ್ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಅಜ್ಞಾನವನ್ನು ಶಿಕ್ಷಿಸಿ, ತಪ್ಪುಗಳನ್ನು ಕ್ಷಮಿಸಿ ಅಕ್ಷರಗಳ ಮೂಲಕ ಅರಿವಿನ ಜಾಗೃತಿ ಮೂಡಿಸಿ ಮುನ್ನಡೆಸುತ್ತಿರುವ ಶಿಕ್ಷಕರನ್ನು ಗುರುವಿನ ರೂಪದಲ್ಲಿ ಕಂಡು ಗೌರವಿಸುತ್ತಿದ್ದೇವೆ. ಶಿಕ್ಷಕರಾಗಿ ತತ್ವಜ್ಞಾನಿಯಾಗಿ, ರಾಜತಾಂತ್ರಿಕ ನಿಪುಣರಾಗಿ ನಮ್ಮ ದೇಶದ ರಾಷ್ಟ್ರಪತಿಗಳಾಗಿ ಶಿಕ್ಷಕರ ಕೀರ್ತಿಯನ್ನು ಬೆಳಗಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿ ನಿವೃತ್ತ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಿ ಬೀಳ್ಕೊಡುಗೆ ನೀಡುತ್ತಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವ ವಿಚಾರವಾಗಿದೆ ಎಂದು ಶಾಸಕ ಮಂಜು ಅಭಿಮಾನದಿಂದ ಹೇಳಿದರು.
ಶಾಸಕ ಮಂಜು ಅವರ ಪುತ್ರಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ವರ್ಷ ಎಂ.ಗೌಡ ಕಾರ್ಯಕ್ರಮದಲ್ಲಿ ಮಾತನಾಡಿ ಗುರುವಿನ ಸ್ಮರಣೆ ಮಾಡಿ ಭಕ್ತಿ ನಮನ ಸಲ್ಲಿಸಿದರು.
ಬೇಬಿಬೆಟ್ಟದ ಶ್ರೀ ರಾಮ ಯೋಗಿಶ್ವರ ಮಠದ ಶ್ರೀ ಶಿವ ಬಸವ ಸ್ವಾಮೀಜಿ ಮಾತನಾಡಿ ಸಮಾಜದಲ್ಲಿ ಶಿಕ್ಷಕರಿಗೆ ಅಪಾರವಾದ ಗೌರವವಿದೆ. ಶಿಕ್ಷಕರು ಕೇವಲ ಸಂಬಳದ ಹಣಕ್ಕೆ ಆಸೆಪಟ್ಟು ಕೆಲಸ ಮಾಡದೇ ಸಮಾಜ ಪರಿವರ್ತಕರಾಗಿ ಶ್ರದ್ಧಾ ಭಕ್ತಿಯಿಂದ ಪಾಠ ಪ್ರವಚನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿದ್ಯಾರ್ಥಿಗಳ ಮೆಚ್ಚಿನ ಗುರುಗಳಾಗಿ ಹೊರಹೊಮ್ಮವ ಮೂಲಕ ಗುರುಪರಂಪರೆಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಕಿವಿ ಮಾತು ಹೇಳಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮಾ, ತಹಶೀಲ್ದಾರ್ ಜಿ. ಆದರ್ಶ, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ಕ್ಷೇತ್ರ ಸಮನ್ವಯ ಅಧಿಕಾರಿ ಮಂಜುನಾಥ್, ಬಿಸಿಯೂಟ ಸಹಾಯಕ ನಿರ್ದೇಶಕ ಯತೀಶ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಪಿ.ಜೆ.ಕುಮಾರ, ಸಿ.ಟಿ. ಲಕ್ಷ್ಮಣಗೌಡ, ಎಸ್. ಎಂ. ಬಸವರಾಜು, ವಿಜಿ ನಾರಾಯಣ, ಬಿ.ಎಲ್. ಮಂಜುನಾಥ್, ಡಿ.ಪಿ. ವೆಂಕಟೇಗೌಡ, ಡಿ.ಬಿ.ಸತ್ಯ, ಜೆ. ಪ್ರಭುಕುಮಾರ್, ಮೋಹನಕುಮಾರಿ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ವೆಂಕಟೇಶ್, ಗ್ರೇಡ್2 ತಹಶೀಲ್ದಾರ್ ಲೋಕೇಶ್ ಸೇರಿದಂತೆ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
What's Your Reaction?