ಚನ್ನರಾಯಪಟ್ಟಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಸನ ಇವರ ಸಹಯೋಗದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಚನ್ನರಾಯಪಟ್ಟಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಸನ ಇವರ ಸಹಯೋಗದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಚನ್ನರಾಯಪಟ್ಟಣ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನರಾಯಪಟ್ಟಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಸನ ಇವರ ಸಹಯೋಗದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಮಂಜುಳಾ ಎಂ ಕೆ ವಹಿಸಿದರು.

 

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಗುರುರಾಜು ಜೆ.ಎಸ್ ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಕನ್ನಡ ವಿಭಾಗ ನೇರವೇರಿಸಿದರು, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಮಂಜುನಾಥ ಇತಿಹಾಸ ಉಪನ್ಯಾಸಕರು ಸರ್ಕಾರಿ ಪ್ರಥಮ ಕಾಲೇಜು ಬಾಣವಾರ ಇವರು ಅಂಬೇಡ್ಕರ್ ಕಾರ್ಯಕ್ರಮದ ಓದುವಿನ ಬಗ್ಗೆ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಅಂಬೇಡ್ಕರ್ ರವರು ಓದು ಬಹಳ ಅವಶ್ಯಕವಾಗಿದೆ.

ಅವರು ಸಾಕಷ್ಟು ನೋವು ಅವಮಾನಗಳನ್ನ ಅನುಭವಿಸಿದರು ಜ್ಞಾನದಿಂದ ಈಡಿ ಪ್ರಪಂಚವೇ ಒಪ್ಪುವ ವ್ಯಕ್ತಿ ಮತ್ತು ಶಕ್ತಿಯಾದರು.ಅದಕ್ಕಾಗಿ ನಾವು ಡಾ.ಬಿ.ಆರ್ ಅಂಬೇಡ್ಕರರನ್ನ ಓದಬೇಕೆಂದು ತಿಳಿಸಿದರು ಹಾಗೂ ಶ್ರೀ ಬರ್ನಾಡ್ ಸಹಾಯಕ ಪ್ರಾಧ್ಯಾಪಕರು ಆಂಗ್ಲ ವಿಭಾಗ,ಡಾ.ಮುನಿರಾಜು ಇತಿಹಾಸ ವಿಭಾಗ ಜೆ ಎನ್ ಲೋಕೇಶ್ ಸಮಾಜ ಶಾಸ್ತ್ರ ವಿಭಾಗ, ಪ್ರಕಾಶ್ ಕುಮಾರ್ ಸಿ ದೈಹಿಕ ಶಿಕ್ಷಣ ನಿರ್ಧೇಶಕರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಹೆಚ್.ಪಿ ತಾರಾನಾಥ್ ಹಾಗೂ ಲಕ್ಷ್ಮೀ ನರಸಿಂಹಯ್ಯ ಹಾಗೂ ಕಾಲೇಜಿನ ಅಧೀಕ್ಷರಾದ ಕೃಷ್ಣ ಎಕ.ಹೆಚ್ ಉಪನ್ಯಾಸಕ ಮಂಜುನಾಥ್ ವೆಂಕಟೇಶ್ ಚೆಲುವೆಗೌಡ,ಶಚೀಂದ್ರ, ಪದ್ಮರಾಜು.ಡಾ.ದಿನೇಶ್, ಮಲ್ಲಿಕಾರ್ಜುನ ,ಲೋಹಿತ್ ಮುಂತಾದ ಉಪನ್ಯಾಸಕರು ಹಾಜರಿದ್ದರು.

What's Your Reaction?

like

dislike

love

funny

angry

sad

wow