ಕೆ.ಆರ್.ಪೇಟೆ:ಮುಂದಿನ ಐದು ತಿಂಗಳ ಒಳಗೆ ರಾಜ್ಯದಲ್ಲಿರುವ ಕಾಂಗ್ರೇಸ್ ಸರ್ಕಾರ ಯಾವುದೇ ಕಾರಣಕ್ಕೂ ಉಳಿಯುವುದಿಲ್ಲ ಮುರಿದು ಬೀಳುತ್ತದೆ ಇದು ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಕೆ ಆರ್ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೆಳತೂರು ಗ್ರಾಮದಲ್ಲಿ ಶ್ರೀ ಕೋಟೆ ರಂಗನಾಥಸ್ವಾಮಿ ಪುನಃ ಪ್ರತಿಷ್ಠಾ ಜೀರ್ಣೋದ್ಧಾರ ಹಾಗೂ ವಿಮಾನ ಗೋಪುರ ಗರುಡಗಂಭ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದವರು ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಪದ ಜೊತೆಗೆ ಗ್ಯಾರಂಟಿ ಯೋಚನೆಗಳು ಮರೀಚಿಕೆಯಾಗುತ್ತಿದೆ,ನಾನು ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಸರಾಯಿ ಲಾಟರಿ ನಿಲ್ಲಿಸಿ ಬಡ ಕುಟುಂಬ ಉದ್ದಾರಕ್ಕೆ ಶ್ರಮಿಸಿದೆನ್ನೆ,ಪಂಚರತ್ನಮಾಡಿದ ಉದ್ದೇಶ ಗ್ರಾಮೀಣಾ ಮಕ್ಕಳಿಗೆ ಸಿಟಿ ಮಕ್ಕಳಿಗೆ ಸಿಗುವ ಯೋಜನೆ ಮಾಡಲು ರೋಪಿಸಿದ್ದೆ ಪ್ರತಿ ಗ್ರಾಮಪಂಚಾಯಿತಿ ಯೋಜನೆಯಲ್ಲಿ ರೂಪಿಸಿದ್ದು ರೈತರ ಬದುಕು ಹಸನಾಗಿಸಿಕೊಳ್ಳಲು ಕಳೆದ ಚುನಾವಣೆಯಲ್ಲಿ ಪ್ರತಿದಿನ ರಾಜ್ಯಾದ್ಯಂತ ಸುತ್ತಾಡಿದೆ ಆದರೆ ನನಗೆ ಅಶೀರ್ವಾದ ಮಾಡಲಿಲ್ಲ ನನಗೆ ಅದಿಕಾರ ಕೊಟ್ಟಿದ್ದರೆ ಕ್ವಿಂಟಾಲ್ ಗೆ 15000 ಸಾವಿರ ನಿಗದಿ ಮಾಡುತ್ತಿದ್ದೆ ನಿಮ್ಮ ವಿಶ್ವಾಸ ಇರಲಿ ಮುಂಬರುವ ಚುನಾವಣಾ ಸಮಯದಲ್ಲಿ ನೀಡುವ ತಾತ್ಕಾಲಿಕ ಅಮಿಷಗಳಿಗೆ ಬಲಿಯಾಗದೆ ಜಾಗೃತಿಯಿಂದ ಯೋಚಿಸಿ ಮತ ನೀಡಿ,ಓರಿಸ್ಸಾ ದಲ್ಲಿ ಕಾಂಗ್ರೆಸ್ ಎಂಪಿ ಮನೆಯಲ್ಲಿ 300 ಕೋಟಿ ಹಣ ಸೀಜ್ ಅಗಿದೆ, ಪ್ರತಿವರ್ಷ ಸಂಗ್ರಹವಾಗುವ 250 ಸಾವಿರ ಕೋಟಿಯಲ್ಲಿ 25 ಕೋಟಿ ಕಪ್ಪುಹಣ ಸಂಗ್ರಹವಾಗುತ್ತಿದೆ ನಾಡಿನ ಜನತೆಗೆ ದ್ರೋಹ ಮಾಡುವುದಿಲ್ಲ ನಾನು ಮುಖ್ಯಮಂತ್ರಿ ಹಾದಿಯಾಗಿ ಯಾರಿಗೂ ಎದರುವುದಿಲ್ಲ ನಾನು ವಿಧಾನಸೌದಲ್ಲಿ ಟೇಬಲ್ ಕುಟ್ಟಿ ಮಾತನಾಡುತ್ತೆನೆ,ರೈತರು ಸಾಲಕ್ಕೆ ಹೆದರಿ ಅತ್ಮಹತ್ಯೆ ಮಾಡಿಕೊಳ್ಳಬೇಡಿ
ಹೆದರಬೇಡಿ ಒಳ್ಳೆಯ ದಿನಗಳು ಬರುತ್ತವೆ ಕಾವೇರಿ ನೀರಿನ್ನು ಉಳಿಸಲು ಅಗಿಲ್ಲ ಎಂದು ತಂದೆ ದೇವೇಗೌಡರಿಗೆ ನೋವಾಗಿದೆ ಮುಂದಿನ ದಿನಗಳಲ್ಲಿ ನನಗೆ ನಿಮ್ಮ ಸೇವೆಮಾಡೊ ಸ್ವಲ್ಪ ದಿನಗಳಕಾಲ ದೇವರು ನಿಮ್ಮ ಸೇವೆ ಮಾಡಲು ಮರುಜನ್ಮ ನೀಡಿದ್ದಾನೆ, ಎಳನೀರಿಗೆ ಇರುವ ಬೆಲೆ ಕೊಬ್ಬರಿಗೆ ಇಲ್ಲ ಸದನದಲ್ಲಿ ಸರ್ಕಾರವನ್ನು ರೈತರಿಗೆ ಕೊಬ್ವರಿಗೆ ಬೆಂಬಲ ಬೆಲೆ ನೀಡಿ ಎಂದು ಒತ್ತಾಯ ಮಾಡಿರುತ್ತೆನೆ ನಪೆಡ್ ನವರು ಕೊಬ್ಬರಿ ಕೊಂಡು ಕೊಂಡಿದ್ದು ಮಾರಾಟ ಮಾಡುತ್ತಿದ್ದು ಕ್ವಿಂಟಾಲ್ ಗೆ 75000 ಬೆಲೆ ಇದೆ ಕೇಂದ್ರ ಸರ್ಕಾರ 590 ಕೋಟಿ ಬೆಂಬಲ ಬೆಲೆ ನೀಡಿದರು ರಾಜ್ಯ ಸರ್ಕಾರದ ಬೆಂಬಲಬೆಲೆ 80 ಕೋಟಿ ನೀಡುತ್ತಿದೆ ಭತ್ತದ ಬೆಲೆ ಕಡಿಮೆಯಾಗಿದ್ದು 05 ದೇಶಗಳಿಗೆ ಮಾರಾಟ ಮಾಡುತ್ತಿದ್ದು ಈ ವರ್ಷ ಬೆಳೆಯ ಕೊರತೆ ಯಾಗಿದ್ದು ಅಕ್ಕಿಯ ಬದಲು ಕಾಂಗ್ರೆಸ್ ಸರ್ಕಾರ 170 ರೂ ನೀಡುತ್ತಿದ್ದಾರೆ ಅದ್ದರಿಂದ ರೈತರು ದುಡುಕಿ ಭತ್ತ ಮಾರಾಟ ಮಾಡಬೇಡಿ ಮುಂದಿನ ದಿನಗಳಲ್ಲಿ ಅಕ್ಕಿಕೊರತೆ ಇದ್ದು ಸಮಸ್ಯೆಯಾಗುತ್ತದೆ ಒಂದು ತಿಂಗಳು 2000 ರೂ ಬಂದಿದ್ದು ಉಳಿಕೆ ತಿಂಗಳು ಹಣ ಹಾಕಿಲ್ಲ ಭ್ರಷ್ಟಾ ಸರಕಾರ ಇನ್ನು ಕೆಲವೆ 5 ತಿಂಗಳುಗಳಲ್ಲಿ ಮುರಿದು ಬೀಳುತ್ತದೆ ಎಂದು ತಿಳಿಸಿ ಗ್ರಾಮದಲ್ಲಿ ನೂತನ ಸಮುದಾಯಕ್ಕೆ ದೇವೇಗೌಡರ ಹೆಸರಿನಲ್ಲಿ 25 ಲಕ್ಷ ಅನುಧಾನ ನೀಡುವುದಾಗಿ ಘೋಷಣೆ ಮಾಡಿದರು.
ಬಳಿಕ ಮಾತನಾಡಿದ ಶಾಸಕರಾದ ಹೆಚ್ ಟಿ ಮಂಜುನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕರ್ನಾಟಕದ ಕರುಣಾಮಹಿ ಗ್ರಾಮದ ಎಲ್ಲಾ ಮುಖಂಡರ ಇಷ್ಟದಂತೆ ಅವರು ಈ ದೇವರ ಕಾರ್ಯಕ್ರಮಕ್ಕೆ ಬಂದಿದ್ದಾರೆ ಆದ್ದರಿಂದ ಈ ಗ್ರಾಮದ ಜನರ ಕನಸು ನನಸಾಗಿದೆ ಅದಕ್ಕೆ ನಾನು ಧನ್ಯವಾದ ಹೇಳುತ್ತೆನೆ ನಾನು ಶಾಸಕನಾಗಿರುವುದು ಅವರ ಕೃಪೆ ಕಾರಣವಾಗಿದ್ದು ಜೀವನದಲ್ಲಿ ಅವರ ಮಾರ್ಗದಂತೆ ನಡೆಯುತ್ತೆನೆ ತಾಲ್ಲೂಕಿನ ಅಭಿವೃದ್ಧಿ ಹಿನ್ನಡೆಯಾಗಿದೆ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿಯವರಿಗೆ ಒಳ್ಳೆಯ ಅವಕಾಶ ಇದೆ
ಕಾಂಗ್ರೆಸ್ ಸರ್ಕಾರ 05 ಗ್ಯಾರಂಟಿ ಕಾರ್ಯಕ್ರಮದಿಂದ ನಮ್ಮ ಪಕ್ಷಕ್ಕೆ ಮುಗ್ಗರಿಸಿದ್ದೇವೆ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಬರುತ್ತೆ ನಮ್ಮ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೆವೆ ಎಂದರು
ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್ ಜಾನಕಿರಾಮ್,ಮನ್ಮುಲ್ ನಿರ್ದೇಶಕ ಕೆ. ರವಿ (ಡಾಲು ರವಿ),ಜೆಡಿಎಸ್ ಮುಖಂಡ ಅಕ್ಕಿಹೆಬ್ಬಾಳು ರಘು,ತಾಲೂಕು ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ವಕೀಲ ವಿ ಎಸ್ ಧನಂಜಯ್ ಕುಮಾರ್,ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ ಹರೀಶ್,ಟಿ ಎ ಪಿ ಸಿ ಎಂ ಎಸ್ ನಿರ್ದೇಶಕ ಬಲದೇವ್,ಹೋಬಳಿ ಅಧ್ಯಕ್ಷ ಬಸವಲಿಂಗಪ್ಪ,ಎ ಪಿ ಎಂ ಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್,ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ನಾಗೇಶ್,ಮಾಂಬಳ್ಳಿ ಅಶೋಕ್,ಪಾಪೇಗೌಡ,ಹೆಚ್.ಟಿ ಲೋಕೇಶ್,ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮಿ ,ಲಕ್ಷ್ಮಮ್ಮಾ ಪುಟ್ಟೇಗೌಡ, ಸದಸ್ಯ ಬೆಳೂತುರು ಪುಟ್ಟಣ್ಣ,ಉಮೇಶ್,ಅತಿಕ್, ಸಂಜೀವಪ್ಪ,ಶಾಸಕ ಆಪ್ತ ಸಹಾಯಕ ಪ್ರದೀಪ್, ಸಾಧುಗೊನಹಳ್ಳಿ ಲೋಕೇಶ್, ದೇವಾಲಯದ ಟ್ರಸ್ಟ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಗ್ರಾಮದ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.
*ವರದಿ,ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?