ಶ್ರೀ ಕ್ಷೇತ್ರದಿಂದ ಸಾಧನ ಸಮಾವೇಶ ಮತ್ತು ಜಲ ಮಂಗಲ ಸಲಕರಣೆ ವಿತರಣೆ ಕಾರ್ಯಕ್ರಮ.

ಶ್ರೀ ಕ್ಷೇತ್ರದಿಂದ ಸಾಧನ ಸಮಾವೇಶ ಮತ್ತು ಜಲ ಮಂಗಲ ಸಲಕರಣೆ ವಿತರಣೆ ಕಾರ್ಯಕ್ರಮ.

*ಮಂಡ್ಯ ಸುದ್ದಿ*

ವರದಿಗಾರರು:-ಪ್ರತಾಪ್. ಎ. ಬಿ 

*ಶ್ರೀ ಕ್ಷೇತ್ರದಿಂದ ಸಾಧನ ಸಮಾವೇಶ ಮತ್ತು ಜಲ ಮಂಗಲ ಸಲಕರಣೆ ವಿತರಣೆ ಕಾರ್ಯಕ್ರಮ.*

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಡ್ಯ ತಾಲೂಕಿನ ಮಂಡ್ಯ ವಲಯದ ಮಂಡ್ಯ ನಗರದ ರೈತ ಸಭಾಂಗಣದಲ್ಲಿ ಸಾಧನ ಸಮಾವೇಶ ಮತ್ತು ಜಲಮಂಗಲ ಸಲಕರಣೆ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು

ಕಾರ್ಯಕ್ರಮವನ್ನು ಸ್ಪಂದನ ಆಸ್ಪತ್ರೆ ಆಡಳಿತ ಅಧಿಕಾರಿ ಡಾ ಆದಿತ್ಯ ಗೌಡ ರವರು ದೀಪ ಬೆಳಗಿಸುವ ಮುಖೇನ ಉದ್ಘಾಟಿಸಿದರು

 ನಂತರ ಮಾತನಾಡಿ ಧರ್ಮಸ್ಥಳ ಸಂಸ್ಥೆಯು ಅತ್ಯಂತ ಕಡಿಮೆ ದರದಲ್ಲಿ ಆರೋಗ್ಯ ರಕ್ಷಾ ಸಂಪೂರ್ಣ ಸುರಕ್ಷವನ್ನು ಮಾಡಿಸಿ ಆರೋಗ್ಯವನ್ನು ಸಂರಕ್ಷಣೆ ಮಾಡಿಕೊಳ್ಳಲು ಸಹಕಾರಿಯಾಗಿದೆ ನಮ್ಮ ಸ್ಪಂದನ ಸಂಸ್ಥೆಯು ಧರ್ಮಸ್ಥಳ ಸಂಸ್ಥೆ ಜೊತೆಗೂಡಿ ಸಂಘದ ಸದಸ್ಯರಿಗೆ ಸೇವೆಯನ್ನು ಕೊಡುತ್ತಿದ್ದೇವೆ ಎಂದು ತಿಳಿಸಿದರು ಇನ್ನು ಅನೇಕ ಜನಪರ ಕಾರ್ಯಕ್ರಮಗಳನ್ನ ಧರ್ಮಸ್ಥಳ ಸಂಸ್ಥೆ ನಮ್ಮ ತಾಲೂಕಿನಲ್ಲಿ ಮಾಡುತ್ತಿದೆ ಇನ್ನು ಹೆಚ್ಚಿನ ಕಾರ್ಯಕ್ರಮ ಇದೆ ರೀತಿ ಮುಂದುವರಿಯಲಿ ಎಂದು ಶುಭಹಾರೈಸಿದರು

ನಂತರ ಜಿಲ್ಲಾ ನಿರ್ದೇಶಕರು ಶ್ರೀ ಮತಿ ಎಂ ಚೇತನಾ ರವರು ಮಾತನಾಡಿ ಧರ್ಮಸ್ಥಳ ಸಂಸ್ಥೆಯಲ್ಲಿ ಸಂಘ ರಚನೆ ಮಾಡುವ ಮೂಲಕ ಉಳಿತಾಯ ಮಾಡಿ ಪ್ರಗತಿ ನಿಧಿ ಪಡೆದುಕೊಂಡು ಕುಟುಂಬವನ್ನು ಅಭಿವೃದ್ಧಿಪಡಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿ ಕೊಳ್ಳುವ ಮೂಲಕ ಆರ್ಥಿಕ ಶಿಸ್ತು ಕಲಿತುಕೊಂಡಿದ್ದೀರಾ ಉತ್ತಮವಾದ ಆಹಾರವನ್ನು ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಿ ಸಂಘಗಳಲ್ಲಿ ಆರ್ಥಿಕ ವ್ಯವಹಾರವನ್ನು ಒಳ್ಳೆಯ ರೀತಿಯಲ್ಲಿ ಮಾಡಿ ಹಾಗೂ ಯೋಜನೆಯಿಂದ ಸಿಗುವ ಅನುದಾನಗಳನ್ನು ನಿಮ್ಮ ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿ ದೇವಸ್ಥಾನ ಹಾಲಿನ ಡೈರಿ ನಿರ್ಮಾಣಕ್ಕೆ ಅನುದಾನಗಳನ್ನು ಬಳಕೆ ಮಾಡಿಕೊಳ್ಳಿ ನಿರ್ಗತಿಕರಿಗೆ ಮಾಶಾಸನವನ್ನು ಕೊಡಿಸಿ ಯೋಜನೆಯ ಹೊಸ ಹೊಸ ಕಾರ್ಯಕ್ರಮಗಳಿಗೆ ಹಾಗೂ ತಂತ್ರಜ್ಞಾನಗಳಿಗೆ ಹೊಂದಿಕೊಂಡು ನಡೆದುಕೊಂಡು ಹೋಗಿ ಎಂದು ಶುಭ ಹಾರೈಸಿದರು

 ಸಹಾಯಕ ಪ್ರಾಧ್ಯಾಪಕರು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶ್ರೀಮತಿ ಭಾಗ್ಯರವರು ಮಾತನಾಡಿ ನಿಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಮತ್ತು ಜ್ಞಾನವನ್ನು ಕೊಡಿ ಒಳ್ಳೆಯ ಸಂಸ್ಕಾರವನ್ನು ಕಳಿಸಿ ಧರ್ಮಸ್ಥಳ ಸಂಸ್ಥೆಯ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಕಾರ್ಯಕ್ರಮಗಳನ್ನ ನೀಡಿದೆ ಎಂದು ತಿಳಿಸಿದರು

ಬ್ಯಾಂಕ್ ಆಫ್ ಬರೋಡದ ಅರುಣ್ ಕುಮಾರ್ ಅವರು ಮಾತನಾಡಿ ಧರ್ಮಸ್ಥಳ ಸಂಸ್ಥೆಯ ಆರ್ಥಿಕ ನೆರವು ನೀಡುವ ಮೂಲಕ ಅನೇಕ ಜನರಿಗೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಕ್ಷೇತ್ರ ಯೋಜನಾಧಿಕಾರಿಗಳು ಮಮತಾ ಎನ್ ಶೆಟ್ಟಿ ಮಂಡ್ಯ ವಲಯದ ಮೇಲ್ವಿಚಾರಕಿ ಶಶಿಕಲಾ,ಕೃಷಿ ಮೇಲ್ವಿಚಾರಕರು ನವೀನ್ ಕುಮಾರ್,ಮಂಡ್ಯ ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಸಂಘದ ಸದಸ್ಯರು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು

What's Your Reaction?

like

dislike

love

funny

angry

sad

wow