ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ನಾಡುನುಡಿ, ನೆಲಜಲ ಹಾಗೂ ಸಾಹಿತ್ಯದ ಬಗ್ಗೆ ಅಭಿಮಾನ ಮೂಡಿಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಸಂಸ್ಥೆಯು ಮಾಡುತ್ತಿದೆ ಎಂದು ತಹಶೀಲ್ದಾರ್ ನಿಸರ್ಗಪ್ರಿಯ ಹೇಳಿದರು.

ಕೆ ಆರ್ ಪೇಟೆ:- ತಹಸಿಲ್ದಾರ್ ನಿಸರ್ಗ ಪ್ರಿಯ ರವರು

 ಪಟ್ಟಣದ ಗ್ರಾಮಭಾರತಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ೩೫ನೇ ವರ್ಷದ

ಶಾಲೆಗೊಂದು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ

ಮಾತನಾಡಿದರು.

ಸುವರ್ಣ ಕರ್ನಾಟಕ ಸ್ವಾತಂತ್ರೋತ್ಸವ ಸಂಭ್ರಮದ ಅಂಗವಾಗಿ ಕನ್ನಡ

ಸಾಹಿತ್ಯ ಪರಿಷತ್ ತಾಲೂಕಿನ ಎಲ್ಲಾ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ

ಕನ್ನಡದ ಏಕೀಕರಣ, ನೆಲ, ಜಲ ಹಾಗೂ ಭಾಷೆಯ ಬಗ್ಗೆ ಅರಿವಿನ ಜಾಗೃತಿ

ಮೂಡಿಸುವ ಕೆಲಸ ಮಾಡುತ್ತಿದೆ. ಸಾವಿರಾರು ವರ್ಷಗಳ ಭವ್ಯ

ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯು ಶಾಸ್ತ್ರೀಯ ಭಾಷೆಯೆಂಬ

ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಲ್ಲಿಯೇ ಅತೀ ಹೆಚ್ಚಿನ ಎಂಟು ಜ್ಞಾನಪೀಠ

ಪ್ರಶಸ್ತಿಯನ್ನು ಪಡೆದಿರುವ ಕನ್ನಡ ಸಾಹಿತ್ಯವು ಇತರೆ ಭಾಷೆಗಳಿಗಿಂತ

ವಿಭಿನ್ನವಾಗಿದ್ದು, ಕಲಿಯಲು ಸುಲಭವಾಗಿದ್ದು ಎಲ್ಲರಿಗೂ

ಅರ್ಥವಾಗುವಂತಹ ಅತ್ಯಂತ ಶ್ರೀಮಂತ ಭಾಷೆಯಾಗಿದೆ. ಕನ್ನಡದ

ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡವನ್ನು ಕಲಿತು ಕನ್ನಡ

ಭಾಷೆಯನ್ನು ಮಾತನಾಡುವ ಜೊತೆಗೆ ಕನ್ನಡದಲ್ಲಿಯೇ

ವ್ಯವಹರಿಸುವಂತಾಗಬೇಕು. ಕನ್ನಡದ ನೆಲದಲ್ಲಿ ಕನ್ನಡವು

ಅನ್ನಕೊಡುವ ಭಾಷೆಯಾಗಿ ಬೆಳೆಯಬೇಕು. ಕನ್ನಡಿಗರಾದ ನಾವು

ಕನ್ನಡ ಭಾಷೆಯ ಬಗ್ಗೆ ನಿರಭಿಮಾನಿಗಳಾಗದೇ ಕನ್ನಡವನ್ನು ಪ್ರೀತಿಸಿ

ಆರಾಧಿಸಬೇಕು, ಕನ್ನಡ ಭಾಷೆ ಗೊತ್ತಿಲ್ಲದ ಅನ್ಯ ಭಾಷಿಕರಿಗೆ

ಕನ್ನಡವನ್ನು ಕಲಿಸಿಕೊಡುವ ಕೆಲಸವನ್ನು ಅಭಿಮಾನದಿಂದ

ಮಾಡಬೇಕು ಎಂದು ತಹಶೀಲ್ದಾರ್ ನಿಸರ್ಗಪ್ರಿಯ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ

ಪ್ರಾಸ್ತಾವಿಕ ನುಡಿಗಳನ್ನಾಡಿ ಕನ್ನಡ ಸಾಹಿತ್ಯ ಪರಿಷತ್ ಕಳೆದ೩೪

ವರ್ಷಗಳಿಂದ ಕನ್ನಡವನ್ನು ಕಟ್ಟುವ, ಕನ್ನಡಮ್ಮನ ತೇರನ್ನು ಹಳ್ಳಿ,

ಹಳ್ಳಿಗೆ ಎಳೆಯುವ, ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು

ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ

ಭಾಷೆಯಲ್ಲಿ ಶೇ.೧೦೦ಕ್ಕೆ ೧೦೦ರಷ್ಟು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ

ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಅಭಿನಂದಿಸುವ ಕೆಲಸವನ್ನು ಕನ್ನಡ

ಸಾಹಿತ್ಯ ಪರಿಷತ್ ಮಾಡಿಕೊಂಡು ಬರುತ್ತಿದೆ ಎಂದು

ತೇಜಸ್ವಿ ಹೇಳಿದರು.

ಇದೇ ವೇಳೆ ಕರ್ನಾಟಕ ನಾಮಕರಣ ಮಹೋತ್ಸವ-೫೦ ವರ್ಷ ಕಾರ್ಯಕ್ರಮದಲ್ಲಿ ಕನ್ನಡ ವಿಷಯದಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹನ್ಸಿಕಾ ಮತ್ತು ಇತರೆ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಿ ಗೌರವಿಸಲಾಯಿತು. 

ಗ್ರಾಮಭಾರತಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಹೆಚ್.ಎಸ್.ಕೃಷ್ಣ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ವೀರಶೈವ

ಮಹಾಸಭಾ ತಾಲೂಕು ಅಧ್ಯಕ್ಷ ವಿ.ಎಸ್. ಧನಂಜಯ್ ಕುಮಾರ್,

ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಎಲ್.ಮಂಜುನಾಥ್, ತಾಲೂಕು

ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಬಸವರಾಜು,

 ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್,

ಸಾಹಿತಿಗಳಾದ ಶಿ.ಕುಮಾರಸ್ವಾಮಿ, ಮಾರೇನಹಳ್ಳಿ ಲೋಕೇಶ್, ಕನ್ನಡ ನಾಗರಾಜು, ಕ.ಸಾ.ಪ

ಪದಾಧಿಕಾರಿಗಳಾದ ಕಟ್ಟೆ ಮಹೇಶ್, ನೀಲಕಂಠ, ಹರಿಚರಣತಿಲಕ್, ಎಸ್.ಎನ್.ಮಂಜೇಗೌಡ, ಶೀಳನೆರೆ ಶಿವಕುಮಾರ್,

ಗೌಡಜಯಕುಮಾರ್, ಡಿ.ವಾಸು, ಪಾಪಯ್ಯ, ಎಂ.ಪಿ.ಕಿರಣಕುಮಾರ್, ಆರ್.ವಾಸು,

ಆರ್.ಕೆ.ರಮೇಶ್, ಚಾಶಿ ಜಯಕುಮಾರ್, ಲಕ್ಕೇಗೌಡ, ಕಟ್ಟೆ ಮಹೇಶ್,

ಸವಿತಾರಮೇಶ್, ಮುಖ್ಯಶಿಕ್ಷಕ ಕುಮಾರ್ ಮತ್ತಿತರರು

ಭಾಗವಹಿಸಿದ್ದರು.

ಚಿತ್ರಶೀರ್ಷಿಕೆ:06-ಕೆ.ಆರ್.ಪಿ-02 ಕೆ.ಆರ್.ಪೇಟೆ ಪಟ್ಟಣದ ಗ್ರಾಮಭಾರತಿ ಶಿಕ್ಷಣ

ಸಂಸ್ಥೆಯ ಸಭಾಂಗಣದಲ್ಲಿ ಕೆ.ಆರ್.ಪೇಟೆ ತಾಲೂಕು ಕನ್ನಡ ಸಾಹಿತ್ಯ

ಪರಿಷತ್ ಆಯೋಜಿಸಿದ್ದ ೩೫ನೇ ವರ್ಷದ ಶಾಲೆಗೊಂದು

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ತಹಶೀಲ್ದಾರ್

ನಿಸರ್ಗಪ್ರಿಯ ಮಾತನಾಡಿದರು. ಕಸಾಪ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ

ಮತ್ತಿತರರು ಚಿತ್ರದಲ್ಲಿದ್ದಾರೆ.

What's Your Reaction?

like

dislike

love

funny

angry

sad

wow