*ಮೈಸೂರು ರಾಜ್ಯ ಹೆದ್ದಾರಿಯ ರಸ್ತೆ ಮಧ್ಯ ಮತ್ತು ಬದಿಯಲ್ಲಿ ಭಾರಿ ಪ್ರಮಾಣದಲ್ಲಿ ಗುಂಡಿ ಬಿದ್ದಿದ್ದು, ಕನಿಷ್ಠ ಅವುಗಳನ್ನು ಮುಚ್ಚಿಸುವ ಪ್ರಯತ್ನವನ್ನೂ ಲೋಕೋಪಯೋಗಿ ಇಲಾಖೆ ಮಾಡುತ್ತಿಲ್ಲ ಎಂದು ಜೈ ಹಿಂದ್ ನಾಗಣ್ಣ ಆರೋಪಿಸಿದ್ರು*

*ಮೈಸೂರು ರಾಜ್ಯ ಹೆದ್ದಾರಿಯ ರಸ್ತೆ ಮಧ್ಯ ಮತ್ತು ಬದಿಯಲ್ಲಿ  ಭಾರಿ ಪ್ರಮಾಣದಲ್ಲಿ ಗುಂಡಿ ಬಿದ್ದಿದ್ದು, ಕನಿಷ್ಠ ಅವುಗಳನ್ನು ಮುಚ್ಚಿಸುವ ಪ್ರಯತ್ನವನ್ನೂ  ಲೋಕೋಪಯೋಗಿ ಇಲಾಖೆ ಮಾಡುತ್ತಿಲ್ಲ ಎಂದು ಜೈ ಹಿಂದ್ ನಾಗಣ್ಣ ಆರೋಪಿಸಿದ್ರು*

ಚನ್ನರಾಯಪಟ್ಟಣ ದಿಂದ ಕಿಕ್ಕೇರಿ ಮಾರ್ಗವಾಗಿ ದಿನನಿತ್ಯ ಲಕ್ಷಾಂತರ ವಾಹನಗಳು ಸಂಚಾರ ಮಾಡುತ್ತಿದ್ದು ಈ ರಸ್ತೆಯು ರಾಜ್ಯ ಹೆದ್ದಾರಿ ಆಗಿದ್ದು ಚನ್ನರಾಯಪಟ್ಟಣ ಇಂದ ಶ್ರೀರಂಗಪಟ್ಟಣ ಒಟ್ಟು 70 ಕಿ. ಮೀ. ನಷ್ಟು ಉದ್ದವಿದೆ. ಈ ರಸ್ತೆಯಲ್ಲಿ ಗುಂಡಿಗಳದ್ದೇ ಪಾರುಪತ್ಯ. ಮೈಸೂರಿನಿಂದ ಮಂಗಳೂರು, ಅರಸೀಕೆರೆ, ಶಿವಮೊಗ್ಗ, ಗೋವಾ, ಧಾರವಾಡ, ಬಾಂಬೆ, ಹಾಸನ್, ಧರ್ಮಸ್ಥಳ, ಸೇರಿದಂತೆ ಯಾತ್ರಾ ಸ್ಥಳಗಳಿಗೆ ಈ ರಸ್ತೆ ಮೂಲಕ ದಿನ ನಿತ್ಯ ಲಕ್ಷಾಂತರ ವಾಹನಗಳಲ್ಲಿ ಹೋಗುವ ಪ್ರಯಾಣಿಕರು ಜೋಪಾನವಾಗಿ ತಲುಪುತ್ತೇವೆ ಎಂಬುದಕ್ಕೆ ಖಾತ್ರಿಯೇ ಇಲ್ಲದಂತಾಗಿದೆ..

ಇತ್ತೀಚಿಗೆ ಕಿಕ್ಕೇರಿ ಪಟ್ಟಣದಿಂದ ಕೆ ಆರ್ ಪೇಟೆ ಪಟ್ಟಣಕ್ಕೆ ಸಂಚಾರ ಮಾಡುವುದೇ ಕಷ್ಟಕರವಾಗಿದೆ ಚಿಕ್ಕಳಲೆ ಗೇಟ್ ನಲ್ಲಿ ರಸ್ತೆಯಲ್ಲಿ ಬಾರಿ ಪ್ರಮಾಣದ 2 ಅಡಿಗಳಷ್ಟು ಗುಂಡಿಗಳು ಬಿದ್ದಿದ್ದು ದಿನನಿತ್ಯ ಅಪಘಾತಗಳು ಉಂಟಾಗಿ ಸಾರ್ವಜನಿಕ ಜೀವಕ್ಕೆ ಕುತ್ತು ಬರುತ್ತಿದೆ ಸಂಬಂದ ಪಟ್ಟ ಲೋಕೋಪಯೋಗಿ ಇಲಾಖೆ ಮತ್ತು ಸ್ಥಳಿಯ ಶಾಸಕರು ಇತ್ತ ಗಮನ ಹರಿಸಿ ಕೂಡಲೇ ಗುಡ್ಡಿ ಬಿದ್ದಿರುವ ರಸ್ತೆಯನ್ನು ಸರಿಪಡಿಸುವಂತೆ ಉಚಿತ ಮಾತೃಭೂಮಿ ವೃದ್ದಾಶ್ರಮದ ಸಂಸ್ಥಾಪಕ ಜೈ ಹಿಂದ್ ನಾಗಣ್ಣ ಆಗ್ರಹಿಸಿದ್ದಾರೆ..

ಮಾತೃಭೂಮಿ ಆಶ್ರಮದ ಜೈ ಹಿಂದ್ ನಾಗಣ್ಣ ರವರು ಸ್ವಂತ ಹಣದಿಂದ ಕೆವವು ಬಾರಿ ಗುಂಡಿ ಮುಚ್ಚುವ ಕಾರ್ಯವನ್ನು ಸಹಾ ಮಾಡಿದ್ದು ಈಗ ಗುಂಡಿ ಬಿದ್ದ ರಸ್ತೆಯಲ್ಲಿ ಅಲ್ಲಲ್ಲಿ ಎಚ್ಚರಿಕೆ ನಾಮಪಲಕ ಅಳವಡಿಸಿದ್ದು ಈ ರಸ್ತೆಯಲ್ಲಿ ಎಚ್ಚರಿಗೆ‌ ಇಂದ ಸಂಚಾರ ಮಾಡುವಂತೆ ಸಾರ್ವಜನಿಕರಿಗೆ ತಿಳಿಸಿದ್ದಾರೆ..

What's Your Reaction?

like

dislike

love

funny

angry

sad

wow