*ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥಕ್ಕೆ ಭವ್ಯ ಸ್ವಾಗತ ನೀಡಿದ ಕೃಷ್ಣರಾಜಪೇಟೆ ಪಟ್ಟಣದ ಸಾಹಿತಿಗಳು, ಕನ್ನಡಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು. ಮೊಳಗಿದ ಕನ್ನಡ ಜಯಘೋಷಗಳು. ಹಾರಾಡಿದ ಕನ್ನಡ ಭಾವುಟಗಳು*.
ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಾಗಮಂಗಲದಿಂದ ಕೃಷ್ಣರಾಜಪೇಟೆ ಪಟ್ಟಣಕ್ಕೆ ಆಗಮಿಸಿದ ಸಾಹಿತ್ಯ ಸಮ್ಮೇಳನದ ಕನ್ನಡ ಪ್ರಚಾರ ರಥಕ್ಕೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ಪುರಸಭೆ ಸದಸ್ಯ ಪ್ರೇಮಕುಮಾರ್, ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್ ತಾಯಿ ಭುವನೇಶ್ವರಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಂಡರು.
ಕೃಷ್ಣರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಮಾತನಾಡಿ ಮಂಡ್ಯ ನಗರದಲ್ಲಿ 30 ವರ್ಷಗಳ ನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯುತ್ತಿದೆ. ಡಿಸೇಂಬರ್ 20,21 ಹಾಗೂ 22ರಂದು ನಡೆಯಲಿರುವ ಅಕ್ಷರ ಜಾತ್ರೆಯಲ್ಲಿ ತಾಲೂಕಿನ ಜನತೆ ಸೇರಿದಂತೆ ಯುವಜನರು ಹಾಗೂ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿ ಕೊಡುವ ಜೊತೆಗೆ ಮಂಡ್ಯ ಜಿಲ್ಲೆಯಲ್ಲಿ
ನಡೆಯುತ್ತಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ಮಾಡಬೇಕು. ಸಮ್ಮೇಳನದ ಸರ್ವಧ್ಯಕ್ಷರಾದ ಗೊ.ರು. ಚನ್ನಬಸಪ್ಪ ಅವರನ್ನು ಹೃದಯಸ್ಪರ್ಶಿಯಾಗಿ ಬರಮಾಡಿಕೊಂಡು ಕನ್ನಡದ ತೇರನ್ನು ಎಳೆಯಲು ಮುಂದಾಗಬೇಕು ಎಂದು ಪೂರ್ಣಚಂದ್ರ ತೇಜಸ್ವಿ ಮನವಿ ಮಾಡಿದರು.
ಕನ್ನಡದ ವರನಟ ಡಾ. ರಾಜಕುಮಾರ್ ಹಾಡಿರುವ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಚಿತ್ರ ಗೀತೆಗೆ ಪುರಸಭೆ ಸದಸ್ಯ ಪ್ರೇಮಕುಮಾರ್, ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿ ನೃತ್ಯ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷೆ ಸವಿತಾ ರಮೇಶ್, ಪದಾಧಿಕಾರಿಗಳಾದ ಕಟ್ಟೆ ಮಹೇಶ್, ಪಿ.ಬಿ.ನಾಗರಾಜು, ಪುರಸಭೆ ಸದಸ್ಯ ಗಿರೀಶ್, ನಾಟನಹಳ್ಳಿ ಗಂಗಾಧರ, ಬಳ್ಳೇಕೆರೆ ಮಂಜುನಾಥ್, ಹರಿಚರಣತಿಲಕ್, ಕೆ.ಆರ್. ನೀಲಕಂಠ, ಸೈಯ್ಯದ್ ಖಲೀಲ್, ಲೋಕೇಶ್ ವಿ, ರಾಜು ಜಿ. ಪಿ. ರವಿ,ಅಮಿನಾಬಾನು ಸೇರಿದಂತೆ ಕೆಪಿಎಸ್ ಹಾಗೂ ಆದಿಚುಂಚನಗಿರಿ ಶಾಲೆಯ ಸಾವಿರಾರು ಮಕ್ಕಳು ಕನ್ನಡ ರಥದ ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
*ವರದಿ.ರಾಜು ಜಿ ಪಿ ಕಿಕ್ಕೇರಿ ಕೃಷ್ಣರಾಜಪೇಟೆ*.
What's Your Reaction?