ತಾಲ್ಲೂಕು ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಸೋಮಶೇಖರ್ ಹೊನ್ನೇನಹಳ್ಳಿ ರವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಸೋಮಶೇಖರ್ ಹೊನ್ನೇನಹಳ್ಳಿ ರವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಕೆ ಆರ್ ಪೇಟೆ: ತಮಿಳುನಾಡಿಗೆ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ನಿರ್ಧಾರದ ಬೆನ್ನಲ್ಲೇ ಕರ್ನಾಟಕ ರಾಜ್ಯದಲ್ಲಿ ಭುಗಿಲೆದ್ದಿರುವ ಸಂದರ್ಭದಲ್ಲಿ ಕೃಷ್ಣರಾಜಪೇಟೆ ತಾಲ್ಲೂಕು ಜಯಕರ್ನಾಟಕ ಸಂಘಟನೆಯ ವತಿಯಿಂದ ಹೋರಾಟದ ಕಿಚ್ಚು ಹೆಚ್ಚಾಗಿ ಟಿ ಬಿ ಸರ್ಕಲ್ ನಲ್ಲಿ ಸುತ್ತ ಮಾನವ ಸರಪಳಿ ನಿರ್ಮಿಸಿ ತಾಲ್ಲೂಕು ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಸೋಮಶೇಖರ್ ಹೊನ್ನೇನಹಳ್ಳಿ ರವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಬಳಿಕ ಮಾತನಾಡಿದ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸೋಮಶೇಖರ್ ಮಾತನಾಡಿ ನಮಗೆ ನೀರಿನ ಹಾಹಾಕಾರ ಉಂಟಾಗಿದೆ. ನಮಗೆ ಇಲ್ಲಿ ಕುಡಿಯಲು ನೀರಿಲ್ಲ.ಜನಜಾನುವಾರುಗಳಿಗೆ ನೀರಿಲ್ಲ.ಬೆಳೆದ ಬೆಳೆಗಳಿಗೆ ನೀರಿಲ್ಲದೆ ಒಣಗಿತ್ತಿವೆ. ಇಂತಹ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಇದನ್ನು ಗಮನಿಸಿ ಒಂದು ತಂಡವನ್ನು ರಚನೆ ಮಾಡಿ ಕಳಿಸಿ ವಾಸ್ತವಾಂಶವನ್ನು ಪರಿಗಣನೆಗೆ ತೆಗೆದುಕೊಂಡು ಆದೇಶವನ್ನು ನೀಡಬೇಕು.ಇದನ್ನು ಬಿಟ್ಟು ಏಕಾಏಕಿ ಆದೇಶ ನೀಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು. ರಾಜ್ಯ ಸರ್ಕಾರವು ಸಹ ಉತ್ತಮ ವಕೀಲರನ್ನು ನೇಮಿಸಿ ಕಾವೇರಿ ನಮ್ಮ ನೀರು ನಮ್ಮ ಹಕ್ಕು ಎಂದು ಬಲವಾಗಿ ಪ್ರತಿಪಾದಿಸುವಂತೆ ಸಲಹೆ ನೀಡಿದರು. ಇಂತಹ ಪರಿಸ್ಥಿತಿಯಲ್ಲಿ ಸರ್ವ ಪಕ್ಷಗಳು ನಾಡಿನ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕಾರಣ ಬದಿಗೊತ್ತಿ ಕಾವೇರಿ ನೀರಿಗಾಗಿ ಹೋರಾಟ ಮಾಡಬೇಕೆಂದು ಪತ್ರಿಕಾ ಹೇಳಿಕೆ ನೀಡುವ ಮೂಲಕ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಜಯಕರ್ನಾಟಕ ಸಂಘಟನೆ ಕಾರ್ಯಾಧ್ಯಕ್ಷ ರವಿ,ಪ್ರದಾನ ಕಾರ್ಯದರ್ಶಿ ಕಾಮನಹಳ್ಳಿ ಪ್ರಭು, ಉಪಾಧ್ಯಕ್ಷ ಯುವರಾಜ್,ಅನಂದ್, ಯೂತ್ ಅಧ್ಯಕ್ಷರಾದ ಕಾಮನಹಳ್ಳಿ ಮಹೇಶ್,ನಗರ ಘಟಕದ ಅಧ್ಯಕ್ಷ ಯೋಗೇಶ್,ಕಸಬಾ ಅಧ್ಯಕ್ಷ ವಸಂತ್, ರಾಘವೇಂದ್ರ, ಹರೀಶ್, ದಿನೇಶ್,ಸಂಕರ್, ಶಿವಾಜಿ,ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಮತ್ತು ಮಹಿಳಾ ಅಧ್ಯಕ್ಷರು ಜಯಲಕ್ಷ್ಮಿ, ಪದಾಧಿಕಾರಿಗಳು,ಪ್ರತಾಪ್,ಸುಂದ್ರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ವರದಿ, *ರಾಜು ಜಿಪಿ ಕಿಕ್ಕೇರಿ*

What's Your Reaction?

like

dislike

love

funny

angry

sad

wow