ಕೃಷ್ಣರಾಜಪೇಟೆ ತಾಲೂಕಿನ ಮಾಕವಳ್ಳಿಯಲ್ಲಿರುವ* *ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಎಚ್ಚರಿಕೆವಹಿಸಿ ಎಥೆನಾಲ್ ಉತ್ಪಾದನಾ ಘಟಕ ಆರಂಭಿಸಲು ಮುಂದಾಗಿದೆ ಎಂದು ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್ ಹೇಳಿದರು

ಕೃಷ್ಣರಾಜಪೇಟೆ ತಾಲೂಕಿನ ಮಾಕವಳ್ಳಿಯಲ್ಲಿರುವ* *ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಎಚ್ಚರಿಕೆವಹಿಸಿ ಎಥೆನಾಲ್ ಉತ್ಪಾದನಾ ಘಟಕ ಆರಂಭಿಸಲು ಮುಂದಾಗಿದೆ ಎಂದು ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್ ಹೇಳಿದರು

ಅವರು ಕೃಷ್ಣರಾಜಪೇಟೆ ತಾಲೂಕಿನ ಕಸಬಾ ಹೋಬಳಿಯ ಕುಪ್ಪಹಳ್ಳಿ ಮತ್ತು ಶೀಳನೆರೆ ಹೋಬಳಿಯ ಹೊನ್ನೇನಹಳ್ಳಿ ಗ್ರಾಮಗಳಲ್ಲಿ ಕಬ್ಬು ಬೆಳೆಗಾರರ ಜಾಗೃತಿ ಸಭೆ ನಡೆಸಿ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಏಥನಾಲ್ ಘಟಕ ಸ್ಥಾಪನೆ ಮಾಡುವುದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಿ ಮಾತನಾಡಿದರು.

ಕಳೆದ 24 ವರ್ಷಗಳಿಂದ ಕೃಷ್ಣರಾಜಪೇಟೆ ತಾಲೂಕಿನ ರೈತರ ಜೀವನಾಡಿಯಾಗಿ ಕಬ್ಬು ಬೆಳೆಗಾರರ ಆತ್ಮೀಯ ಬಂಧುವಿನಂತೆ ಕಾರ್ಯನಿರ್ವಹಿಸುತ್ತಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಪರಿಸರ ಮಿತ್ರನಂತೆ ಕೆಲಸ ಮಾಡುತ್ತಿರುವುದಲ್ಲದೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡುತ್ತಾ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿಗಧಿ ಮಾಡಿದ ದರದಂತೆ ಕಬ್ಬಿನ ಬಾಕಿ ಹಣವನ್ನು ಸಂಪೂರ್ಣ ಪಾವತಿಸಿರುವ ದಕ್ಷಿಣ ಭಾರತದ ಏಕೈಕ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ. ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ 30 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕವು ಕೆಲಸ ಮಾಡುತ್ತಿದ್ದು ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಯಥನಾಲ್ ಘಟಕ ಸ್ಥಾಪನೆ ಮಾಡಲು ಮುಂದಾಗಿದೆ. ಎಥೆನಾಲ್ ಘಟಕವನ್ನು ಸ್ಥಾಪನೆ ಮಾಡುವುದರಿಂದ ರೈತರು ಕಾರ್ಖಾನೆಗೆ ಸರಬರಾಜು ಮಾಡುವ ಕಬ್ಬಿನ ಹಣವನ್ನು ಸರ್ಕಾರವು ನಿಗದಿಪಡಿಸಿದ ಎಫ್.ಆರ್.ಪಿ ದರಕ್ಕಿಂತಲೂ ಹೆಚ್ಚಿನ ಹಣವನ್ನು ನೀಡಲು ಸಾಧ್ಯವಾಗುವುದರಿಂದ ಕಾರ್ಖಾನೆ ಮತ್ತು ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆಯನ್ನು ಹೊಂದಿರುವ ಎಥೆನಾಲ್ ಜೈವಿಕ ಇಂಧನವನ್ನು ಕಾರ್ಖಾನೆಯು ಉತ್ಪಾದನೆ ಮಾಡಿದರೆ ಪೆಟ್ರೋಲ್ ಗೆ ಪರ್ಯಾಯ ಇಂಧನವಾಗಿ ಬಳಕೆ ಮಾಡಲು ಅವಕಾಶವಿರುವುದರಿಂದ ಸಕ್ಕರೆ ಕಾರ್ಖಾನೆ ಹೆಚ್ಚುವರಿ ಲಾಭ ಗಳಿಸಿ ಅಭಿವೃದ್ಧಿಯ ಪಥದತ್ತ ಮುನ್ನಡೆಯಲು ಸಾಧ್ಯವಾಗಲಿದೆ. ರೈತರ ಅಭ್ಯುದಯದಲ್ಲಿ ಕಾರ್ಖಾನೆಯ ಹಿತ ಅಡಗಿದೆ ಎಂಬ ಸತ್ಯವನ್ನು ಆಡಳಿತ ಮಂಡಳಿಯು ಹೊಂದಿರುವುದರಿಂದ ಕಬ್ಬು ಬೆಳೆಗಾರರ ಹಿತವನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಕೆಲಸ ಮಾಡುತ್ತಿದೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುಮಾರ್ ತಿಳಿಸಿದರು.

ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬೋರಾಪುರ ಮಂಜುನಾಥ್ ಮಾತನಾಡಿ ಕೋರಮಂಡಲ್ ಸಕ್ಕರೆ ಕಾರ್ಖಾನೆಯು 250 ಕೋಟಿ ರೂಪಾಯಿ ಹಣ ಖರ್ಚು ಮಾಡಿ ಎಥೆನಾಲ್, ಜೈವಿಕ ಇಂಧನ ಘಟಕ ಉತ್ಪಾದನೆ ಮಾಡಲು ಮುಂದಾಗಿರುವುದು ತಾಲೂಕಿನ ಕಬ್ಬು ಬೆಳೆಗಾರರಿಗೆ ಹೆಮ್ಮೆಯ ವಿಚಾರವಾಗಿದೆ. ಪರಿಸರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಅತ್ಯಧುನಿಕ ತಂತ್ರಜ್ಞಾನವನ್ನು ಬಳಸಿ ಯಥೇನಾಲ್ ಘಟಕವನ್ನು ನಿರ್ಮಾಣ ಮಾಡುತ್ತಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯು ಯಥೇನಾಲ್ಉತ್ಪಾದನಾ ಘಟಕದಿಂದ ಹೊರಗೆ ಬರುವ ಪೇಂಟ್ ವಾಶ್ ಅನ್ನು ಸಂಸ್ಕರಣೆ ಮಾಡಿ ಪೊಟ್ಯಾಶ್ ಉತ್ಪಾದನೆ ಮಾಡಿ, ಕಬ್ಬು ಅರೆಯುವುದರಿಂದ ಬರುವ ನೀರನ್ನು ಮರುಬಳಕೆ ಮಾಡಿಕೊಂಡು ಸಂಸ್ಕರಣೆ ಮಾಡಿದ ನೀರನ್ನು ಯಥೇನಾಲ್ ಘಟಕ ನಿರ್ವಹಣೆಗೆ ಬಳಸುವುದರಿಂದ ಎಥೆನಾಲ್ ಉತ್ಪಾದನಾ ಘಟಕದಿಂದ ಒಂದೇ ಒಂದು ಹನಿ ನೀರು ಕೂಡ ಹೊರಬರದಂತೆ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಏಥೆನಾಲ್ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಮುಂದಾಗಿದೆ. ಕಾರ್ಖಾನೆಯಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿರುವ ನಾನು ಕಾರ್ಖಾನೆಗೆ ಅತಿ ಹೆಚ್ಚು ಕಬ್ಬು ಸರಬರಾಜು ಮಾಡುವ ರೈತನಾಗಿದ್ದು ಎಥೆನಾಲ್ ಘಟಕದ ತಂತ್ರಜ್ಞಾನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿ ರುವುದರಿಂದ ಪರಿಸರ ಹಾಗೂ ರೈತಸ್ನೇಹಿಯಾಗಿರುವ ಎಥೆನಾಲ್ ಘಟಕದ ಆರಂಭಕ್ಕೆ ಸಮ್ಮತಿ ಸೂಚಿಸಿ ಕಬ್ಬು ಬೆಳೆಗಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಮಾರ್ಚ್ 6ರಂದು ಮಂಡ್ಯ ಜಿಲ್ಲಾಧಿಕಾರಿ ಗಳ ಸಮ್ಮುಖದಲ್ಲಿ ಎಥೆನಾಲ್ ಘಟಕದ ಆರಂಭ ಮಾಡುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಆದ್ದರಿಂದ ತಾಲ್ಲೂಕಿನ ಕಬ್ಬು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಥೆನಾಲ್ ಘಟಕದ ಪರವಾಗಿ ಅಭಿಪ್ರಾಯ ನೀಡಿ ಎಥೆನಾಲ್ ಘಟಕವನ್ನು ವಿರೋಧಿಸುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಂಜುನಾಥ್ ಮನವಿ ಮಾಡಿದರು.

ಕೋರಮಂಡಲ್ ಸಕ್ಕರೆ ಕಾರ್ಖಾನೆ ಕಬ್ಬು ವಿಭಾಗದ ಹಿರಿಯ ಅಧಿಕಾರಿ ಕೆ. ಬಾಬುರಾಜ್, ದತ್ತಾತ್ರೇಯ, ಮಾಕವಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಲರಾಮೇಗೌಡ, ಉಪಾಧ್ಯಕ್ಷ ಮಂಜುನಾಥ್, ಸಿಂಧಘಟ್ಟ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರವಿಕುಮಾರ್, ಬಂಡಿಹೊಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಾಯಿ ಮಂಜೇಗೌಡ, ದರ್ಶನ್, ಜಯರಾಮೇಗೌಡ, ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳಾದ ವಡಕಹಳ್ಳಿ ಮಂಜೇಗೌಡ, ದೇವರಾಜೇಗೌಡ, ಸುರೇಶ್ ಸೇರಿದಂತೆ ನೂರಾರು ಕಬ್ಬುಬೆಳೆಗಾರರು ಜಾಗೃತಿ ಸಭೆಗಳಲ್ಲಿ ಭಾಗವಹಿಸಿ ಎಥೆನಾಲ್ ಘಟಕ ಆರಂಭಕ್ಕೆ ತಮ್ಮ ಸಮ್ಮತಿ ಸೂಚಿಸಿದರು.

 *ವರದಿ.ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow