ಪ್ರತಿದಿನ ದಿನಪತ್ರಿಕೆ ಹಂಚುವ ರಂಗನಾಥ ಮಾಸಾಶನ ಘೋಷಿಸಿದ ರಾಯರ ರಂಗ ಮoದಿರದ ನಿರ್ದೇಶಕಿ ಡಾ. ಸ್ವಾತಿ ಪಿ ಭಾರದ್ವಾಜ್

ಪ್ರತಿದಿನ ದಿನಪತ್ರಿಕೆ ಹಂಚುವ ರಂಗನಾಥ ಮಾಸಾಶನ ಘೋಷಿಸಿದ ರಾಯರ ರಂಗ ಮoದಿರದ ನಿರ್ದೇಶಕಿ ಡಾ. ಸ್ವಾತಿ ಪಿ ಭಾರದ್ವಾಜ್

ಚನ್ನರಾಯಪಟ್ಟಣ:ನಗರದ ಗಾಂಧಿವೃತ್ತದಲ್ಲಿರುವ ರಾಯರ ರಂಗ ಮಂದಿರದಲ್ಲಿ ಗುರುವಾರ ರಾಯರರಿಗೆ ವಿಶೇಷ ಪೂಜೆ ಏರ್ಪಡಿಸಲಾಗಿತು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಂತರ ದಿನಪತ್ರಿಕೆ ಹಂಚುವ ರಂಗನಾಥ್ ಸನ್ಮಾನ ಮಾಡಿ ಮಾತನಾಡಿದ ಪ್ರಕಾಶ್ ರವರು ಪಟ್ಟಣದ್ಯಂತ ಪ್ರತಿದಿನ ಮನೆ ಮನೆಗೆ ಪತ್ರಿಕೆ ಹಂಚಿಕೆ ಮಾಡುವವರ ಕಷ್ಟ ಎಷ್ಟಿದೆ ಎಂಬುದನ್ನು ತಿಳಿಸಿದರು, ಪ್ರತಿ ನಿತ್ಯ

 ಮುಂಜಾನೆಯಿಂದ ಕೆಲಸ ಪ್ರಾರಂಭಿಸುವ ರಂಗನಾಥರವರು ಸಾರ್ವಜನಿಕರು ಎದ್ದೇಳುವ ಮುನ್ನವೇ ಮನೆ ಮನೆ ಬಾಗಿಲುಗೆ ವಿಶ್ವದ ಸುದ್ದಿಗಳ ಪತ್ರಿಕೆಗಳನ್ನು ಹಂಚುವ ಮೂಲಕ ಚನ್ನರಾಯಪಟ್ಟಣ ನಗರದಲ್ಲಿ ಕಳೆದ 20ವರ್ಷದಿಂದ ನಿರಂತರವಾಗಿ ಕಾಯಕವೇ ಕೈಲಾಸವೆಂದು ನಂಬಿ ಸುಮಾರು 300ಕ್ಕೂ ಹೆಚ್ಚು ಮನೆ ಮನೆಯ ಬಾಗಿಲಿಗೆ ದಿನಪತ್ರಿಕೆ ಹಂಚಿಕೆ ಮಾಡಿ ಇದರಿಂದ ತನ್ನ ಜೀವನ ಸಾಗಿಸುತ್ತಿರುವ ಚನ್ನರಾಯಪಟ್ಟಣದ ಬಡ ಕುಟುಂಬದಿಂದ ಬಂದ ಶ್ರೀ ರಂಗನಾಥ ರವರ 20ವರ್ಷಗಳ ಸಾಧನೆ ಗುರುತಿಸಿ ಚನ್ನರಾಯಪಟ್ಟಣ

 ರಾಯರ ರಂಗ ಮಂದಿರ ವತಿಯಿಂದ ಸನ್ಮಾನಿಸಿ ಗೌರವಿಸಿ ಮಂತ್ರಾಲಯದ ರಾಯರ ಮಂತ್ರಾಕ್ಷತೆ ನೀಡಿ ಶುಭ ಹಾರೈಸಲಾಯಿತು, ಪ್ರತಿ ತಿಂಗಳು ರಂಗನಾಥ್ ಅವರಿಗೆ ರೂ.300ಗಳ ಮಾಸಾಶನ ನೀಡುವ ಬಗ್ಗೆ ರಾಯರ ರಂಗ ಮoದಿರ ನಿರ್ದೇಶಕಿ ಡಾ. ಸ್ವಾತಿ ಪಿ ಭಾರದ್ವಾಜ್ ಘೋಷಣೆ ಮಾಡಿದರು. ಇದೆ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಸಂಗೀತ ಗುರುಗಳಾದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ವಿದ್ವಾನ್ ಚ. ರಾ. ರಾಮಚಂದ್ರರವರಿಗೆ ಸನ್ಮಾನಿಸಿ

 ಗೌರವಿಸಲಾಯಿತು. ನೆರೆದಿದ್ದ ನೂರಾರು ಭಕ್ತರಿಗೆ ತೀರ್ಥ ಪ್ರಸಾದ ನೀಡಲಾಯಿತು. ರಾಯರ ರಂಗ ಮಂದಿರ ಮುಖ್ಯಸ್ಥರಾದ ಎಂ ಕೆ ಪ್ರಕಾಶ್, ಇ ಓ ಹರೀಶ್ ಹಾಗೂ ಜಗದೀಶ್ ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow