ಕಿಕ್ಕೇರಿ ಪೊಲೀಸ್ ಠಾಣೆಯ ದಕ್ಷ ಅಧಿಕರಾರಿಯಾದ ಇನ್ಸ್ಪೆಕ್ಟರ್ ರೇವತಿ ಮತ್ತು ಸಿಬ್ಬಂದಿ ವರ್ಗದಿಂದ ಮಹಿಳಾ ಪೇದೆಗಳಿಗೆ ಸೀಮಂತ ಕಾರ್ಯ ಮಾಡಲಾಯಿತು

ಕಿಕ್ಕೇರಿ ಪೊಲೀಸ್ ಠಾಣೆಯ ದಕ್ಷ ಅಧಿಕರಾರಿಯಾದ ಇನ್ಸ್ಪೆಕ್ಟರ್ ರೇವತಿ ಮತ್ತು ಸಿಬ್ಬಂದಿ ವರ್ಗದಿಂದ  ಮಹಿಳಾ ಪೇದೆಗಳಿಗೆ ಸೀಮಂತ ಕಾರ್ಯ ಮಾಡಲಾಯಿತು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪೋಲೀಸ್ ಠಾಣೆಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಪೇದೆಗಳಾಗಿ ಕರ್ತವ್ಗ ಸಲ್ಲಿಸುತ್ತಿರುವ ಶ್ರೀಮತಿ ಸಜಿನಿ ಮತ್ತು ಶ್ರೀಮತಿ ಶಿಲ್ಪ ಶ್ರೀ ರವರಿಗೆ ಠಾಣೆಯ ದಕ್ಷ ಅಧಿಕಾರಿಯಾಗಿರುವ ಇನ್ಸ್ಪೆಕ್ಟರ್ ರೇವತಿ ಮತ್ತು ಸಿಬ್ಬಂದಿಗಳು ಸೇರಿ ಸೀಮಂತ ಕಾರ್ಯ ನೇರವೇರಿಸಿ ಶುಭಹಾರೈಸಿದ್ರು. ಇಬ್ಬರು ಮಹಿಳಾ ಪೇದೆಗಳಿಗೆ ಉಡಿ ತುಂಬಿ, ಮಡಿಲಕ್ಕಿ, ಕೊಬ್ವರಿ ಬೆಲ್ಲ, ತೆಂಗಿನಕಾಯಿ, ಅರಿಶಿನ ಕುಂಕುಮ, ಬಳೆ, ಸೀರೆಯನ್ನು ಸಾಂಪ್ರದಾಯಿಕವಾಗಿ ನೀಡಿ ಸೀಮಂತ ಕಾರ್ಯ ಮಾಡಲಾಯಿತು.

ನಂತರ ಮಾತನಾಡಿ ಪೋಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ವೈಯಕ್ತಿಕ ಜೀವನದ ಬಗ್ಗೆಯೂ ಹೊತ್ತು ನೀಡಬೇಕು ಪೋಲೀಸರು ತಮ್ಮ ಕುಟುಂಬವನ್ನು ಬಿಟ್ಟು ಹಗಲು ರಾತ್ರಿ ಎಂಬುವುದನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಅದರಲ್ಲಿ ಸಮಯ ಮಾಡಿಕೊಂಡು ಈ ಸೀಮಂತ ಕಾರ್ಯ‌ ಮಾಡಿರುವುದಾಗಿ ತಿಳಿಸಿದ್ರು ಒಟ್ಟಾರೆ ಇಬ್ಬರು ಮಹಿಳಾ ಸಿಬ್ಬಂದಿಗಳುಗೆ ಶುಭ ಹಾರೈಸಿದ್ರು ತಮ್ಮ ಆರೋಗ್ಯ ಬಗ್ಗೆ ಹೆಚ್ಚು ಗಮನ ನೀಡುವಂತೆ ಸಲಹೆ ನೀಡಿದ್ರು 

ಈ ಸಂಧರ್ಭದಲ್ಲಿ ಕಿಕ್ಕೇರಿ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ರೇವತಿ, ಸಹಾಯಕ ಸಬ್ ಇನ್ಸ್ಪೆಕ್ಟರ್ ಶಿವಲಿಂಗಯ್ಯ, ದೇವರಾಜೇಗೌಡ್ರು, ರಮೇಶ್, ಸಿಬ್ಬಂದಿಗಳಾದ ವಿನೋಧ್, ಕುಮಾರ್, ಲಕ್ಷ್ಮಣ್, ಸುನೀಲ್, ಪ್ರಸನ್ನ, ಜಾಪರ್, ಸೇರಿದಂತೆ ಅನೇಕರು ಇದ್ದರು .

What's Your Reaction?

like

dislike

love

funny

angry

sad

wow