*ಕೆ.ಆರ್.ಪೇಟೆಯಲ್ಲಿ ನಮ್ಮನ್ನ ಗಣನೆಗೆ ತೆಗುದುಕೊಳ್ಳುತ್ತಿಲ್ಲ ಸ್ವಾರ್ಥಕ್ಕಾಗಿ ಮೈತ್ರಿ ಬಳಕೆಯಾಗುತ್ತಿದೆ : ಮಾಜಿ ಸಚಿವ ಕೆ.ಸಿ ನಾರಾಯಣಗೌಡರು*

*ಕೆ.ಆರ್.ಪೇಟೆಯಲ್ಲಿ  ನಮ್ಮನ್ನ ಗಣನೆಗೆ ತೆಗುದುಕೊಳ್ಳುತ್ತಿಲ್ಲ  ಸ್ವಾರ್ಥಕ್ಕಾಗಿ ಮೈತ್ರಿ ಬಳಕೆಯಾಗುತ್ತಿದೆ : ಮಾಜಿ ಸಚಿವ ಕೆ.ಸಿ ನಾರಾಯಣಗೌಡರು*

ಕೆ ಆರ್ ಪೇಟೆ,ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಕುಮಾರಸ್ವಾಮಿ ಅವರಿಗೆ ಶಕ್ತಿ ಮೀರಿ ಕೆಲಸ ಮಾಡಿ ಬಾರಿ ಅಂತರದಲ್ಲಿ ಜಯಗಳಿಸಲು ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ನಮ್ಮ ಪಕ್ಷದ ನಾಯಕರು ಪಕ್ಷದ ಮುಖಂಡರು ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿ ಕುಮಾರಸ್ವಾಮಿ ಗೆಲುವಿನಲ್ಲಿ ಶ್ರಮಿಸಿದ್ದಿವಿ, ಆದರೆ ತಾಲ್ಲೂಕಿನಲ್ಲಿ ಇಲ್ಲಿನ ಶಾಸಕರು ಮರೆತಿದ್ದಾರೆ ಎಂದು ಮಿತ್ರ ಪಕ್ಷ ಜೆಡಿಎಸ್ ಮೇಲೆ ಆರೋಪ ಮಾಡಿದರು.

ಕೆ ಆರ್ ಪೇಟೆ ಪಟ್ಟಣದ ಕೆ.ಸಿ ನಾರಾಯಣಗೌಡ ಅವರ ಮನೆಯ ಆವರಣದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ನಾರಾಯಣಗೌಡರು ಇಲ್ಲಿನ ಶಾಸಕರು ಮೈತ್ರಿಯನ್ನು ಮುರಿದು ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಸಂಪರ್ಕಿಸದೆ ನಮ್ಮ ಪಕ್ಷದ ಮುಖಂಡರ ಜೊತೆ ಚರ್ಚಿಸದೆ ಬೇಕಾದ ರೀತಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ, ಮತ್ತು ನನ್ನ ಅವಧಿಯಲ್ಲಿ ಆಗಿರುವ ಯೋಜನೆಗಳನ್ನು ಇವಾಗ ಗುದ್ದಲಿ ಪೂಜೆ ಮಾಡುತ್ತಿದ್ದಾರೆ ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ನನ್ನ ಕರೆದಿಲ್ಲ, ಇಲ್ಲಿನ ಶಾಸಕರು ಸ್ವಾರ್ಥ

ರಾಜಕಾರಣ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಮುಂದುವರಿದು ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಪಿ.ಎಲ್ ಡಿ ಬ್ಯಾಂಕ್ ಚುನಾವಣೆ, ಟಿ.ಎ.ಪಿ.ಸಿ.ಎಂ.ಎಸ್ ಹಾಗೂ ಡೈರಿ ಚುನಾವಣೆಗಳನ್ನು ಎದುರಿಸಬೇಕಿದೆ ಆದ್ದರಿಂದ ನಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಕ್ತವಾದ ಸ್ಥಾನಮಾನ ಸಿಗಬೇಕು ಆ ನಿಟ್ಟಿನಲ್ಲಿ ಯಾವ ರೀತಿ ಸಿದ್ದರಾಗಬೇಕು ಯಾವ ರೀತಿಯಲ್ಲಿ ಚುನಾವಣಾ ರೂಪುರೇಷೆ ಸಿದ್ದಪಡಿಸಬೇಕು ಹಾಗೂ ಮುಂದಿನ ಚುನಾವಣೆಯಲ್ಲಿ ಮೈತ್ರಿ ವಿಷಯದ ಬಗ್ಗೆ ಮೈತ್ರಿ ನಾಯಕರ ಜೊತೆ ಚರ್ಚೆ ಮಾಡಿ ಒಂದು ತೀರ್ಮಾನ ಮಾಡಬೇಕು ಎಂದರು.

ಮಾಜಿ ಮುಡಾ ಅಧ್ಯಕ್ಷ ಕೆ ಶ್ರೀನಿವಾಸ್ ಮಾತನಾಡಿ ಇತಿಹಾಸದಲ್ಲೇ ಕೆ.ಆರ್ ಪೇಟೆ ತಾಲ್ಲೂಕಿಗೆ ಬಾರಿ ಪ್ರಮಾಣದಲ್ಲಿ ಅನುದಾನ ತಂದು ಕೆಲಸ ಮಾಡಿ ನೀರಾವರಿ ಕ್ಷೇತ್ರದಲ್ಲಿ ರೈತರಿಗೆ ತಾಲ್ಲೂಕಿನ ಸಮಸ್ತ ಜನತೆಗೆ ಅನುಕೂಲ ಆಗಿದೆ ಅಂದ್ರೆ ಅದಿಕ್ಕೆ ನಾರಾಯಣಗೌಡರು ಕಾರಣ, ಅವರು ಆದುನಿಕ ಭಗೀರಥ ಇದು ಜನರ ಮನಸ್ಸಿನಲ್ಲಿದೆ. ಇಷ್ಟೊಂದು ಕೆಲಸ ಮಾಡಿ ಸೈ ಎನಿಸಿಕೊಂಡರೂ ಸೋಲಿಸಿದ್ದು ಅವರ ಮನಸ್ಸಿಗೆ ತುಂಬಾ ನೋವಾಗಿದೆ ಮುಂದೆ ನಾವೆಲ್ಲ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡೋಣ ಅವರಿಗೆ ಸದಾ ಬೆಂಬಲ ವಾಗಿ ಇರೋಣ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಮಾಜಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ವಿಡಿ ಹರೀಶ್, ಪುರಸಭೆ ಸದಸ್ಯ ಬಸ್ ಸಂತೋಷ್, ಮುಖಂಡರಾದ ಬೂಕನಕೆರೆ ಜವರಾಯಿಗೌಡ, ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ಎಳನೀರು ಪುಟ್ಟೇಗೌಡ, ಪ್ರಧಾನ ಕಾರ್ಯದರ್ಶಿ ಚೋಕ್ನಹಳ್ಳಿ ಪ್ರಕಾಶ್, ಸಿಂಗನಹಳ್ಳಿ ರವಿ, ಮಹಿಳಾ ಅಧ್ಯಕ್ಷೆ ಕಮಲಾಕ್ಷಮ್ಮ, ಮಾಜಿ ಪಿ.ಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಟ್ಟೆಕ್ಯಾತನಹಳ್ಳಿ ಪಾಪೇಗೌಡ, ಮಂಡ್ಯ ಜಿಲ್ಲಾ ಹಾಫ್ ಕಾಮ್ಸ್ ಮಾಜಿ ಅಧ್ಯಕ್ಷರಾದ ತಮ್ಮಣ್ಣ, ಎಸ್ ಟಿ ಮೋರ್ಚಾದ ರಾಜ್ಯ ಕಾರ್ಯ ಕಮಿಟಿ ಸದಸ್ಯರು ಮಹೇಶ್ ನಾಯಕ, ಜಿಲ್ಲಾ ಓಬಿಸಿ ಮೋರ್ಚ ಕಾರ್ಯದರ್ಶಿ ವಾಸು, ಓಬಿಸಿ ಮೋರ್ಚದ ತಾಲೂಕ ಅಧ್ಯಕ್ಷರು ಹಾದನೂರ್ ಮಂಜು, ಎಸ್ ಟಿ ಮೋರ್ಚದ ತಾಲೂಕ್ ಅಧ್ಯಕ್ಷ ರಾಜು ಜಿ ಪಿ, ಎಸ್ಸಿ ಮೋರ್ಚದ ತಾಲೂಕ ಅಧ್ಯಕ್ಷ ಯಾಲಕಯ್ಯ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ಮಾಧ್ಯಮ ಪ್ರಮುಖ ಮಧುಸೂದನ್, ಮಾಜಿ ಸಚಿವರಾದ ಕೆ ಸಿ ನಾರಾಯಣಗೌಡ ರವರ ಆಪ್ತ ಕಾರ್ಯದರ್ಶಿ ದಯಾನಂದ್ ಸೇರಿದಂತೆ ಬಿಜೆಪಿಯ ಕಾರ್ಯಕರ್ತರು ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

 *ವರದಿ,ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow