ಬುದ್ಧ ಬಸವ ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ಧಮ್ಮ ದೀಪ ಕಾರ್ಯಕ್ರಮ
ಬುದ್ದನ ಪಂಚಶೀಲ, ಅಷ್ಟಾಂಗ ಮಾರ್ಗದಿಂದ ಜಗತ್ತು ಶಾಂತಿಯಿಂದ ಇರಬಲ್ಲದು ಎಂದು ಕೊಳ್ಳೆಗಾಲದ ಸುಗತಪಾಲ ಭಂತೇಜಿ ನುಡಿದರು. ಬೌದ್ಧ ಧರ್ಮ ವಿಶ್ವದ ಪ್ರಾಚೀನ ಧರ್ಮಗಳಲ್ಲಿ ಒಂದು, ಶಾಂತಿ ಸಹಬಾಳ್ವೆ *ಬಹುಜನ ಹಿತಾಯ ಬಹುಜನ ಸುಖಾಯ ಎಂಬ ತತ್ವದಲ್ಲಿ ನಂಬಿಕೆಯಿಟ್ಟ ಧರ್ಮ ಎಂದು ಭಂತೆ ನುಡಿದರು. ಕೃಷ್ಣರಾಜಪೇಟೆ ಟೌನ್ ಹೌಸಿಂಗ್ ಬೋರ್ಡು ಬುದ್ದ *ಬಸವ ಅಂಬೇಡ್ಕರ್ ಕೇಂದ್ರದಲ್ಲಿ ಯೋಗ ಗುರು ಅಲ್ಲಮಪ್ರಭು ಅವರ ನೇತೃತ್ವದಲ್ಲಿ ನಡೆದ ಧಮ್ಮ ದೀಪ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಬಾಬಾ ಸಾಹೇಬರು ಈ ಬೌದ್ಧ ಧರ್ಮವು ಅತ್ಯಂತ ವೈ
ಮತಾಂತರಗೊಂಡರು, ಮತ್ತು ಇದು ಭಾರತೀಯ ಜನ್ಯ ಧರ್ಮ ಎಂಬುದೇ ವಿಶೇಷ ಎಂದು ನುಡಿದರು. *ಬಿಕ್ಕುಣಿ ಗೌತಮಿ ಮಾತಾಜಿ* ಮಾತನಾಡಿ ಮೌಡ್ಯ ಆಚರಣೆ ಕೈಬಿಟ್ಟು ನಾವು ಭಾರತೀಯರು ಎಂದು ಒಗ್ಗಟ್ಟಿನಿಂದ ಬದುಕಬೇಕು ಎಂದರು. ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅಂದು ಬೇರೆ ಪಾಶ್ಚಾತ್ಯ ಧರ್ಮಕ್ಕೆ ಮತಾಂತರಗೊಂಡಿದ್ದರೆ,ಇಂದಿನ ಭಾರತದ ಪರಿಸ್ಥಿತಿ ಏನಾಗುತ್ತಿತ್ತು, ಯೋಚಿಸಿ ಎಂದರು.. ಕಾರ್ಯಕ್ರಮದಲ್ಲಿ ಬೌದ್ಧ ಧರ್ಮದ ಪ್ರಕಾರ ಯೋಗಗುರು ಎಸ್.ಎಂ. ಅಲ್ಲಮ ಪ್ರಭುರವರು ಮೈತ್ರಿ ಧ್ಯಾನ ಪ್ರಾರ್ಥನೆ ಮಾಡಿಸಿದರು. *ಇತಿಹಾಸ ತಜ್ಞ ರಂಗಸ್ವಾಮಿ ಶಿಕ್ಷಕರು ಮಾತನಾಡಿ ಧೀನದಲಿತರ ಸೇವೆ,,, ಸಮಾನತೆ ಒಗ್ಗಟು ಇಂದಿನ ಅವಶ್ಯಕತೆ ಎಂದರು. *ಬುದ್ಧ ಬಸವ ಅಂಬೇಡ್ಕರ್ ಅವರ ಸಾಧನೆ ಶಾಂತಿ ನಾವು ಅನುಸರಿಸಬೇಕು, ಮತ್ತು ಈ ದಿನ ನಾಲ್ಕುಜನ ಬೌದ್ಧ ಭಂತೇಜಿಗಳು ಕೆ.ಆರ್ ಪೇಟೆಗೆ ಬಂದು ಧರ್ಮ ಜಾಗೃತಿ ಮೂಡಿಸುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದರು. ಕಾರ್ಯಕ್ರಮದಲ್ಲಿ *ಮೈತ್ರೇಯಿ ಮಾತಾಜಿ, ಬೀದರ್ ಧಮ್ಮ ದಿನ ಮಾತಾಜಿ* ಮಾತನಾಡಿದರು.
ಮತ್ತು ಎಸ್ ಸಿಎಸ್ ಟಿ ಮಾದ್ಯಮಿಕ ಶಿಕ್ಷಕರ ಸಂಘದಅಧ್ಯಕ್ಷರಾದ ಹಳಿಯೂರು ಯೋಗೇಶ್, ಶಿಕ್ಷಕರಾದ ಭೈರಯ್ಯ, ಕುಮಾರ, ಧನೇಂದ್ರ ಗೌಡ, ಪ್ರಕಾಶ್, ಮಂಜುನಾಥ್, ನಾಗಯ್ಯ, ರಾಜುನಾಯ್ಕ, ಆಲಂಬಾಡಿ ರವಿ, ನಟೇಶ್ ಗಾಂಧಿನಗರ ಕಾಂತರಾಜು ನೂರಾರು ಜನ ಪಾಲ್ಗೊಂಡಿದ್ದರು. ಸಾಮೂಹಿಕ ಭೋಜನ ಏರ್ಪಡಿಸಲಾಗಿತ್ತು
.
What's Your Reaction?