ಎರಡು ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಐಚನಹಳ್ಳಿ ಗ್ರಾಮಸ್ಥರು,

_ಕೆ ಆರ್ ಪೇಟೆ ತಾಲ್ಲೋಕಿನ ಬೂಕನಕೆರೆ ಹೋಬಳಿಯ ಐಚನಹಳ್ಳಿ ಗ್ರಾಮದಲ್ಲಿ ಸುಮಾರು ಎರಡು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಗ್ರಾಮಪಂಚಾಯಿತಿ ಅಧಿಕಾರಿ, ಗ್ರಾಮಪಂಚಾಯಿತಿ ಸದಸ್ಯರುಗಳು, ವಾಟರ್ ಮ್ಯಾನ್ ನ ಗಮನಕ್ಕೆ ತಂದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ವರ್ತಿಸಿದ ವಾಟರ್ ಮ್ಯಾನ್, ಗ್ರಾಮಪಂಚಾಯಿತಿ ಅಧಿಕಾರಿ, ಗ್ರಾಮಪಂಚಾಯಿತಿ ಸದಸ್ಯರುಗಳ ನೆಡವಳಿಕೆಯಿಂದ ಬೇಸತ್ತು ಗ್ರಾಮಸ್ಥರು ಕರುನಾಡು ಯುವಜನ ವೇದಿಕೆಯ ಬಳಿ ಸಮಸ್ಯೆಗಳ ಬಗ್ಗೆ ಲಿಖಿತವಾಗಿ ದೂರು ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್.ವಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಜಿ.ಪಿ.ರಾಜು, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಸಾಯಿಕುಮಾರ್. ಎನ್. ಕೆ. ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು,_
_ಈ ಗ್ರಾಮದಲ್ಲಿ ಸುಮಾರು 15-20 ಮನೆಗಳಿಗೆ 2 ತಿಂಗಳಿಂದ ಹುಳ ಮಿಶ್ರಿತವಾದ ನೀರು ಕುಡಿಯುತ್ತಿದ್ದರು ಅಲ್ಲದೆ ಸ್ಥಳಿಯ ಅಂಗನವಾಡಿ ಕೇಂದ್ರ ಮಕ್ಕಳಿಗೂ ಕುಡಿಯಲು ನೀರು ಇಲ್ಲದಿರುವುದು
ಕಂಡುಬಂದಿತ್ತು, ತಕ್ಷಣವೇ ಗ್ರಾಮಾಭಿವೃದ್ಧಿ ಅಧಿಕಾರಿಗಳಾದ ಕಾರ್ತಿಕ್ ರವರನ್ನು ತರಾಟೆಗೆ ತೆಗೆದುಕೊಂಡು ವಾಟರ್ ಮ್ಯಾನ್ ಗೆ ಟ್ಯಾಂಕ್ ನ ಮೂಲಕ ಕುಡಿಯುವ ನೀರು ಸರಬರಾಜು ಮಾಡುವಂತೆ ಹಾಗೂ ಸುಸ್ಥಿತಿಯಲ್ಲಿರುವ ನೀರಿನ ಪೈಪ್ ಬದಲಾವಣೆಗೆ ಮಾಡಿಸಿ ಶುದ್ಧವಾದ ನೀರನ್ನು ಒದಗಿಸಲಾಗುವುದೆಂದು ಗ್ರಾಮಸ್ಥರಿಗೆ ತಿಳಿಸಿದರು,_
_ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಾವ್ಯ, ಕರುನಾಡು ಯುವಜನ ವೇದಿಕೆಯ ರಾಜ್ಯ ಉಪಾಧ್ಯಕ್ಷ ಲೋಕೇಶ್.ವಿ, ಜಿಲ್ಲಾ ಉಪಾಧ್ಯಕ್ಷ ಜಿ.ಪಿ.ರಾಜು,
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಸಾಯಿಕುಮಾರ್. ಎನ್. ಕೆ, ಬೂಕನಕೆರೆ ಹೋಬಳಿ ಘಟಕದ ಅಧ್ಯಕ್ಷ ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಿರೀಶ್, ಕಾರ್ಯದರ್ಶಿ ಪ್ರಜ್ವಲ್, ಶಿಳಾನೆರೆ ಹೋಬಳಿ ಘಟಕದ ಕಾರ್ಯದರ್ಶಿ ರಾಹುಲ್, ಗ್ರಾಮಸ್ಥರಾದ ಸಹನಾ, ಮಹಾದೇವಮ್ಮ, ಭಾರತಿ ಬಾಬು. ರಂಗಸ್ವಾಮಿ. ಚಾಮೇಗೌಡ. ಇಂದ್ರಮ್ಮ. ನಾಗೇಗೌಡ. ಜಯಮ್ಮ. ದೇವರಾಜ್. ಮಹೇಶ್. ವೆಂಕಟೇಶ್. ಮಾದೇಗೌಡ. ವರದರಾಜ್. ಮಹೇಶ್ ಕುಮಾರ್. ಸೇರಿದಂತೆ ಗ್ರಾಮಸ್ಥರು ನೆರೆದಿದ್ದರು.
*ವರದಿ ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?






