*ಧ್ಯಾನದಿಂದ ಮಾನಸಿಕ ಒತ್ತಡ, ಆಂತರಿಕ ಬಾಹ್ಯ ಶಾಂತಿ ದೊರೆಯುತ್ತದೆ*
ಡಿಸೆಂಬರ್ 21ನ್ನು ವಿಶ್ವಸಂಸ್ಥೆ *ವಿಶ್ವ ಧ್ಯಾನ ದಿನವನ್ನಾಗಿ ಘೋಷಣೆ ಮಾಡಿ ವಿಶ್ವಸಂಸ್ಥೆಯಲ್ಲಿ ಇಂದು ಪೂಜ್ಯ ರವಿಶಂಕರ ಗುರೂಜಿ ಯವರಿಂದ ಧ್ಯಾನ ಕೂಟ ಏರ್ಪಡಿಸಿರುವುದು ಭಾರತದ ಸಂಸ್ಕೃತಿಯ ಹೆಮ್ಮೆ ಎಂದು ಯೋಗ ಗುರು ಎಸ್.ಎಂ. ಅಲ್ಲಮಪ್ರಭು ನುಡಿದರು. ಭಾರತದ ಸನಾತನ ಧರ್ಮ ಮತ್ತು ಬೌದ್ಧ ಜೈನ ಸಿಖ್ ಲಿಂಗಾಯತ ಧರ್ಮಗಳು ಧ್ಯಾನಕ್ಕೆ ಅತ್ಯಂತ ಮಹತ್ವ ನೀಡಿವೆ, *ವಸುದೈವ ಕುಟುಂಬಕಂ ಎಂಬುದು ನಮ್ಮ ಸಂಸ್ಕೃತಿ, ಸರ್ವೇ ಜನೋ ಸುಖಿನೋ ಭವಂತುಃ, ಸರ್ವೇ ಭದ್ರಾಣಿ ಪಶ್ಯಂತು ಎಂಬ ಮೂಲ ಧ್ಯೆಯವೇ ಧ್ಯಾನದ ತಳಹದಿ, ಬೌದ್ಧ ಧರ್ಮದಲ್ಲಿ ಆನಪಾನಸತಿ ಧ್ಯಾನ, ವಿಪಶ್ಯನ ಧ್ಯಾನ ವಿಶ್ವ ಪ್ರಸಿದ್ಧಿ ಪಡೆದಿದೆ ಎಂದು ಅಲ್ಲಮಪ್ರಭು ನುಡಿದರು,, *ಹೌಸಿಂಗ್ ಬೋರ್ಡ್ ನ ಬುದ್ದ ಬಸವ ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ವಿಶ್ವ ಧ್ಯಾನ ದಿನ ಆಚರಣೆ ಮಾಡಿ, ಮಾತನಾಡುತ್ತಿದ್ದರು,, ಬೌದ್ಧ ಧರ್ಮದ ಆನಪಾನಸತಿ ಧ್ಯಾನವನ್ನು ಹೇಳಿಕೊಟ್ಟರು,. ಐದು ಸಾವಿರ ವರ್ಷಗಳ ಹಿಂದೆ ಅರಣ್ಯಕ*, ಹಾಗೂ ಮಂಡೂಕೋಪನಿಷತ್ ನಲ್ಲಿ ಧ್ಯಾನದ ಮಹತ್ವ ತಿಳಿಸಿದೆ... ನಂತರ *ಬುದ್ದರ ಕಾಲವನ್ನು ಧ್ಯಾನದ ಗೋಲ್ಡನ್ ಸೆಂಚುರಿ ಎಂದು ಕರೆಯಲಾಗುತ್ತಿದೆ,, ಮಾನಸಿಕ ಕ್ಷೋಭೆ ನಿವಾರಣೆಗೆ ಧ್ಯಾನ* ಅವಶ್ಯಕ ಎಂದು
ತಿಳಿಸಿದರು.ವಿಠಲಾಪುರ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಸ್ವರ್ಣಲತಾ ರವಿಕುಮಾರ್,ಮಾತನಾಡಿ, ಡಿಸೆಂಬರ್ 21ನ್ನೇ ಏಕೆ ವಿಶ್ವಸಂಸ್ಥೆ ಧ್ಯಾನದ ದಿನ ಎಂದು ಆಯ್ಕೆ ಮಾಡಿಕೊಂಡಿದೆಯೆಂದರೆ, *ಉತ್ತರಾರ್ಧ ಗೋಳದಲ್ಲಿ ಅತಿ ಕಡಿಮೆ ಹಗಲು ಹೊಂದಿರುವ ದಿನ,, ಮತ್ತು ಉತ್ತರಾಯಣ ಪುಣ್ಯ ಕಾಲದ ಆರಂಭದ ದಿನ*, ಅತ್ಯಂತ ಪವರ್ ಪುಲ್ ದಿನ ಎಂದು ವಿಶ್ವಸಂಸ್ಥೆ ಇದನ್ನು ಆಯ್ಕೆ ಮಾಡಿದೆ ಎಂದರು.. ಭಾರತದ ಎರಡು ವಿಶೇಷ ದಿನಗಳು ವಿಶ್ವಸಂಸ್ಥೆಗೆ ಸೇರಿದಂತಾಯಿತು ಎಂದು ಯೋಗ ದಿನವನ್ನು ಸ್ಮರಿಸಿದರು... ಕಾರ್ಯಕ್ರಮದಲ್ಲಿ ಮೈತ್ರಿ ಧ್ಯಾನ,, ಆನಪಾನಸತಿ ಧ್ಯಾನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಿಕ್ಷಕ ಮಾಕವಳ್ಳಿ ವಸಂತರಾಜು, ಶಿಕ್ಷಣ ಸಂಯೋಜಕ ಸಿ.ವೀರಭದ್ರಯ್ಯ, ಅರುಣ್, ಶಿಕ್ಷಕಿಯರಾದ ಶ್ರೀಮತಿ ವಾಣಿ, ಪವಿತ್ರ, ಯಮುನಾ, ರೇಣುಕಾ ಮಂಜೇಗೌಡ, ಕೆಇಬಿ ಸುಲೋಚನಾ,ಕರುಣಾ, ನಿಸರ್ಗ, ನಳಿನಿ, ತ್ರಿವೇಣಿ, ಶೋಭಾ ಮಂಜುನಾಥ, ಜಾಹ್ನವಿ,.ವೈರಮುಡಿ, ಯಶೋಧ, ನವೀನಾ, ಮುಂತಾದವರು ಉಪಸ್ಥಿತರಿದ್ದರು.
*ವರದಿ ವರದಿ, ರಾಜು ಜಿಪಿ ಕಿಕ್ಕೇರಿ ಕೃಷ್ಣರಾಜಪೇಟೆ*
What's Your Reaction?