ಹಲಗೂರು:ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ದೇಶಕ್ಕೆ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಗ್ರಾಮೀಣ ಭಾಗದ ಶಾಲೆಗಳ ಪಾತ್ರ ಅಪಾರವಾದುದು ಎಂದು ಮಳವಳ್ಳಿ ವಿಭಾಗದ ಡಿ.ವೈ.ಎಸ್.ಪಿ ವಿ.ಕೃಷ್ಣಪ್ಪ ತಿಳಿಸಿದರು.

ಹಲಗೂರು ಸಮೀಪದ ಹುಸ್ಕೂರು ಗ್ರಾಮದ ಸ್ಪಂದನ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ 'ಸ್ಪಂದನ ಸಂಭ್ರಮ 2023-24' ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಕಲಿಕೆಯನ್ನು ಅಂಕಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಮನುಷ್ಯನಿಗೆ ಅಗತ್ಯವಿರುವ ನೈತಿಕ ಮೌಲ್ಯಗಳನ್ನು ಬೋಧಿಸಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಕಿರುತೆರೆ ನಟಿ ಗೌತಮಿ ಜಾದವ್ ಮಾತನಾಡಿ. ನಾನು ನಟಿ ನಟಿಸಿರುವ ಧಾರವಾಹಿ ನನಗೆ ನೋಡಿರಬಹುದು. ಮಾರ್ಚ್ ತಿಂಗಳು ಬಂದರೆ ಹಲವಾರು ಶಾಲೆಗಳ ಕಾರ್ಯಕ್ರಮ ನಡೆಯುತ್ತದೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನಗೆ ಹೆಮ್ಮೆಯ ವಿಷಯ ಆಗಿದೆ. ಪ್ರತಿಯೊಬ್ಬರ ಪೋಷಕರ ಆಸೆ ನಮಗೂ ಚೆನ್ನಾಗಿ ಓದಿ ವಿದ್ಯಾಭ್ಯಾಸ ಮಾಡಬೇಕು. ಮಕ್ಕಳ ಪ್ರತಿಭೆಯನ್ನು ನೀವು ನೋಡಲು ತುಂಬಾ ಕಾತುರರಾಗಿದ್ದೀರಿ ನಾನು ಹೆಚ್ಚು ಮಾತನಾಡುವುದಿಲ್ಲ ಅವರು ನಟಿಸಿರುವ ಧಾರವಾಹಿ ಡೈಲಾಗ್ ಹೇಳಿದ್ದರು.
ಶ್ರೀ ಗ್ರೂಪ್ ಸಂಸ್ಥೆಯ ತರಬೇತುದಾರ ರಕ್ಷಿತ್ ರಾಜ್ ಮಾತನಾಡಿ ತಮ್ಮ ಮಗುವನ್ನು ಇತರೆ ಮಕ್ಕಳೊಂದಿಗೆ ಹೋಲಿಕೆ ಮಾಡುವುದನ್ನು ಪೋಷಕರು ನಿಲ್ಲಿಸಬೇಕು. ಪ್ರತಿ ಮಗುವಿನಲ್ಲಿಯೂ ಹಲವು ಬಗೆಯ ಪ್ರತಿಭೆಗಳಿದ್ದು, ಮಗುವಿನಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತೆಗೆದು ಸಮಾಜಕ್ಕೆ ಪ್ರದರ್ಶನ ಮಾಡಲು ವೇದಿಕೆ ಕಲ್ಪಿಸಿಕೊಡಬೇಕು. ಆ ಮೂಲಕ ಮಗುವಿನ ಶ್ರೇಯೋಭಿವೃದ್ದಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಬಾಲಾಜಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕೆಂಪೇಗೌಡ, ಕಾರ್ಯದರ್ಶಿ ಎಚ್.ಕೆ.ಕೃಷ್ಣಮೂರ್ತಿ, ಎಚ್.ಕೆ.ದೇವರಾಜು, ಮಳವಳ್ಳಿ ಡಿ.ವೈ.ಎಸ್.ಪಿ. ಕೃಷ್ಣಪ್ಪ, ಹೃದ್ರೋಗ ತಜ್ಞ ಡಾ.ನಂಜಪ್ಪ, ನಿವೃತ್ತ ಯೋಧ ತಮ್ಮಣ್ಣಗೌಡ, ಸತ್ಯ ದಾರವಾಹಿ ನಾಯಕಿ ನಟಿ ಗೌತಮಿ ಜಾಧವ್, ಉಪವಲಯ ಅರಣ್ಯಾಧಿಕಾರಿ ನಂದೀಶ್, ಸಾಹಿತಿ ಕೃಷ್ಣೇಗೌಡ, ಉಮೇಶ್, ರಕ್ಷಿತ್ ರಾಜ್, ಮುಖ್ಯ ಶಿಕ್ಷಕಿ ಬಿ.ಕಮಲಾ ಗ್ರಾಮದ ಮುಖಂಡರಾದ ಶಿವಲಿಂಗೇಗೌಡ, ಸಿದ್ದಾಪುರ ಕೃಷ್ಣ, ಪುಟ್ಟಯ್ಯ, ಪುಟ್ಟಸ್ವಾಮಿ, ಚಿಕ್ಕಮೊಗಣ್ಣ, ಪ್ರಸಾದ್ ಸೇರಿದಂತೆ ಹಲವರು ಇದ್ದರು.
What's Your Reaction?






