ಆಷಾಢ ಶುಕ್ರವಾರದ ಅಂಗವಾಗಿ ಕೆ ಆರ್ ಪೇಟೆ ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜೆ ಪುರಸ್ಕಾರಗಳು ನಡೆದವು

ಆಷಾಢ ಶುಕ್ರವಾರದ ಅಂಗವಾಗಿ ಕೆ ಆರ್ ಪೇಟೆ ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜೆ ಪುರಸ್ಕಾರಗಳು ನಡೆದವು

ಬೆಳ್ಳಿಯ ಆಭರಣಗಳಲ್ಲಿ ಸರ್ವಾಲಂಕೃತವಾದ ಶ್ರೀ ಚೌಡೇಶ್ವರಿ ಅಮ್ಮನವರಿಗೆ ಮುಂಜಾನೆಯಿಂದಲೇ ಅಭಿಷೇಕ, ಪಂಚಾಮೃತ ಅಭಿಷೇಕ, ಗಂಗಾ ಜಲ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ಪುರಸ್ಕಾರಗಳು ನಡೆದವು.

 ಸಾಂಸ್ಕೃತಿಕ ಸಂಘಟಕ ವೇದಬ್ರಹ್ಮ ಶ್ರೀ ರವಿ ಶಾಸ್ತ್ರಿ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ನಡೆದವು. ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಮೊಸರನ್ನ, ಪುಳಿಯೋಗರೆ, ಸಿಹಿ ಪೊಂಗಲ್ ಪ್ರಸಾದವನ್ನು ವಿತರಿಸಲಾಯಿತು. 

ಮಹಿಳಾ ಹೋರಾಟಗಾರ್ತಿ, ಸಮಾಜ ಸೇವಕಿ ಪರಿಮಳ ನಾಗರಾಜ

ಶೆಟ್ಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಇಂದಿನ ಒತ್ತಡದ ಜೀವನದಲ್ಲಿ ನಾವು ದೇವರು ಮತ್ತು ಧರ್ಮ ಮಾರ್ಗದಿಂದ ಮಾತ್ರ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆಯಬಹುದಾಗಿದೆ. ಆದ್ದರಿಂದ ಸಾಧನೆ ಮಾಡಲು ಕಷ್ಟವಾದರೂ ನ್ಯಾಯ ನೀತಿ ಧರ್ಮ ಹಾಗೂ ಸತ್ಯದ ಮಾರ್ಗದಲ್ಲಿಯೇ ಸಾಗಿ ಗುರಿ ಮುಟ್ಟಲು ಪ್ರಯತ್ನ ಪಡಬೇಕು ಎಂದು ಮನವಿ ಮಾಡಿದ ಪರಿಮಳ ಸಮಾಜದಲ್ಲಿ ವಾಸಿಸುವ ನಾವೆಲ್ಲರೂ ಸಹೋದರತ್ವ ಹಾಗೂ ಸಹಬಾಳ್ವೆಯಿಂದ ದ್ವೇಷ ಅಸುವೆಯನ್ನು ಮರೆತು ಒಂದಾಗಿ ಸಂತೋಷದಿಂದ ಬದುಕು ನಡೆಸಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ದೇವಿಗೆ ಭಕ್ತಿಗೀತೆಗಳು ಹಾಗೂ ಕಂದ ಪದ್ಯ ಖಡ್ಗಗಳನ್ನು ಹಾಡಿ ಭಕ್ತಿ ನಮನವನ್ನು ಸಲ್ಲಿಸಲಾಯಿತು.

ಶುಕ್ರವಾರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್ಎಂ ಚಂದ್ರಶೇಖರ್, ಕಾರ್ಯದರ್ಶಿ ವಿದ್ಯಾರ್ಥಿ ಭಂಡಾರ ಸುರೇಶ್, ಖಜಾಂಚಿ ಕೆಆರ್ ಮಹೇಶ್, ಗೌರವಾಧ್ಯಕ್ಷ ಕೆ ಆರ್ ನಾಗರಾಜ ಶೆಟ್ಟಿ, ಉದ್ಯಮಿ ಕೆಎಚ್ಆರ್ ಚಂದ್ರಶೇಖರ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಸಿ.ವಾಸು, ಸಮಾಜ ಸೇವಕಿ ಪ್ರೇಮ ಶ್ರೀಕೃಷ್ಣ, ಪುರಸಭೆ ಮಾಜಿ ಸದಸ್ಯೆ ನಾಗರತ್ನಮ್ಮ ಸಿದ್ದಪ್ಪಶೆಟ್ಟಿ, ಕೆಎಸ್ ಮಧುಸೂದನ್ ಸೇರಿದಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು. 

What's Your Reaction?

like

dislike

love

funny

angry

sad

wow