ಭಕ್ತ ಕನಕದಾಸರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಚಂದ ವಸೂಲಿ ಆಕ್ರೋಷ ವೈಕ್ತಪಡಿಸಿದ ಕುರುಬ ಸಮಾಜದ ಮುಖಂಡರು
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದಲ್ಲಿ ದಿನಾಂಕ 18 ರಂದು ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಭಕ್ತ ಕನಕದಾಸರ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದು..
ಈ ಕಾರ್ಯಕ್ರಮ ಮಾಡುವುದಾಗಿ ಬಹುತೇಕ ಸರ್ಕಾರಿ ಅಧಿಕಾರಿಗಳಿಗೆ ಸಂಘ ಸಂಸ್ಥೆಗಳಿಗೆ ಹಣದ ಬೇಡಿಕೆ ಇಟ್ಟಿರುವು ವಿಪರಿಯಾಸವಾಗಿದೆ.
ಕರ್ನಾಟಕ ಮಾನವ ಹಕ್ಕುಗಳ ಸೇವಾ ಸಮಿತಿಯಿಂದ ಕಾರ್ಯಕ್ರಮ ಆಯೋಜನೆ ಮಾಡುವುದಾದರೆ ಕನ್ನಡ ರಾಜ್ಯೋತ್ಸವವನ್ನು ಸ್ವಂತ ಹಣದಿಂದ ಮಾಡಲಿ ಆದರೆ ಭಕ್ತ ಕನಕ ದಾಸರ ಜಯಂತಿ ಮಾಡುವುದಾಗಿ ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಲೇಟರ್ ನೀಡಿ ಹಣ ನೀಡುವಂತೆ ಒತ್ತಾಯಿಸಿದ್ದು ಇದು ನಮ್ಮ ಸಮಾಜಕ್ಕೆ ಅವಮಾನ ಆಗುತ್ತಿದೆ..
ಇದರ ವಿರುದ್ದವಾಗಿ ಕಿಕ್ಕೇರಿ ಪೋಲೀಸ್ ಠಾಣೆಗೆ ದೂರು ನೀಡಲಾಗಿದ್ದು ಈ ಕರ್ನಾಟಕ ಮಾನವ ಹಕ್ಕುಗಳ ಸಮಿತಿಯ ಅಧ್ಯಕ್ಷ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಕ್ರೋಷ ವ್ಯಕ್ತಪಡಿಸಿದ್ರು..
ಈ ಸಂದರ್ಭದಲ್ಲಿ ತಾಲ್ಲೂಕು ಕುರುಬ ಸಂಘದ ತಾಲ್ಲೂಕು ಅಧ್ಯಕ್ಷರಾದ ಎಲ್ ಪಿ ನಂಜಪ್ಪ, ಜಿಲ್ಲಾ ಪಂಚಾಯಿ ಮಾಜಿ ಸದಸ್ಯ ಎಲ್ ಕೆ ಮಂಜುನಾಥ್, ಕುರುಬರ ಸಂಘದ ಉಪಾದ್ಯಕ್ಷ ಲಕ್ಷ್ಮೀಪುರ ಚಂದ್ರೇಗೌಡ್ರು, ತಾಲ್ಲೂಕು ಪಂಚಾಯಿ ಮಾಜಿ ಸದಸ್ಯ ಶಾಮಣ್ಣ ಗ್ರಾಮ ಪಂಚಾಯಿ ಮಾಜಿ ಸದಸ್ಯ ಕೃಷ್ಣೇಗೌಡ್ರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗಪ್ಪ, ಮುಖಂಡರಾದ ಕೆಂಪಣ್ಣ, ರಾಮಣ್ಣ, ಮಾದೇವಣ್ಣ, ಚಿಕ್ಕಣ್ಣ, ಶಿವಣ್ಣ, ಅಣ್ಣಯ್ಯಪ್ಪ ಸೇರಿದಂತೆ ಕುರುಬ ಸಮಾಜದ ಮತ್ತಿತ್ತರ ಮುಖಂಡರುಗಳು ಇದ್ದರು..
*ವರದಿ,ರಾಜು ಜಿಪಿ ಕಿಕ್ಕೇರಿ ಕೆಆರ್ ಪೇಟೆ*
What's Your Reaction?