ಕನ್ನಡ ಶಾಶ್ವತ ಸಾಮ್ರಾಜ್ಯ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ
ಬೆಂಗಳೂರಿನ ಡಾ. ರಾಜಕುಮಾರ್ ಸಮಾಧಿಯ ಎದುರಿನ ಕಂಠೀರವ ಸ್ಟುಡಿಯೋ ರಸ್ತೆ ನಂದಿನಿ ಬಡಾವಣೆ 1ನೇ ಬ್ಲಾಕ್ ಪರಿವಾರ ಗಣಪತಿ ಮತ್ತು ಚೌಡೇಶ್ವರಿ ದೇವಾಲಯದ ಆವರಣದಲ್ಲಿ ರಕ್ತದಾನ ಶಿಬಿರ ಆರೋಗ್ಯ ತಪಷಣೆ ಅನ್ನದಾನ ಹಾಗೂ ಸಿಹಿ ಹಚ್ಚುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಪ್ರತಿವರ್ಷದಂತೆ ಈ ವರ್ಷವೂ ಕನ್ನಡ ಶಾಶ್ವತ ಸಾಮ್ರಾಜ್ಯ ರಾಜ್ಯಸಂಸ್ಥಾಪಕ ಅಧಿಪತಿ ವಿ ನಾಗಪ್ಪ ರವರ ನೇತೃತ್ವದಲ್ಲಿ ಎಲ್ಲ ಪದಾಧಿಕಾರಿಗಳು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕನ್ನಡ ಶಾಶ್ವತ ಸಾಮ್ರಾಜ್ಯದ ಸಂಸ್ಥಾಪಕ ಅಧಿಪತಿಗಳಾದ ವಿ ನಾಗಪ್ಪನವರು ಮಾತನಾಡಿ ನಮ್ಮ ಸಂಘದಲ್ಲಿ ಕನ್ನಡ ಶಾಶ್ವತ ಉಳಿವಿಗಾಗಿ ಹಲವು ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಂಡು ಪವಿತ್ರ ಸ್ಥಳಗಳ ಮಣ್ಣನ್ನು ಸಂಗ್ರಹಿಸಿ ಶಕ್ತಿಪೀಠ ಮಾಡುವ ಮೂಲಕ ಚಾಲುತಿ ನೀಡಿದ್ದೇವೆ ಇದಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದಿಸುತ್ತ ಇವತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ರಕ್ತದಾನ ಮಾಡಿ ತಮ್ಮ ಆರೋಗ್ಯ ತಪಷಣೆ ಮಾಡಿಸಿಕೊಂಡು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ಸು ಗಳಿಸಿದ ತಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಹಾಗೂ ಹೃತ್ಪೂರ್ವಕವಾದ ಅಭಿನಂದಿಸುತ್ತೇನೆ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಹಾಗೂ ಜಿಲ್ಲಾ ಮತ್ತು ತಾಲೂಕು ಅಧಿಪತಿಗಳು ದಂಡನಾಯಕರು ಪದಾಧಿಕಾರಿಗಳು ಕನ್ನಡ ಅಭಿಮಾನಿಗಳು ಲಾರಿ ಮಾಲೀಕರು ಮತ್ತು ಚಾಲಕರು ಆಟೋ ಚಾಲಕರು ಸಂಘದ ಎಲ್ಲಾ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
What's Your Reaction?