ಕೆ.ಆರ್.ಪೇಟೆ : ಚಿಣ್ಣರ ಜಾಣರ ಜಗುಲಿ ಹಾಗೂ ಮಕ್ಕಳ ಹರಟೆ ಕಾರ್ಯಕ್ರಮ

ಕೆ.ಆರ್.ಪೇಟೆ  : ಚಿಣ್ಣರ ಜಾಣರ ಜಗುಲಿ ಹಾಗೂ ಮಕ್ಕಳ ಹರಟೆ ಕಾರ್ಯಕ್ರಮ

ಪರಮಪೂಜ್ಯ ಜಗದ್ಗುರು ಯುಗಯೋಗಿ ಪದ್ಮಭೂಷಣ ಭೈರವೈಕ್ಯ ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾದರನಾಥ ಮಹಾಸ್ವಾಮೀಜಿಗಳರವರ 80 ವರ್ಷದ ಜನ್ಮದಿನೋತ್ಸವ ಹಾಗೂ 11 ನೇ ವರ್ಷದ ಪುಣ್ಯಸಂಸ್ಕರಣೆ ಕಾರ್ಯಕ್ರಮದ ಅಂಗವಾಗಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗಳರವರ ದಿವ್ಯ ಆಶೀರ್ವಾದಗಳೊಂದಿಗೆ ಕೆ.ಆರ್.ಪೇಟೆಯ ಬಿಜಿಎಸ್ ಶಾಖಾಮಠದ ವತಿಯಿಂದ ನಡೆಯುತ್ತಿರುವ ಶಾಲೆಯ ಮಕ್ಕಳ ಭೌತಿಕ ಮತ್ತು ಮಾನಸಿಕ ವಿಕಸನಕ್ಕೆ ಪೂರಕವಾಗುವಂತೆ ಚಿಣ್ಣರ ಜಾಣರ ಜಗಲಿ

 ಎಂಬ ವಿನೂತನ ಮಕ್ಕಳ ಹರಟೆ ಕಾರ್ಯಕ್ರಮವನ್ನು ಕೆ.ಆರ್.ಪೇಟೆ ತಾಲ್ಲೂಕಿನ ಸಮಾಜ ಸೇವಕರಾದ ಮಲ್ಲಿಕಾರ್ಜುನರವರ ಪ್ರಾಯೋಜಕತ್ವದಲ್ಲಿ, ಬಿಜಿಎಸ್ ಶಾಖಾಮಠದ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡ ರವರ ಮಾರ್ಗದರ್ಶನದಲ್ಲಿ ಬಿಜಿಎಸ್ ಎಜುಕೇಷನ್ ಸೆಂಟರ್ ಕೆ.ಆರ್.ಪೇಟೆಯಲ್ಲಿ ಹರಟೆ ಖ್ಯಾತಿಯ ಶ್ರೀಮತಿ ಸುಧಾ ಬರಗೂರು ರವರ ಸಾರಥ್ಯದಲ್ಲಿ ಮಕ್ಕಳ ಚಿಣ್ಣರ ಜಾಣರ ಜಗಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಗಳ ಪಾದಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಶುಭ ಚಾಲನೆ ಮಾಡುವ ಜೊತೆಗೆ ಗುರು ಹಿರಿಯರು ಹಾಗೂ ತಂದೆ ತಾಯಿಗಳನ್ನು ಗೌರವಿಸುವ ಪರಂಪರೆಗೆ ಮುನ್ನುಡಿ ಬರೆದಿದ್ದು ವಿಶೇಷವಾಗಿತ್ತು,

 *ವರದಿ,ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow