ಶ್ರೀರಾಮಚಂದ್ರನ ಆದರ್ಶಗಳು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ವಾಲ್ಮೀಕಿ ರಾಮಾಯಣ ದಾರಿದೀಪವಾಗಿವೆ

ಶ್ರೀರಾಮಚಂದ್ರನ ಆದರ್ಶಗಳು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ವಾಲ್ಮೀಕಿ ರಾಮಾಯಣ ದಾರಿದೀಪವಾಗಿವೆ

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಆದರ್ಶ

ಗುಣಗಳು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದಾರಿದೀಪವಾಗಿವೆ ಎಂದು

ಸಮಾಜಸೇವಕ ಚಂದ್ರಶೇಖರ್ ಹೇಳಿದರು.

ಅವರು ಕೆ ಆರ್ ಪೇಟೆ ತಾಲೂಕಿನ ಕಸಬಾ ಹೋಬಳಿಯ ಲಕ್ಷ್ಮೀಪುರ ಗ್ರಾಮದ ಶ್ರೀಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ನೂತನ ಗರುಡ ಗಂಭದ

ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ನೆರೆದಿದ್ದ ಭಕ್ತವೃಂದವನ್ನು ಉದ್ಧೇಶಿಸಿ ಮಾತನಾಡಿದರು.

ಪಿತೃವಾಕ್ಯ ಪರಿಪಾಲಕನಾಗಿ, ದುಷ್ಠಶಕ್ತಿಗಳ ಸಂಹಾರ ಮಾಡಿ, ನ್ಯಾಯ, ನೀತಿ ಹಾಗೂ ಧರ್ಮದ ಪರವಾಗಿ ಆಡಳಿತ ನಡೆಸಿ ಶ್ರೀಸಾಮಾನ್ಯರ ನೋವಿಗೆ ಧನಿಯಾದ ಶ್ರೀರಾಮಚಂದ್ರ ಮಹಾಪ್ರಭುವಿನ ಆದರ್ಶ ಗುಣಗಳು ಯುವಜನರಿಗೆ ದಾರಿದೀಪವಾಗಿವೆ. ತಂದೆತಾಯಿಗಳು ಹಾಗೂ

ಗುರುಹಿರಿಯರನ್ನು ಗೌರವಿಸುವ ಸದ್ಗುಣಗಳನ್ನು ರೂಢಿಸಿಕೊಂಡು

ಸಮಾಜಮುಖಿಯಾಗಿ ಮುನ್ನಡೆಯಲು ಮಾರ್ಗದರ್ಶಿಯಾಗಿರುವ ಶ್ರೀರಾಮಚಂದ್ರ ಪ್ರಭುವಿನ ಆಡಳಿತವು ಇಂದಿನ ರಾಮರಾಜ್ಯದ ಕನಸಿಗೆ ದಾರಿಮಾರ್ಗವಾಗಿದೆ.

ತಂದೆತಾಯಿಗಳು ಹಾಗೂ ಗುರುಹಿರಿಯರನ್ನು ಗೌರವಿಸುವ

ಸದ್ಗುಣಗಳನ್ನು ನಮಗೆ ವರವಾಗಿ ನೀಡಿರುವ ಶ್ರೀರಾಮನ ಸದ್ಗುಣಗಳು

ನಮ್ಮ ಜೀವನಕ್ಕೆ ದಾರಿ ಮಾರ್ಗವಾಗಿದೆ ಎಂದು ಹೇಳಿದ ಚಂದ್ರಶೇಖರ್ ಲಕ್ಷ್ಮೀಪುರ ಗ್ರಾಮದಲ್ಲಿ ದಾನಿಗಳಾದ ಕುಮಾರಸ್ವಾಮಿ ಅವರು ತಮ್ಮ

ತಂದೆತಾಯಿಗಳಾದ ಶ್ರೀಮತಿ.ಶ್ರೀ ಬೋರಾಜಮ್ಮ ರಾಜೇಗೌಡರ

ಸವಿನೆನಪಿಗಾಗಿ ೩ಲಕ್ಷರೂ ವೆಚ್ಚದಲ್ಲಿ ಗರುಡಗಂಭವನ್ನು

ನಿರ್ಮಿಸಿಕೊಡಲು ಮುಂದೆ ಬಂದಿರುವುದು ಸ್ವಾಗತಾರ್ಹವಾಗಿದೆ. ನಮ್ಮ

ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ

ದೇವಾಲಯಗಳನ್ನು ಉಳಿಸಿ ನಮ್ಮ ಮುಂದಿನ ತಲೆಮಾರಿಗೆ ಜೋಪಾನ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರ ಕಾಳಜಿಯು ಎಲ್ಲರೂ

ಮೆಚ್ಚುವಂತಹದ್ದಾಗಿದೆ ಎಂದು ಹೇಳಿದರು.

ಸಮಾಜ ಸೇವಕರು ಹಾಗೂ ದಾನಿಗಳಾದ ಲಕ್ಷ್ಮೀಪುರ ಎಲ್.ಆರ್.ಕುಮಾರಸ್ವಾಮಿ ಮಾತನಾಡಿ ಶ್ರೀರಾಮಚಂದ್ರ

ಮಹಾಪ್ರಭುವಿನ ಆದರ್ಶ ಹಾಗೂ ಜನಪರವಾದ ಆಡಳಿತವು ನಮ್ಮ

ಪ್ರಜಾಪ್ರಭುತ್ವದ ಆಡಳಿತಕ್ಕೆ ದಾರಿಮಾರ್ಗವಾಗಿದೆ. ರಾಮರಾಜ್ಯದ

ಪರಿಕಲ್ಪನೆಯಲ್ಲಿಯೇ ಪ್ರಜಾಪ್ರಭುತ್ವ ಆಡಳಿತವು ರೂಪಿತವಾಗಿದ್ದು

ಶ್ರೀರಾಮಚಂದ್ರನ ಆಡಳಿತವು ವಿಶ್ವಮಾನ್ಯವಾಗಿದ್ದು, ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ತಳಹದಿಯಾಗಿದೆ ಎಂದು ಹೇಳಿದರು. ಗ್ರಾಮದ

ಮುಖಂಡರಾದ ಸುರೇಶ್, ಮರಿದೇವೇಗೌಡ, ದಶರಥ, ಸ್ವಾಮಿನಾಯಕ,

ಪಟೇಲ್ ಮಂಜೇಗೌಡ, ಸೈಯ್ಯದ್‌ಖಲೀಲ್, ಕೆ.ಆರ್.ನೀಲಕಂಠ, ಮೋಹನ್,

ಸ್ವಾಮಿಗೌಡ, ಮಂಜು, ಲಕ್ಷ್ಮಮ್ಮ ಸೇರಿದಂತೆ ನೂರಾರು ಜನರು

ಗರುಡಗಂಭದ ಭೂಮಿಪೂಜೆ ಹಾಗೂ ಕಾರ್ತೀಕ ದೀಪೋತ್ಸವ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 *ವರದಿ:ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ,*

What's Your Reaction?

like

dislike

love

funny

angry

sad

wow