ಚನ್ನರಾಯಪಟ್ಟಣ: ಧರ್ಮಸ್ಥಳದ ಸೌಜನ್ಯಗೌಡಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರೀಕ ಸಮಾಜವು ತುಂಬಾ ಆತಂಕಕ್ಕೆ

ಚನ್ನರಾಯಪಟ್ಟಣ: ಧರ್ಮಸ್ಥಳದ ಸೌಜನ್ಯಗೌಡಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರೀಕ ಸಮಾಜವು ತುಂಬಾ ಆತಂಕಕ್ಕೆ

ಚನ್ನರಾಯಪಟ್ಟಣ: ಧರ್ಮಸ್ಥಳದ ಸೌಜನ್ಯಗೌಡಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರೀಕ ಸಮಾಜವು ತುಂಬಾ ಆತಂಕಕ್ಕೆ ಒಳಗಾಗಿದ್ದು ಈ ಬಗ್ಗೆ ಇಡೀ ರಾಜ್ಯದಲ್ಲಿ ವಿವಿಧ ಸಂಘ ಸಂಸ್ಥೆಗಳು ನ್ಯಾಯ ಕೊಡಿಸಲು ಮತ್ತು ಮರು ತನಿಖೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರದ ಗಮನ ಸೆಳೆಯವ ಉದ್ದೇಶದಿಂದ ಇಂದು ಚನ್ನರಾಯಪಟ್ಟಣದ ವಿನಾಯಕ ಕಾ‌ರ್ ಸ್ಟ್ಯಾಂಡ್ ಆವರಣದಲ್ಲಿ 40 ಅಡಿ ಆಂಜನೇಯ ಪ್ರತಿಮೆಯ ಮುಂಭಾಗ ಬೃಹತ್ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಅತ್ಯಚಾರಗಳಿಗೆ ಹಾಗೂ ಅವರಿಗೆ ಕುಮ್ಮಕ್ಕು ನೀಡುತ್ತಿರುವ ಕಾಮುಕ ಸಮೂಹಕ್ಕೆ ಎಚ್ಚರಿಕೆ ಗಂಟೆಯನ್ನು ನೀಡಲಾಗುತ್ತಿದೆ ಎಂದು ಸೌಜನ್ಯ ಪರ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ತಿಳಿಸಿದರು. ಧರ್ಮಸ್ಥಳದ

ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಚನ್ನರಾಯಪಟ್ಟಣ ನಗರದ ಮೂಲಕ ಜನತಾ ನ್ಯಾಯಾಲಯದ ಮುಖಾಂತರ ಸೌಜನ್ಯಳಿಗೆ ನ್ಯಾಯ ಸಿಗುವಂತೆ ಹೋರಾಟ ಮಾಡುವ ಮೂಲಕ ಈ ನಾಡಿನ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇಂದು ಸೃಷ್ಟಿಯಾಗಿದೆ, ಸೌಜನ್ಯಳ ಮೇಲೆ ಅತ್ಯಾಚಾರ ಮಾಡಿದ ಅತ್ಯಾಚಾರಿಗಳನ್ನು ಈ ಕೂಡಲೇ ಬಂಧಿಸಿ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕೆಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಲಾಯಿತು. ಒಕ್ಕಲಿಗ ಸಮಾಜದ ಹೆಣ್ಣು ಮಗಳಾದ ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಆದರೆ ಈ ಅತ್ಯಾಚಾರ ಮತ್ತು ಕೊಲೆಯನ್ನು ಮುಚ್ಚು ಹಾಕುವಲ್ಲಿ ಒಕ್ಕಲಿಗ ಸಮಾಜದ ರಾಜಕೀಯ ವ್ಯಕ್ತಿಗಳ ಕೈವಾಡವಿರುವುದು ಇಡೀ ಒಕ್ಕಲಿಗ ಸಮಾಜವೇ ತಲೆತಗ್ಗಿಸುವಂತಹ ಘಟನೆ ಎಂದು ಆಕ್ರೋಶ ವ್ಯಕ್ತಪಡಿಸಿದರು, ಸೌಜನ್ಯ ಅತ್ಯಾಚಾರ ಮತ್ತು ಕೊಲೆ ನಡೆದ ಬೆಳಿಗ್ಗೆ ಐದಾರು ಜನ ರಾಜ್ಯದ ಪ್ರಭಾವಿ ಮಂತ್ರಿಗಳು ಆಗಮಿಸಿ ಸೌಜನ್ಯಗೆ ನ್ಯಾಯ ಕೊಡಿಸುವ ಭರವಸೆ ನೀಡಿ ಅನಂತರ ಸೌಜನ್ಯಳ ಕೇಸನ್ನು ಮುಚ್ಚುವಲ್ಲಿ ಆ ಐದಾರು ಜನ ಮಂತ್ರಿಗಳು ಯಶಸ್ವಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಒಕ್ಕಲಿಗ ಸಮಾಜದ ಮುಖ್ಯಮಂತ್ರಿ ಆ ದಿನ ಅಧಿಕಾರದಲ್ಲಿದ್ದರೂ ಸಹ ಒಕ್ಕಲಿಗ ಸಮಾಜದ ಹೆಣ್ಣು ಮಗಳಿಗೆ ನ್ಯಾಯ ಕೊಡಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದಾರೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.

 ಇದೇ ಸಂದರ್ಭದಲ್ಲಿ ಸೌಜನ್ಯಳ ತಾಯಿ ಕುಸುಮ ಮಾತನಾಡಿ ಇಡೀ ರಾಜ್ಯದ್ಯಂತ ಜನತಾ ನ್ಯಾಯಾಲಯದ ಮೂಲಕ ನ್ಯಾಯವನ್ನು ಪಡೆಯುವ ಸಲುವಾಗಿ ಈ ದಿನ ಚನ್ನರಾಯಪಟ್ಟಣದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮೂಲಕ ಅತ್ಯಾಚಾರಿಗಳ ವಿರುದ್ಧ ಹೋರಾಟದ ಕಿಚ್ಚನ್ನು ಆರಂಭಿಸಲಾಗಿದೆ, ನಮ್ಮ ಕುಟುಂಬಕ್ಕೆ ಆದ ಅನ್ಯಾಯ ಯಾವುದೇ ಕುಟುಂಬಕ್ಕೆ ನಡೆಯಬಾರದು ಎಂಬ ಉದ್ದೇಶದಿಂದ ಈ ಹೋರಾಟವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು, ದೊಡ್ಡೇರಿ ಶ್ರೀಕಂಠ ಮಾತನಾಡಿ ಸೌಜನ್ಯಳ ತಾಯಿ ಹಾಗೂ ಅವರ ಕುಟುಂಬದವರು ಮಗಳಿಗೆ ನ್ಯಾಯ ಕೊಡಿಸುವ ಸಲುವಾಗಿ ಇಡೀ ರಾಜ್ಯ ವ್ಯಾಪ್ತಿ ಹಲವಾರು ಸಂಘ ಸಂಸ್ಥೆಗಳು ಬೆಂಬಲ ಕೋರಿದ್ದು , ಚನ್ನರಾಯಪಟ್ಟಣದ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆಯಲ್ಲಿ ಭಾಗವಹಿಸುವ ಸೌಜನ್ಯಳ ಪರ ಹೋರಾಟಕ್ಕೆ ಬೆಂಬಲವನ್ನು ನೀಡಲಾಗಿದೆ ಎಂದು ತಿಳಿಸಿದರು, ಮಾನ್ಯ ಮುಖ್ಯಮಂತ್ರಿಗಳು ಸೌಜನ್ಯಳ ಪರವಾಗಿ ನ್ಯಾಯ ಒದಗಿಸಿ ಕೊಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. ದಂಡೋರ ಮಂಜುನಾಥ್ ಮಾತನಾಡಿ ಅತ್ಯಾಚಾರ ನಡೆದಿರುವ ಸೌಜನ್ಯಗೌಡ ಎಂಬ ಹೆಣ್ಣುಮಗಳ ಪರವಾಗಿ ನಿರಂತರ ಹೋರಾಟ

 ನಡೆಸಲಾಗುವುದು, ಸೌಜನ್ಯಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಕಾಮುಕರ ವಿರುದ್ಧ ಜನತಾ ನ್ಯಾಯಾಲಯದ ಮುಖಾಂತರ ಬೀದಿಗಿಳಿದು ಹೋರಾಟ ಮಾಡಿ ಶಿಕ್ಷೆಗೆ ಗುರಿ ಪಡಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯಳ ತಾಯಿ ಕುಸುಮ, ರೈತ ಸಂಘದ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ, ನಾರಾಯಣ ರೆಡ್ಡಿ, ರಾಜ್ಯ ಉಪಾಧ್ಯಕ್ಷ ಮಂಜುನಾಥ್, ಮೈಸೂರಿನ ಒಡನಾಡಿ ಸಂಸ್ಥೆಯ ಅಧ್ಯಕ್ಷರಾದ ಪುರುಷೋತ್ತಮ್, ಪರಶುರಾಮ್, ಸ್ಟಾಲಿನ್,ಮಹಿಳಾ ಘಟಕದ ರಾಜ್ಯ ಅಧ್ಯಕ್ಷರಾದ ನಾಗರತ್ನ, ರೈತ ಸಂಘದ ವಕ್ತಾರ ದೊಡ್ಡೇರಿ ಶ್ರೀಕಂಠ, ದಲಿತ ಮುಖಂಡರು ಮಂಜುನಾಥ್, ದಿಂಡಗೂರು ಗೋವಿಂದರಾಜ್, ಧರ್ಮಯ್ಯ, ಜಿಲ್ಲಾಧ್ಯಕ್ಷ ಮೀಸೆ ಮಂಜಣ್ಣ ಮತ್ತು ತಾಲೂಕು ಅಧ್ಯಕ್ಷ ರವಿ , ಸಾಮಾಜಿಕ ಹೋರಾಟಗಾರ ರಾಜಕುಮಾರ್, ಜಾವೇದ್ ಸೇರಿದಂತೆ ಇತರರು ಹಾಜರಿದ್ದರು.

What's Your Reaction?

like

dislike

love

funny

angry

sad

wow