*ಕೃಷ್ಣರಾಜಪೇಟೆ ಪಟ್ಟಣದ ಅಭಿವೃದ್ಧಿಯ ವಿಚಾರದಲ್ಲಿ ನಾನು ರಾಜಕಾರಣ ಮಾಡಲ್ಲ, ಎಲ್ಲರೂ ಒಂದಾಗಿ ಸೇರಿ ಪಕ್ಷಾತೀತವಾಗಿ ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸೋಣ ಎಂದು ಶಾಸಕ ಎಚ್ ಟಿ ಮಂಜು ಹೇಳಿದರು

*ಕೃಷ್ಣರಾಜಪೇಟೆ ಪಟ್ಟಣದ ಅಭಿವೃದ್ಧಿಯ ವಿಚಾರದಲ್ಲಿ ನಾನು ರಾಜಕಾರಣ ಮಾಡಲ್ಲ, ಎಲ್ಲರೂ ಒಂದಾಗಿ ಸೇರಿ ಪಕ್ಷಾತೀತವಾಗಿ ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸೋಣ ಎಂದು ಶಾಸಕ ಎಚ್ ಟಿ ಮಂಜು ಹೇಳಿದರು

*ಕೃಷ್ಣರಾಜಪೇಟೆ ಪಟ್ಟಣದ ಅಭಿವೃದ್ಧಿಯ ವಿಚಾರದಲ್ಲಿ ನಾನು ರಾಜಕಾರಣ ಮಾಡಲ್ಲ, ಎಲ್ಲರೂ ಒಂದಾಗಿ ಸೇರಿ ಪಕ್ಷಾತೀತವಾಗಿ ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸೋಣ ಎಂದು ಶಾಸಕ ಎಚ್ ಟಿ ಮಂಜು ಹೇಳಿದರು* .

ಕೆ ಆರ್ ಪೇಟೆ ಪುರಸಭಾ ವತಿಯಿಂದ ನೀಡಿದ ಪೌರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶಾಸಕ ಮಂಜು ಒಳಚರಂಡಿ ಸಮಸ್ಯೆ ಸೇರಿದಂತೆ ಕೆ ಆರ್ ಪೇಟೆ ಪಟ್ಟಣದಲ್ಲಿ ಹಲವಾರು ಸಮಸ್ಯೆಗಳಿವೆ.. ಪಟ್ಟಣದ ಜನತೆ ಪುರಸಭಾ ಕಚೇರಿಗೆ ಅಲೆಯುತ್ತಿದ್ದಾರೆ. ನಿವೇಶನ ಸೇರಿದಂತೆ ಮನೆಗಳ ಈ ಸ್ವತ್ತು ಮಾಡಿಕೊಡಲು ವಿನಾಕಾರಣ ಸತಾಯಿಸಲಾಗು ತ್ತಿದೆ. ಜನಸಾಮಾನ್ಯರ ಕಾನೂನು ಬದ್ಧವಾದ ಕೆಲಸ ಕಾರ್ಯಗಳನ್ನು ನಿಗದಿತ ಅವಧಿ ಒಳಗೆ ಮಾಡಿ ಕೊಡುವ ಮೂಲಕ ಪುರಸಭಾ ಸಿಬ್ಬಂದಿಗಳು ಬದ್ಧತೆಯನ್ನು ಮರೆಯಬೇಕು ಎಂದು ಕಿವಿಮಾತು ಹೇಳಿದ ಶಾಸಕರು ಕೆ.ಆರ್.ಪೇಟೆ ಪಟ್ಟಣದ ಅಭಿವೃದ್ಧಿಗೆ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ಪಟ್ಟಣದ ಹೇಮಾವತಿ ಬಡಾವಣೆ ಮತ್ತು ಟಿಬಿ ಬಡಾವಣೆಯ ನಿವೇಶನಗಳ ಸಮಸ್ಯೆಗೆ ಶಾಶ್ವತವಾಗಿ ಪರಿಹಾರವನ್ನು ಕಂಡು ಹಿಡಿಯಲು ಸಂಬಂಧಿಸಿದ ಪೌರಾಡಳಿತ ಇಲಾಖೆಯ ಮಂತ್ರಿಗಳ ಬಳಿ ನಿಯೋಗ ಹೋಗಲು ನಿಮ್ಮೊಂದಿಗೆ ನಾನು ಬರುತ್ತೇನೆ. ನಗರೋತ್ತಾನ ಅನುದಾನ ಸೇರಿದಂತೆ ನೆನಗುದಿಗೆ ಬಿದ್ದಿರುವ ಒಳಚರಂಡಿ ಯೋಜನೆಯನ್ನು ಸಂಪೂರ್ಣಗೊಳಿಸಲು ಪುರಸಭೆಯೊಂದಿಗೆ ನಾನು ಒಗ್ಗೂಡಿ ಕೆಲಸ ಮಾಡುತ್ತೇನೆ ಎಂದು ಹೇಳಿದ ಶಾಸಕ ಮಂಜು ಇಂದು ಪುರಸಭಾ ವತಿಯಿಂದ ಪ್ರತಿಭಾನ್ವಿತ ಮಕ್ಕಳಿಗೆ ಉಚಿತವಾಗಿ ಲ್ಯಾಪ್ಟಾಪ್‌ಗಳನ್ನು ವಿತರಿಸಲಾಗಿದೆ. ಪುರಸಭಾ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ ಚನ್ನಪಟ್ಟಣ ನಗರ ಸಭೆಗೆ ವರ್ಗಾವಣೆಗೊಂಡಿರುವ ಸಹಾಯಕ ಇಂಜಿನಿಯರ್ ಮಧುಸೂದನ್, ಲೆಕ್ಕಾಧಿಕಾರಿ ಚಂದ್ರಕಲಾ ಹಾಗೂ ಶ್ರೀರಂಗಪಟ್ಟಣ ಪುರಸಭೆಗೆ ವರ್ಗಾವಣೆಯಾಗಿರುವ ಕಚೇರಿಯ ವ್ಯವಸ್ಥಾಪಕ ಸೋಮಶೇಖರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು..

ಶಾಸಕ ಮಂಜು ಅವರಿಗೆ ಪುರಸಭೆ ವತಿಯಿಂದ ನೀಡಿದ ಪೌರಸನ್ಮಾನ ಕಾರ್ಯಕ್ರಮದಲ್ಲಿ ಪುರಸಭೆಯ ಎಲ್ಲಾ 23 ಸದಸ್ಯರು ಭಾಗವಹಿಸಿದ್ದರೆ, ನಂತರ ಪುರಸಭಾಧ್ಯಕ್ಷ ಮಹಾದೇವಿ ನಂಜುಂಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಗಾಯಿತ್ರಿಸುಬ್ಬಣ್ಣ, ಪ್ರಮೋದ್ ಕುಮಾರ್, ಬಸ್ ಸಂತೋಷ್ ಕುಮಾರ್, ಎಚ್. ಆರ್.ಲೋಕೇಶ್, ಕೆ.ಸಿ. ಮಂಜುನಾಥ್, ಡಿ ಪ್ರೇಮ ಕುಮಾರ್, ಹೊಸ ಹೊಳಲು ಪ್ರವೀಣ್, ಶುಭಗಿರೀಶ್, ಶೋಭಾದಿನೇಶ್ ಭಾಗವಹಿಸಿ ವಿವಿಧ ವಿಷಯಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಿ ಒಪ್ಪಿಗೆ ಸೂಚಿಸಿದರು.

ಪುರಸಭಾ ಅಧ್ಯಕ್ಷ ಮಹಾದೇವಿ ನಂಜುಂಡ ಅವರ ವಿರುದ್ಧ ಬಂಡಾಯವೆದ್ದಿರುವ 13 ಸದಸ್ಯರು ಕಾಂಗ್ರೆಸ್ ನಾಯಕ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಅವರ ಸಹೋದರ ಪುರಸಭೆ ಮಾಜಿ ಅಧ್ಯಕ್ಷ ಕೆ.ಬಿ. ಮಹೇಶ್ ನೇತೃತ್ವದಲ್ಲಿ ಶಾಸಕರ ಪೌರ ಸನ್ಮಾನಕ್ಕೆ ಆಗಮಿಸಿ ಸನ್ಮಾನ ಕಾರ್ಯಕ್ರಮ ನಡೆದ ನಂತರ ಸಾಮಾನ್ಯ ಸಭೆಯಲ್ಲಿ ಭಾಗವಹಿಸದೆ ಸಭೆಯಿಂದ ಹೊರ ನಡೆದರು. ಸದಸ್ಯರಾದ ಸುಗುಣ ರಮೇಶ್, ಕಮ್ಮರ್ ಬೇಗಮ್ ಸಲ್ಲು, ಕಲ್ಪನಾ ದೇವರಾಜು, ಸೌಭಾಗ್ಯ ಉಮೇಶ್, ಪದ್ಮ ರಾಜು, ಇಂದ್ರಾಣಿ ವಿಶ್ವನಾಥ್, ಶಾಮಿಯಾನ ತಿಮ್ಮೇಗೌಡ, ಎಚ್ ಡಿ ಅಶೋಕ್, ಗಿರೀಶ್, ರವೀಂದ್ರ ಬಾಬು, ನಟರಾಜ್ ಹಾಗೂ ಪಂಕಜ ಪ್ರಕಾಶ್ ಕೆ. ಆರ್.ಪೇಟೆ ಶಾಸಕ ಎಚ್ ಟಿ ಮಂಜು ಅವರನ್ನು ಪ್ರತ್ಯೇಕವಾಗಿ ಸನ್ಮಾನಿಸಿ ಗೌರವಿಸಿದರು.

 ಪುರಸಭಾ ಮುಖ್ಯಾಧಿಕಾರಿ ಬಸವರಾಜು ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಸದಸ್ಯರು ಹಾಗೂ ಅತಿಥಿಗಳನ್ನು ಹೃದಯಸ್ಪರ್ಶಿಯಾಗಿ ಸ್ವಾಗತಿಸಿದರು.

 *ವರದಿ ರಾಜು ಜಿಪಿ ಕಿಕ್ಕೇರಿ*

What's Your Reaction?

like

dislike

love

funny

angry

sad

wow