ತೂಬಿನಕೆರೆಯಲ್ಲಿ ಗೋವಿನ ಮೂಳೆಗಳ ರಾಶಿ. ಗೋಹತ್ಯೆ ನಿಷೇಧ ನಾಮಕಾವಸ್ಥೆ. ಕಣ್ಣುಮುಚ್ಚಿ ಕುಳಿತ ಪೊಲೀಸ್

ಮಂಡ್ಯ: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಗೋ ಹತ್ಯೆ ಅನ್ನೋದು ಅವ್ಯಹತವಾಗಿ ನಡೀತಿದೆಯಾ ಅನ್ನೋದಕ್ಕೆ ಮಂಡ್ಯ ತಾಲ್ಲೂಕು ತೂಬಿನಕೆರೆ ಗ್ರಾಮದಲ್ಲಿ ಪತ್ತೆಯಾಗಿರುವ ರಾಶಿರಾಶಿ ಗೋವಿನ ಮೂಳೆಗಳು ಸಾಕ್ಷಿಯಾಗಿವೆ.
ತೂಬಿನಕೆರೆ ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗಿದ್ದ ಶೆಡ್‌ನಲ್ಲಿ ರಾಶಿ ರಾಶಿ ಮೂಳೆಗಳು ಪತ್ತೆಯಾಗಿವೆ. ನೂರಾರು ಗೋವಿನ ತಲೆ ಮೂಳೆ, ಬೆನ್ನು ಮೂಳೆ ಸೇರಿದಂತೆ ಅಪಾರ ಪ್ರಮಾಣದ ಮೂಳೆಗಳು ಪತ್ತೆಯಾಗಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಗ್ರಾಮದ ನಿಂಗರಾಜು ಎಂಬುವರ ಜಮೀನಿನಲ್ಲಿ ಪತ್ತೆಯಾಗಿರೊ ಮೂಳೆಗಳ ರಾಶಿಯನ್ನು ಕಂಡು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೆ ಶೆಡ್ ನಿರ್ಮಿಸಲು ಅವಕಾಶ ಕೊಟ್ಟಿದ್ದ ನಿಂಗರಾಜು ಅವರಿಗೆ ಸಂಬಧಿಸಿದ ಜಾಗದಲ್ಲಿ ಶೆಡ್ ನಿರ್ಮಿಸಿ ಕಬ್ಬಿಣ ಹಾಕುವುದಾಗಿ ಹೇಳಿದ್ದ ಅನ್ಯಕೋಮಿನ ವ್ಯಕ್ತಿ ಗೋವುಗಳನ್ನು ಈ ಜಾಗದಲ್ಲಿ ಕಡಿದು ಮೂಳೆಗಳನ್ನು ಸಂಗ್ರಹಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಸ್ಥಳೀಯರಿಗೆ ಕಬ್ಬಿಣ ಹಾಕಲು ಶೆಡ್ ನಿರ್ಮಿಸುತ್ತಿರುವುದಾಗಿ ಹೇಳಿದ್ದ ಆ ವ್ಯಕ್ತಿ ನಂತರ ಈ ಕೃತ್ಯವೆಸಗಿದ್ದು ದನಕರು ಮೇಯಿಸಲು ಬರುತ್ತಿದ್ದವರಿಗೆ, ಸುತ್ತಮುತ್ತಲ ಜಮೀನಿನಲ್ಲಿ ಕೆಲಸ ಮಾಡುವವರಿಗೆ ದುರ್ನಾತ ಬೀರಿ ಅನುಮಾನಗೊಂಡು ಮಾಧ್ಯಮಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.
ದುರ್ನಾತ ತಡೆಯಲಾಗದೆ ಶೆಡ್ ಬಾಗಿಲು ತೆಗೆದು ನೋಡಿದ ಗ್ರಾಮದ ಯುವಕರು ರಾಶಿ ರಾಶಿ ಗೋವುಗಳ ಮೂಳೆಗಳನ್ನ ಕಂಡು ದಂಗಾಗಿದ್ದಾರೆ.
ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಪತ್ತೆ, ಹತ್ಯೆ ಕೇಸ್ ಮಾಸುವ ಮುನ್ನವೇ ಸದ್ದು ಮಾಡುತ್ತಿರೊ ಮೂಳೆಗಳ ರಾಶಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಮೂಳೆಗಳನ್ನ ಪೌಡರ್ ಮಾಡಿ ಆಲೆ ಮನೆಗಳಿಗೆ ಬಳಕೆ ಮಾಡಲಾಗ್ತಿತ್ತು ಎಂಬ ಆರೋಪವೂ ಕೇಳಿ ಬಂದಿದ್ದು ಇದ್ರ ಬಗೆಗೂ ತನಿಖೆ ನಡೆಸುವಂತೆ ಒತ್ತಾಯಿಸಿರೋ ಗ್ರಾಮಸ್ಥರು ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲದಿನಗಳ ಹಿಂದೆ ಸ್ಥಳೀಯ ಪಿಡಿಒ ಗಮನಕ್ಕೆ ತಂದರೂ ಶೆಡ್ ತೆರವುಗೊಳಿಸದೆ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಮಂಡ್ಯ ಸುದ್ದಿ*
ವರದಿಗಾರರು:-ಪ್ರತಾಪ್. ಎ. ಬಿ
What's Your Reaction?






