ಚನ್ನರಾಯಪಟ್ಟಣ: ಶಂಕರ್ ನಾಗ್ ಅವರ ಜನ್ಮದಿನಾಚರಣೆಯನ್ನು ಆಚರಿಸಿದ ಆಟೋ ಚಾಲಕರು
ಚನ್ನರಾಯಪಟ್ಟಣ ಕುವೆಂಪು ವೃತ್ತದಲ್ಲಿರುವ ಶಂಕರ್ ನಾಗ್ ಆಟೋ
ನಿಲ್ದಾಣ ವತಿಯಿಂದ ಶಂಕರ್ ನಾಗ್ ಜನ್ಮದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಕನ್ನಡದ ಬಾವುಟದ ಧ್ವಜವನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಿ ಕೆ ಕುಸುಮರಾಣಿ ಧ್ವಜಾರೋಹಣ ಮಾಡಿದರು, ಕಾರ್ಯಕ್ರಮದಲ್ಲಿ ಮಾತನಾಡಿದ ಕುಸುಮರಾಣಿ ಎಲ್ಲಾ ಆಟೋ ಚಾಲಕರು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸಬೇಕು, ಎಲ್ಲರೂ ಒಗ್ಗಟ್ಟಿನಿಂದ ಜೀವನ ನಡೆಸಬೇಕು, ಪ್ರತಿಯೊಬ್ಬರು ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದರು, ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸುವ ಕೆಲಸ ಮಾಡುತ್ತಿರುವುದು ಆಟೋ
ಚಾಲಕರು ಎಂದು ಶಂಕರ್ ನಾಗ್ ನಂತಹ ಮಹಾನ್ ಕಲಾವಿದನನ್ನು ನಾವು ಪಡೆದಿರುವುದು ನಮ್ಮ ಸೌಭಾಗ್ಯವಾಗಿದೆ ಕರ್ನಾಟಕಕ್ಕೆ ತಮ್ಮದೇ ಆದ ಕೊಡುಗೆಯನ್ನು ಶಂಕರ್ ನಾಗ್ ಅವರು ನೀಡಿದ್ದಾರೆ, ಶಂಕರ್ ನಾಗ್ ಅವರ ಕೊಡುಗೆಯನ್ನು ಸ್ಮರಿಸಿ ಕೊಳ್ಳಲಾಯಿತು,ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ ಕೆ ಕುಸುಮರಾಣಿ,ಮಾಜಿ ಅಧ್ಯಕ್ಷರು ಹಾಗೂ ಪುರಸಭಾ ಸದಸ್ಯರಾದ ಸಿ ಎನ್ ಶಶಿಧರ್, ಡಾಕ್ಟರ್ ದಿವ್ಯ, ಡಾಕ್ಟರ್ ಮಂಜುನಾಥ್, ಶಂಕರ್ ನಾಗ್ ಆಟೋ ನಿಲ್ದಾಣದ ಅಧ್ಯಕ್ಷರಾದ ಎ ಎಸ್ ಕುಮಾರ್, ಗೌರವಾಧ್ಯಕ್ಷರಾದ ಪುರಿ ಮಂಜುನಾಥ್, ಟಿಎಪಿಎಂಎಸ್ ನ ಉಪಾಧ್ಯಕ್ಷರಾದ ಸಿ ಜಿ ಜಗದೀಶ್, ಸಿ.ಜಿ ಕುಮಾರ್, ಸಮಾಜ ಕಲ್ಯಾಣ ಅಧಿಕಾರಿ ಶಂಕರ್ ಮೂರ್ತಿ, ತ್ಯಾಗರಾಜು, ಆಟೋ ಚಾಲಕರ ಸಂಘದ ಪದಾಧಿಕಾರಿಗಳಾದ ಕುಮಾರ್, ಜಾವಿದ್, ಅನಿಲ್, ಸೇರಿದಂತೆ ಇತರರು ಹಾಜರಿದ್ದರು.
What's Your Reaction?