ಚನ್ನರಾಯಪಟ್ಟಣ ತಾಲೂಕು ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಚನ್ನರಾಯಪಟ್ಟಣ ತಾಲೂಕು ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಚನ್ನರಾಯಪಟ್ಟಣ: ಮಿನಿ ವಿಧಾನಸೌಧದ ಕಛೇರಿಯಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾವಚಿತ್ರಕ್ಕೆ ಶಾಸಕ ಸಿಎನ ಬಾಲಕೃಷ್ಣ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು,ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾದ ಶಿವಶಂಕರಪ್ಪ ಮಾತನಾಡಿ

ಮಹರ್ಷಿ ವಾಲ್ಮೀಕಿ ವನವಾಸದ ಸಮಯದಲ್ಲಿ ಶ್ರೀರಾಮನನ್ನು ಭೇಟಿಯಾದರು ಎಂದು ಕಥೆ ಹೇಳುತ್ತದೆ. ಪ್ರಾಚೀನ ವೈದಿಕ ಕಾಲದ ಶ್ರೇಷ್ಠ ಋಷಿಗಳ ವರ್ಗದಲ್ಲಿ ಮಹರ್ಷಿ ವಾಲ್ಮೀಕಿಗೆ ಪ್ರಮುಖ ಸ್ಥಾನವಿದೆ. ಅವರು ಸಂಸ್ಕೃತ ಭಾಷೆಯ ಮೊದಲ ಕವಿ ಮತ್ತು ಹಿಂದೂಗಳ 'ರಾಮಾಯಣ' ಮಹಾಕಾವ್ಯದ ಲೇಖಕರಾಗಿದ್ದಾರೆ ಎಂದರು. ಮಹರ್ಷಿ ವಾಲ್ಮೀಕಿ ತತ್ವ ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕು, ಎಲ್ಲಾ ರೀತಿಯ ಅಡೆತಡೆಗಳನ್ನು ದಾಟಿ ತಮ್ಮ ಜೀವನದಲ್ಲಿ ಸತ್ಯ ಮತ್ತು ಸದಾಚಾರದ ಹಾದಿಯಲ್ಲಿ ನಡೆಯಬಹುದಾಗಿದೆ ಏಕೆಂದರೆ ಮಹರ್ಷಿ ವಾಲ್ಮೀಕಿಯನ್ನು ಆದಿಕವಿ ಮತ್ತು ಶ್ರೇಷ್ಠ ಗುರು ಎಂದೂ ಕರೆಯುತ್ತಾರೆ. ಆದ್ದರಿಂದ, ಅವರ ಜನ್ಮ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಸಿಎನ್ ಬಾಲಕೃಷ್ಣ, ತಾಲೂಕು ದಂಡಾಧಿಕಾರಿ ಗೋವಿಂದರಾಜು, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಿ ಆರ್ ಹರೀಶ್, ಡಿವೈಎಸ್ಪಿ ,ಪಿ ರವಿಪ್ರಸಾದ್, ಸಮಾಜ ಕಲ್ಯಾಣ ಅಧಿಕಾರಿ ಶಂಕರ್ ಮೂರ್ತಿ, ಟಿಎಪಿಎಮ್ಎಸ್ ನ ಮಾಜಿ ಅಧ್ಯಕ್ಷರಾದ ಕುಂಬಾರಹಳ್ಳಿ ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಮಂಜುನಾಥ್,ವಾಲ್ಮೀಕಿ ಮುಖಂಡರಾದ ಅಶೋಕ್ ನಾಗೇಶ್, ದಲಿತ ಮುಖಂಡರಾದ ಪುಟ್ಟಸ್ವಾಮಿ, ದಂಡೋರ್ ಮಂಜುನಾಥ್, ಗೋವಿಂದರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಟಿ ಮಂಜಪ್ಪ, ಚಿತ್ರಕಲಾ ಶಿಕ್ಷಕರಾದ ಶಿವಶಂಕರಪ್ಪ ಸೇರಿದಂತೆ ಇತರರು ಹಾಜರಿದ್ದರು.

What's Your Reaction?

like

dislike

love

funny

angry

sad

wow