*ಕೃಷ್ಣರಾಜಪೇಟೆ ತಾಲೂಕಿನ ಭಾರತಿಪುರ ಕೊಪ್ಪಲು ಗ್ರಾಮದಲ್ಲಿ ಶ್ರೀ ಸಿದ್ಧಿ ವಿನಾಯಕನ ನೂತನ ದೇವಾಲಯವನ್ನು ಲೋಕಾರ್ಪಣೆ ಗೊಳಿಸಲಾಯಿತು*.

ಸಮಾಜ ಸೇವಕ ಹಾಗೂ ಉದ್ಯಮಿಗಳಾದ ಮೊಟ್ಟೆ ಮಂಜು , ಶ್ರೀ ಗಣಪತಿ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ದೊರೆಯುವುದಲ್ಲದೆ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕೂಡ ಹೊಂದಬಹುದಾಗಿದೆ. ಆದ್ದರಿಂದ ಸಾಧನೆ ಮಾಡಲು ಕಷ್ಟವಾದರೂ ನ್ಯಾಯ ನೀತಿ ಧರ್ಮ ಹಾಗೂ ಸತ್ಯದ ಮಾರ್ಗದಲ್ಲಿಯೇ ಸಾಗಿ ಗುರಿಯನ್ನು ಮುಟ್ಟಿ, ಯಶಸ್ಸನ್ನು ಗಳಿಸೋಣ ಎಂದು ಮೊಟ್ಟೆ ಮಂಜು ಹೇಳಿದರು.
ಕೃಷ್ಣರಾಜಪೇಟೆ ತಾಲೂಕು ರೋಟರಿ ಕ್ಲಬ್ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ ದೇವಾಲಯಗಳ ಸಂರಕ್ಷಣೆಯು ನಾಗರೀಕ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ದಿಕ್ಕಿನಲ್ಲಿ ಭಾರತೀಪುರ ಕೊಪ್ಪಲು ಗ್ರಾಮಸ್ಥರು ಶ್ರೀ ಗಣಪತಿ ದೇವಾಲಯ ಜೀರ್ಣೋದ್ದಾರ ಮಾಡಿ ನೂತನವಾಗಿ ಶ್ರೀ ಗಣಪತಿ ಮೂರ್ತಿಯನ್ನು ಪ್ರತಿಷ್ಟಾಪಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅಭಿಮಾನದಿಂದ ಹೇಳಿದರು.
ಶ್ರೀ ಗಣೇಶ ವಿಗ್ರಹದ ದಾನಿಗಳಾದ ಸುವರ್ಣ ನಾರಾಯಣಗೌಡ, ದೊಡ್ಡ ಪುಟ್ಟೇಗೌಡ, ಕುಮಾರ್, ಬಲರಾಮ್, ಹರೀಶ್, ಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರು, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗರಾಜ್, ಹಿರಿಯ ಉಪಾಧ್ಯಕ್ಷ ಭಾರತೀಪುರ ಡಾ.ಪುಟ್ಟಣ್ಣ ಎಸ್.ಗೌಡ, ಪ್ರಥಮ ದರ್ಜೆ ಗುತ್ತಿಗೆದಾರ ಮಂಜುನಾಥ್, ಭಾರತೀಪುರ ಕ್ರಾಸ್ ಗ್ರಾಮ ಪಂಚಾಯತ್ ಅಧ್ಯಕ್ಷ ಕುಬೇರ, ಮಾಜಿ ಅಧ್ಯಕ್ಷೆ ಶಶಿಕಲಾ ಕುಮಾರ್, ರುಕ್ಮಿಣಿ ನಾಗೇಶ್, ಶಶಿಕಲಾ ದೇವರಾಜು, ಸುಜುಕಿ ಷೋ ರೂಂ ಮಾಲೀಕರಾದ ಮಂಜುನಾಥ್, ಭಾರತೀಪುರ ಮಾಸ್ಟರ್
ನಂಜಪ್ಪ, ಬಸವೇಗೌಡ, ಜೆಸಿಬಿ ಪ್ರದೀಪ್, ಕೊರಟಿಕೆರೆ ಮೋಹನ್, ಯಲಾದಹಳ್ಳಿ ಜಯರಾಮ್, ಕೊರಟಿಕೆರೆ ಮೋಹನ್, ಗಂಗನಹಳ್ಳಿ ಕೆಂಪರಾಜು, ಬಳ್ಳೇಕೆರೆ ಮಂಜೇಗೌಡ ಸೇರಿದಂತೆ ಸಾವಿರಾರು ಜನರು ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು.
*ವರದಿ. ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?






