ಸ್ವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ವಾಹಿನಿಯ ಉತ್ತರಾದ ಕಂಬನಹಳ್ಳಿ ಶಂಭು
ಕೆ.ಆರ್.ಪೇಟೆ
ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲಿ, ನಮ್ಮ ಸ್ವರ್ಣ ಟಿವಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದು
ಸುದ್ದಿವಾಹಿನಿ ಹಾಗೂ ಮನರಂಜನಾ ವಾಹಿನಿಯಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮೂವತ್ತು ಸಾವಿರಕ್ಕೂ ಹೆಚ್ಚು
ಸಬ್ ಸೈಬರ್‌ಗಳನ್ನು ಹೊಂದಿರುವ ಜಿಲ್ಲೆಯ ಏಕೈಕ ವಾಹಿನಿ ನಮ್ಮದು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.
ಸ್ವರ್ಣ ವಾಹಿನಿಯು ಪ್ರತಿ ವರ್ಷ ಮಂಡ್ಯದಲ್ಲಿ "ಸ್ವರ್ಣ ಸಂಭ್ರಮ ಹೆಸರಿನಲ್ಲಿ ಅತಿ ದೊಡ್ಡ
ಕಾರ್ಯಕ್ರಮವನ್ನು ಆಯೋಚಿಸುತ್ತಾ ಬಂದಿದ್ದು, ಈ ವರ್ಷ ಕೆ.ಆರ್.ಪೇಟೆ ಪಟ್ಟಣದಲ್ಲಿ ಈ ಕಾರ್ಯಕ್ರಮವನ್ನು ಡಿಸೆಂಬರ್
16ರಂದು ಪಟ್ಟಣದ ಬಿಜೆಎಸ್ ಎಜುಕೇಷನ್ ಸೆಂಟರ್ ಆವರಣದಲ್ಲಿ ಅದ್ದೂರಿ ವರ್ಣರಂಜಿತ ವೇದಿಕೆಯಲ್ಲಿ ನಡೆಸಲು
ನಿರ್ಧರಿಸಲಾಗಿದೆ.
ಸ್ವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ ಸಾಧಕರಿಗೆ ವಾಹಿನಿ ವತಿಯಿಂದ ಸ್ವರ್ಣ
ಪುರಸ್ಕಾರ ನೀಡಲಿದ್ದು, ಈ ಬಾರಿ ದಿ.ಕೆ.ಆರ್.ಪೇಟೆ ಕೃಷ್ಣರದರಿಗೆ ಹಾಗೂ ವೀರಯೋಧ ದಿ.ಜನಾರ್ಧನ್ ಕಿಕ್ಕೇರಿರವರಿಗೆ
ಮರಣೋತ್ತರ ಪ್ರಶಸ್ತಿ ನೀಡಲಾಗುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಹೇಮಗಿರಿ ಬಿಜಿಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ
ಡಾ.ಜೆ.ಎನ್.ರಾಮಕೃಷ್ಣಗೌಡ, ಕೃಷಿ ಮತ್ತು ಸಾಮಾಜಿಕ ಹೋರಾಟಕ್ಕೆ ಕೆ.ಎಸ್.ನಂದಿನಿ ಜಯರಾಂ, ಸಿನಿಮಾ ವಿಭಾಗದಿಂದ
ಕೆ.ಆರ್.ಪೇಟೆಯ ಅರವಿಂದರಾವ್ ಹಾಗೂ ಕೆ.ಆರ್.ಪೇಟೆ ಶಿವರಾಜು, ಸಾಮಾಜಿಕ ಸೇವೆಗೆ ಮಾರಪ್ಪರವರನ್ನು ಆಯ್ಕೆ
ಮಾಡಲಾಗಿದೆ.
ಪ್ರೇಕ್ಷಕರನ್ನು ರಂಜಿಸಲು ಕಾಮಿಡಿ ಕಿಲಾಡಿಗಳು ತಂಡದ ದೀಪಿಕಾ, ಪ್ರವೀಣ್ ಜೈನ್, ಮನೋಹರ್ ಗೌಡ
ಸೇರಿದಂತೆ ಪ್ರಸಿದ್ಧ ಚಲನಚಿತ್ರ ನಟನಟಿಯರು ಭಾಗವಹಿಸಲಿದ್ದು ಹೆಸರಾಂತ ಗಾಯಕ, ಗಾಯಕಿಯರು ಭರಪೂರ ಮನರಂಜನೆ
ನೀಡಲಿದ್ದಾರೆ. ಇದರ ಜೊತೆಗೆ ಸೈ ಡ್ಯಾನ್ಸ್ ಗ್ರೂಪ್ ವತಿಯಿಂದ ಅದ್ದೂರಿ ಡ್ಯಾನ್ಸ್ ಆಯೋಜಿಸಲಾಗಿದೆ.
ವಿಶೇಷ ಅತಿಥಿಗಳಾಗಿ ಕರ್ನಾಟಕ ಸುಗಮ ಸಂಗೀತ ಅಕಾಡೆಮಿಯ ಅಧ್ಯಕ್ಷರಾದ ಕಿಕ್ಕೇರಿ ಕೃಷ್ಣಮೂರ್ತಿ
ಹಾಗೂ ಜೀ ಟಿವಿ ಸ್ಕ್ರಿಪ್ಟ್ ರೈಟರ್ ಲೋಕೇಶ್‌ಗೌಡ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಶಾಸಕರಾದ ಹೆಚ್.ಟಿ.ಮಂಜು, ಸಮಾಜ ಸೇವಕರಾದ ಆರ್‌ಟಿಓ ಮಲ್ಲಿಕಾರ್ಜುನ್,
ಮನ್‌ಮುಲ್ ನಿರ್ದೇಶಕರಾದ ಡಾಲು ರವಿ, ಕಾಂಗ್ರೆಸ್ ಮುಖಂಡರಾದ ವಿಜಯ ರಾಮೇಗೌಡ, ಮಾಜಿ ಶಾಸಕರಾದ
ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ, ಕಾಂಗ್ರೆಸ್ ಮುಖಂಡರಾದ ಬಿ.ಎಲ್.ದೇವರಾಜು, ಕರ್ನಾಟಕ ಸಂಘದ ಅಧ್ಯಕ್ಷರಾದ
ಪ್ರೊ.ಜಯಪ್ರಕಾಶಗೌಡ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಬಿಜೆಪಿ ಮುಖಂಡರಾದ ಬೂಕವಳ್ಳಿ ಮಂಜು, ವಿಶ್ವನಾಥ್
ಹರಳಹಳ್ಳಿ, ಕಿಕ್ಕೇರಿ ಪ್ರಭಾಕರ್, ಕೆಬಿಸಿ ಮಂಜುನಾಥ್, ಬಸ್ ಸಂತೋಷ್ ಕುಮಾರ್, ವಕೀಲರಾದ ವಿ ಎಸ್ ಧನಂಜಯ್ ಕುಮಾರ್ ,
ಹೆಚ್.ಕೆ.ಅಶೋಕ್, ಕುರಬರಹಳ್ಳಿ ನಾಗೇಶ್, ಎಂ.ಪಿ.ಲೋಕೇಶ್, ಪತ್ರಕರ್ತರಾದ ಎಸ್.ಕೆ.ಬಾಲಕೃಷ್ಣ, ನೀಲಕಂಠ, ಅರುಣ್,
ಸತೀಶ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಎಂದು
ಕಬ್ಬನಹಳ್ಳಿ ಶಂಭು, ನಮ್ಮ ಸ್ವರ್ಣ ಟಿವಿ ಮಂಡ್ಯ ಮುಖ್ಯಸ್ಥರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೋಮಶೇಖರ್.ವರದಿಗಾರರಾದ ಮಾಕವಳ್ಳಿ ಮನು. ಪತ್ರಕರ್ತರಾದ ಹೊಸಹೊಳ್ಳಲು ರಘು ಉಪಸ್ಥಿತರಿದ್ದರು.
*ವರದಿ,ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?