*ಪ್ರಧಾನ ಮಂತ್ರಿ ಜನ ಮನ್ ಯೋಜನೆಗೆ ಕೃಷ್ಣರಾಜಪೇಟೆ ತಾಲೂಕಿನ ಪೂವನಹಳ್ಳಿ ಗ್ರಾಮ ಆಯ್ಕೆ.. ಗ್ರಾಮಕ್ಕೆ ಅಭಿವೃದ್ಧಿಯ ಭಾಗ್ಯದ ಬಾಗಿಲು ತೆರೆಯಲಿರುವುದರಿಂದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.*.

*ಪ್ರಧಾನ ಮಂತ್ರಿ ಜನ ಮನ್ ಯೋಜನೆಗೆ ಕೃಷ್ಣರಾಜಪೇಟೆ ತಾಲೂಕಿನ ಪೂವನಹಳ್ಳಿ ಗ್ರಾಮ ಆಯ್ಕೆ.. ಗ್ರಾಮಕ್ಕೆ ಅಭಿವೃದ್ಧಿಯ ಭಾಗ್ಯದ ಬಾಗಿಲು ತೆರೆಯಲಿರುವುದರಿಂದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.*.

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಬೂಕನಕೆರೆ ಹೋಬಳಿ ಗಂಜಿಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪೂರ್ಣ ಪರಿಶಿಷ್ಠ ವರ್ಗಗಳ ಜನರೇ ವಾಸವಾಗಿರುವ ಪೂವನಹಳ್ಳಿ ಗ್ರಾಮವನ್ನು ಪ್ರಧಾನ ಮಂತ್ರಿ ಜನ್ ಮನ್ ಯೋಜನೆಗೆ ಆಯ್ಕೆ ಮಾಡಿದ್ದು 15 ಇಲಾಖೆಗಳ 25 ಸೇವಾ ಕಾರ್ಯಕ್ರಮಗಳು ಗ್ರಾಮದ ಜನರಿಗೆ ದೊರೆಯಲಿದ್ದು ಸುಸ್ಥಿರ, ಸಧೃಡ ಗ್ರಾಮ ನಿರ್ಮಾಣದ ಕನಸು ಸಾಕಾರವಾಗಲಿದೆ.

 ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಯಲಕ್ಷ್ಮಿ ಸ್ವಾಮಿ ನಾಯಕರವರ ಹಾಗೂ ನಾಯಕ ಸಮಾಜದ ಮುಖಂಡರು ತಾಲೂಕು ನಾಯಕ ಸಂಘದ ನಿರ್ದೇಶಕರಾದ ಸ್ವಾಮಿ ನಾಯಕ ಮಾತನಾಡಿ ಮಂಡ್ಯ ಲೋಕಸಭಾ ಸದಸ್ಯರು ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಒತ್ತಾಸೆಯ ಮೇರೆಗೆ ಸಂಪೂರ್ಣವಾಗಿ ಹಿಂದುಳಿದ ಬುಡಕಟ್ಟು ಜನಾಂಗದ ವಾಲ್ಮೀಕಿ ನಾಯಕ ಸಮುದಾಯದ ಜನರೇ ವಾಸವಾಗಿದ್ದು, ಕನಿಷ್ಠ ಮೂಲ ಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಗ್ರಾಮದಲ್ಲಿ ಹೊಸ ಬೆಳಕು ಮೂಡಿದ್ದು ಗ್ರಾಮದ ಭಾಗ್ಯದ ಬಾಗಿಲು

ತೆರೆಯಲಿರುವುದರಿಂದ ಗ್ರಾಮದ ಜನರು ಪ್ರಧಾನಿ ಮೋದಿಜಿ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ಪೂವನಹಳ್ಳಿ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಇಲ್ಲದಿರುವುದರಿಂದ ಗ್ರಾಮದ 300 ಕುಟುಂಬಗಳು 04 ಕಿಮೀ ದೂರದ ಗಂಜಿಗೆರೆ ಗ್ರಾಮ ಪಂಚಾಯತ್ ಕೇಂದ್ರದಲ್ಲಿರುವ ಸೊಸೈಟಿಗೆ ಅನಿವಾರ್ಯವಾಗಿ ಹೋಗಬೇಕಾಗಿದೆ.

ಗ್ರಾಮದಲ್ಲಿನ ಮಹಿಳೆಯರು, ವಯೋವ್ರುದ್ದರು ಹಾಗೂ ಮಕ್ಕಳು ಹುಷಾರು ತಪ್ಪಿದರೆ 12 ಕಿಮೀ ದೂರದ ಬೂಕನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಲ್ಲವೇ 28 ಕಿಮೀ ದೂರದ ಕೃಷ್ಣರಾಜಪೇಟೆ ತಾಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆಗೆ ಹೋಗುವ ಅನಿವಾರ್ಯತೆಯಿದೆ. ಶಿಥಿಲವಾಗಿರುವ ಶಾಲಾ ಕಟ್ಟಡದಲ್ಲಿ 35 ಮಕ್ಕಳು ಒಂದರಿಂದ ಏಳನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿದ್ದು ಕೇವಲ ಇಬ್ಬರು ಶಿಕ್ಷಕರು ಪಾಠ ಪ್ರವಚನ ಮಾಡುತ್ತಿದ್ದಾರೆ.

ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ 13 ಮಕ್ಕಳು ಸಮಗ್ರ ಶಿಶು ಕಲ್ಯಾಣ ಯೋಜನಾ ಕಾರ್ಯಕ್ರಮದ ಫಲವನ್ನು ಪಡೆಯುತ್ತಿದ್ದಾರೆ.

ಬೆಳಿಗ್ಗೆ ಮತ್ತು ಸಂಜೆ ಮಾತ್ರ ಆಗಮಿಸುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ನಿಯಮಿತವಾಗಿ ಗ್ರಾಮಕ್ಕೆ ಆಗಮಿಸಿ ಸುಸಜ್ಜಿತವಾದ ಸಾರಿಗೆ ಸೌಲಭ್ಯ ದೊರೆಯಬೇಕು. ಗ್ರಾಮಕ್ಕೆ ಹೊಸಸ್ಪರ್ಶ ಸಿಗಬೇಕು. ಶುದ್ಧ ಕುಡಿಯುವ ನೀರು ಗ್ರಾಮದ ಜನರಿಗೆ ದೊರೆತು, ಶಿಕ್ಷಣ, ಆರೋಗ್ಯ, ವಿದ್ಯುತ್ ಹಾಗೂ ಪಂಚಾಯತ್ ರಾಜ್ ಯೋಜನೆಯ ಎಲ್ಲಾ ಸೌಲಭ್ಯಗಳು ಜನ್ ಮನ್ ಯೋಜನೆ ಮೂಲಕ ಗ್ರಾಮಕ್ಕೆ ತಲುಪಬೇಕು ಎಂದು ಗ್ರಾಮದ ಜನರು ಮನವಿ ಮಾಡಿದ್ದಾರೆ.

 *ವರದಿ. ರಾಜು ಜಿ ಪಿ ಕಿಕ್ಕೇರಿ ಕೆ

ಆರ್ ಪೇಟೆ*

What's Your Reaction?

like

dislike

love

funny

angry

sad

wow