*ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯವರು ಮುಚ್ಚಿಹಾಕಿ* *ರುವ ಸಾರ್ವಜನಿಕ ರಸ್ತೆಯನ್ನು ತಕ್ಷಣವೇ ತೆರುವುಗೊಳಿಸಲು ಅಗತ್ಯ ಕ್ರಮ ವಹಿಸುವಂತೆ* *ತಾಲೂಕು ಪರಿಶಿಷ್ಠ ಜಾತಿ ಸಮುದಾಯಗಳ ಮುಖಂಡ ಹಾಗೂ ಪುರಸಭಾ ಸದಸ್ಯ ಡಿ*.*ಪ್ರೇಂಕುಮಾರ್ ಆಗ್ರಹಿಸಿದ್ದಾರೆ* .
ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು ಚನ್ನರಾಯಪಟ್ಟಣ ಮುಖ್ಯರಸ್ತೆಗೆ ಹೊಂದಿ ಕೊಂಡಂತೆ ಇರುವ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಆವರಣದ ಒಳಗಿನಿಂದ ಪಾಲಿಟೆಕ್ನಿಕ್ ಹಿಂಭಾಗದ
ಬಿಲ್ಲರಾಮನಹಳ್ಳಿ ಗ್ರಾಮವನ್ನು ಸಂಪರ್ಕಿಸುವ ಹಳೆಯ ರಸ್ತೆಯಿದ್ದು ಇದು ಮೂಲ ನಕಾಶೆಯಲ್ಲೂ ದಾಖಲಾಗಿದೆ. ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್
ಹಿಂಭಾಗ ಪಟ್ಟಣದ ಪರಿಶಿಷ್ಠ ಜಾತಿ ಸಮುದಾಯಕ್ಕೆ ಸೇರಿದ ರೈತರು ಸೇರಿದಂತೆ
ವಿವಿಧ ಜಾತಿ ವರ್ಗದ ನೂರಾರು ರೈತರ ಕೃಷಿ ಜಮೀನಿದೆ. ಮೂಲ
ನಕಾಶೆಯ ಪ್ರಕಾರ ಪಟ್ಟಣದ ಪ್ರವಾಸಿ ಮಂದಿರ ವೃತ್ತದ ತಾಲೂಕು ಪಂಚಾಯತಿಗೆ ಸೇರಿದ ಸರ್ವೆ ೨೫೯ ಮತ್ತು ಅದಕ್ಕೆ ಹೊಂದಿಕೊಂಡಂತಿರುವ
ಸರ್ವೆ ೨೨೩ ರ ಭೂಮಿಯ ನಡುವೆ ಹಾದುಹೋಗಿರುವ ರಸ್ತೆ ಸರ್ವೆ ನಂ ೨೧೭ರ ಬಳಿ ಬಿಲ್ಲರಾಮನಹಳ್ಳಿ ಗ್ರಾಮದ ಎಲ್ಲೆಗೆ ತಾಗುತ್ತದೆ. ಸದರಿ ರಸ್ತೆ ಪಾಲಿಟೆಕ್ನಿಕ್ ಹಿಂಭಾಗದ ರೈತರು ತಮ್ಮ ಜಮೀನಿಗಳಿಗೆ ತಲುಪಲು ಸಹಕಾರಿಯಾಗಿತ್ತು.
೧೯೬೦ ರ ದಶಕದಲ್ಲಿ ಪಾಲಿಟೆಕ್ನಿಕ್ ನಿರ್ಮಾಣ ವಾದರೂ ಅದರೊಳಗಿನಿಂದ
ರೈತರು ಯಾವುದೇ ಅಡಚಣೆ ಯಿಲ್ಲದೆ ತಮ್ಮ ಜಮೀನುಗಳಿಗೆ ಹೋಗುತ್ತಿದ್ದುದರಿಂದ ರೈತರಿಗೆ ಯಾವುದೇ ಸಮಸ್ಯೆಯಿರಲಿಲ್ಲ. ಆದರೆ ಪಟ್ಟಣ ಬೆಳೆದಂತೆ ಪಾಲಿಟೆಕ್ನಿಕ್ ಆವರಣದಲ್ಲಿದ್ದ ಒಳರಸ್ತೆಯು ಮಾಯವಾಗಿದೆ.
ಪಾಲಿಟೆಕ್ನಿಕ್ ಆವರಣದ ಜಾಗವನ್ನು ಕಿತ್ತು ಬಸ್ ಡಿಪೋ ಮತ್ತು ಸರ್ಕಾರಿ
ಎಂಜಿನಿಯರಿಂಗ್ ಕಾಲೇಜಿನ ನಿರ್ಮಾಣಕ್ಕೆ ನೀಡಲಾಗಿದೆ. ಎಂಜಿನಿಯರಿಂಗ್ ಕಾಲೇಜು ಮತ್ತು ಬಸ್ ಡಿಪೋ ನಿರ್ಮಾಣದ ನಂತರ ಪಾಲಿಟೆಕ್ನಿಕ್ ಹಿಂಭಾಗಕ್ಕೆ ಹೋಗಲು ರೈತರಿಗೆ ಭಾರೀ
ಸಮಸ್ಯೆಯಾಗಿದೆ. ಪಟ್ಟಣದಲ್ಲಿ ಸಾರ್ವಜನಿಕ ಸ್ಮಶಾನ ಇಲ್ಲ. ರೈತ ಕುಟುಂಬದ
ಯಾವುದಾದರೂ ವ್ಯಕ್ತಿ ನಿಧನ ರಾದರೆ ಅವರ ಶವವನ್ನು
ಪಾಲಿಟೆಕ್ನಿಕ್ ಒಳಗಿನಿಂದಲೇ ತೆಗೆದುಕೊಂಡು ಹೋಗಬೇಕು. ಆದರೆ ಪಾಲಿಟೆಕ್ನಿಕ್ ಸಂಸ್ಥೆಯವರು ಸಾರ್ವಜನಿಕರ ರಸ್ತೆಯನ್ನು ಮುಚ್ಚಿ ಹಾಕಿರುವುದರಿಂದ ರೈತರಿಗೆ ಹಾಗೂ ದಲಿತರಿಗೆ ಶವ ಸಂಸ್ಕಾರಕ್ಕೂ ಅಡಚಣೆ ಯಾಗುತ್ತಿದೆ. ನಾಲ್ಕು ಕಿ.ಮೀ ಸುತ್ತಿ ಬಳಸಿ ರೈತರು ಶವ ಸಂಸ್ಕಾರಕ್ಕೆ ಶವವನ್ನು ಹೊತ್ತು ತರಬೇಕಾದ ಧಾರುಣ
ಪರಿಸ್ಥಿತಿಯಿದೆ. ಇತ್ತಿಚೆಗೆ ತಾಲೂಕು ಆಡಳಿತ ಆಯೋಜಿಸಿದ್ದ ಪರಿಶಿಷ್ಠ ಜಾತಿ/
ವರ್ಗಗಳ ಕುಂದುಕೊರತೆಗಳ ಸಮಾಲೋಚನಾ ಸಭೆಯಲ್ಲಿ ನಾನು ಪಾಲಿಟೆಕ್ನಿಕ್ ಆವರಣ ದೊಳಗಿನ ರಸ್ತೆಯನ್ನು ಸಾರ್ವ ಜನಿಕರಿಗೆ ಮುಕ್ತಗೊಳಿಸವಂತೆ ಆಗ್ರಹಿಸಿದ್ದರೂ ತಾಲೂಕು ಆಡಳಿತ ಇದುವರೆಗೂ ರೈತರ ರಸ್ತೆ ಸಮಸ್ಯೆಯ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಡಿ.ಪ್ರೇಮಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಲಿಟೆಕ್ನಿಕ್ ಒಳಗೆ ಹಾದು ಹೋಗಿರುವ ಹಳೆಯ ರಸ್ತೆ ಇದೀಗ ಎಂಜಿನಿಯರಿಂಗ್ ಕಾಲೇಜು ಆವರಣಕ್ಕೆ ಸೇರಿಕೊಂಡಿದೆ. ಹಳೆಯ ರಸ್ತೆಯನ್ನು ತೆರವುಗೊಳಿಸಿದರೆ ಶೈಕ್ಷಣಿಕ ಚಟುವಟಿಕೆಗಳಿಗೆ
ಅಡ್ಡಿಯಾಗುತ್ತದೆ ಎನ್ನುವ ಸದುದ್ದೇಶದಿಂದ ಶಾಸಕ ಹೆಚ್.ಟಿ.ಮಂಜು
ಮತ್ತು ಈ ಹಿಂದಿನ ತಹಸೀಲ್ದಾರ್ ನಿಸರ್ಗಪ್ರಿಯ ಅವರು ಒಗ್ಗೂಡಿ ಪಾಲಿಟೆಕ್ನಿಕ್
ಆವರಣಕ್ಕೆ ಹೊಂದಿಕೊಂಡಂತೆ ಇರುವ ಬಸ್ ಡಿಪೋ ಪಕ್ಕದಲ್ಲಿ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರು. ಪರ್ಯಾಯ ರಸ್ತೆ ನಿರ್ಮಾಣ ಜಾಗಕ್ಕೆ ಅಗತ್ಯವಾದ ಸರ್ವೆ ಕಾರ್ಯವನ್ನು ನಡೆಸಿ ಸ್ಕೆಚ್ ಮಾಡಿಸಿದ್ದು ಒಪ್ಪಿಗೆಗಾಗಿ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಕಡತವನ್ನು ಕಳುಹಿಸಲಾಗಿದೆ. ಪರ್ಯಾಯ
ರಸ್ತೆ ನಿರ್ಮಾಣದ ಫೈಲ್ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಕಛೇರಿಯಲ್ಲಿಯೇ ಕೊಳೆಯುತ್ತಿದ್ದು ಪಟ್ಟಣದ ರೈತರ ಸಮಸ್ಯೆಯು ಇಂದಿಗೂ ಬಗೆಹರಿದಿಲ್ಲ. ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ಕಾನೂನು ಪ್ರಕಾರ ಮೂಲ ನಕಾಶೆಯಂತೆ ಹಳೆಯ ರಸ್ತೆಯನ್ನು ತಾಲೂಕು ಆಡಳಿತ ಬಿಡಿಸಿಕೊಡಬೇಕು. ಮೂಲ ನಕಾಶೆಯಂತೆ ಹಳೆಯ ರಸ್ತೆಯನ್ನಾದರೂ ತೆರವು ಗೊಳಿಸಿ ಅಥವಾ ತಹಸೀಲ್ದಾರ್ ಕಛೇರಿಯಿಂದ ಗುರುತಿಸಿರುವ ಹೊಸ ಪರ್ಯಾಯ ರಸ್ತೆಯನ್ನಾದರೂ ಬಿಟ್ಟುಕೊಡಿ. ಒಟ್ಟಾರೆ ಪಾಲಿಟೆಕ್ನಿಕ್ ಹಿಂಭಾಗ ಕೃಷಿ ಜಮೀನು ಹೊಂದಿರುವ ರೈತರಿಗೆ ಅಗತ್ಯವಾದ ರಸ್ತೆ ಸಂಪರ್ಕ ಕಲ್ಪಿಸಿಕೊಡುವಂತೆ ಆಗ್ರಹಿಸಿರುವ ಡಿ.ಪ್ರೇಮ ಕುಮಾರ್ ಪಾಲಿಟೆಕ್ನಿಕ್
ಆವರಣದಲ್ಲಿನ ರೈತರ ರಸ್ತೆ ಸಮಸ್ಯೆಯನ್ನು ಸರಿ ಪಡಿಸದಿದ್ದರೆ ಪರಿಶಿಷ್ಠ
ಜಾತಿ ಸಮುದಾಯದ ರೈತರ ಹಿತದೃಷ್ಠಿಯಿಂದ ರಸ್ತೆಗಾಗಿ ಹೋರಾಟ ಆರಂಭಿಸು
ವ ಎಚ್ಚರಿಕೆ ನೀಡಿದ್ದಾರೆ.
What's Your Reaction?