*ಅತಿ ಚಿಕ್ಕ ವಯಸ್ಸಿಗೆ ಗೋಲ್ಡ್ ಸಿಲ್ವರ್ ಪದಕಗಳನ್ನು ಮುಡಿಗೇರಿಸಿಕೊಂಡು ಕ್ರೀಡೆಯಲ್ಲಿ ಚಾಪು ಮೂಡಿಸಿ ಹೃದಯಾಘಾತದಿಂದ ಆಗಲಿದ ತಾಲೂಕಿನ ಶ್ರೀರಕ್ಷ*
ಕೃಷ್ಣರಾಜಪೇಟೆ.ಶ್ರೀಮತಿ ತಿಮ್ಮಮ್ಮ ಸ್ವಾಮಿನಾಯಕ ರವರ ಪುತ್ರ ಶ್ರೀಮತಿ ರೇಣುಕಾ ಶಿವನಾಯಕರವರ ದ್ವಿತೀಯ ಪುತ್ರಿ ಶ್ರೀರಕ್ಷಾ ಆಲಂಬಾಡಿ ಕಾವಲು ಎಂಬ ಒಂದು ಪುಟ್ಟ ಗ್ರಾಮದಲ್ಲಿ ಜನಿಸಿ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ರನ್ನಿಂಗ್ ರೈಸ್
ಉದ್ದ ಜಿಗಿತ ಎತ್ತರ ಜಿಗಿತ ಹೋಬಳಿ ಮಟ್ಟದಿಂದ ರಾಜ್ಯಮಟ್ಟದವರೆಗೂ ಚಿನ್ನದ ಪದಕ ಬೆಳ್ಳಿಯ ಪದಕ ಪ್ರಶಸ್ತಿ ಪುರಸ್ಕಾರ ಸನ್ಮಾನ ನಗದು ಬಹುಮಾನ ಹೀಗೆ ಹಲವು ಪುರಸ್ಕಾರಗಳನ್ನು ಪಡೆದು.
ತಂದೆ ತಾಯಿಗೆ ಗುರುಗಳಿಗೆ ಸ್ನೇಹಿತರಿಗೆ ಬಂಧು-ಬಳಗಕ್ಕೆ ಪ್ರೀತಿಯನ್ನ ಹಂಚುವ ಮೂಲಕ ಎಲ್ಲರಿಗೂ ಅಚ್ಚುಮೆಚ್ಚಿನ ಶ್ರೀರಕ್ಷ 19ನೇ ವಯಸ್ಸಿಗೆ ಇವರೆಲ್ಲರನ್ನೂ ಬಿಟ್ಟು ಅಗಲಿದ ಶ್ರೀ ರಕ್ಷ ನೆನೆದು ಕಣ್ಣೀರಿಟ್ಟ ಬಂಧುಗಳು
ಕಾಲೇಜಿನ ಹಂತದಲ್ಲಿ ಎನ್ ಸಿ ಸಿ ಸೇರಿ ಪೆರೇಡ್ ರೈಫಲ್ ಶೂಟ್ ವೃತ್ತಿಪರ ಕ್ರೀಡಾಕೂಟದಲ್ಲಿ ಪ್ರಥಮ ಚಿಕಿತ್ಸೆ ಹೀಗೆ ಹಲವು ಹಂತಗಳಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನ ಮೂಡಿಗೇರಿಸಿಕೊಂಡಿದ್ದಾರೆ.
ಹಾವು ಎಂದರೆ ಎದ್ದೋ ಬಿದ್ದು ಓಡುವ ಜನರಿರುವಾಗ ಇಲ್ಲ ಅದನ್ನು ಹೊಡೆದು ಹಾಕುವ ಜನರಿಗೆ ಶ್ರೀರಕ್ಷಾ ಆದರ್ಶ ಹಾವುಗಳು ಕಂಡರೆ ಅವುಗಳನ್ನ ಕೈಯಲ್ಲಿ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಹಾವಿಗೆ ತೊಂದರೆ ಕೊಡುವ ಪ್ರಾಣಿಗಳಿಂದ ರಕ್ಷಣೆ ಮಾಡುವ ಸರಳ ಮನಸ್ಸಿನ ಧೈರ್ಯವಂತೆ ತಾಯಿ ಕರುಳಿನ ಈ ಪುಟ್ಟ ಪೂರಿ ಕೈಯಲ್ಲಿ ಗುಜಲಿ ಹಿಡಿದು ತೆವರಿಗೆ ನಿಂತರೆ ಯಾವ ಗಂಡಸರಿಗೂ ಕಮ್ಮಿಯಾಗುತ್ತಿರಲಿಲ್ಲ ಓದಿಗೂ ಸೈ ಕ್ರೀಡೆಗೂ ಸೈ ಮನೆ ಕೆಲಸಕ್ಕೂ ಸೈ ತಂದೆ ತಾಯಿಗೆ ನಾನಿದ್ದೀನಿ ಧೈರ್ಯವಾಗಿರಿ ಎಂದು ಧೈರ್ಯ ತುಂಬುತ್ತಿದ್ದ ಶ್ರೀ ರಕ್ಷ
ಮೈಸೂರು ಮಹಾರಾಣಿ ಕಲಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಶ್ರೀ ರಕ್ಷಾ ತಂದೆಗೆ ಮತ್ತು ತಾಯಿಗೆ ಇನ್ನು ಎರಡು ವರ್ಷ ಕಷ್ಟಪಡಿ ನಾನು ಕೆಲಸಕ್ಕೆ ಸೇರುತ್ತೇನೆ ದೇಶ ಕಾಯುವ ಯೋಧಯ್ಯಾಗುತ್ತೇನೆ ನಿಮ್ಮೆಲ್ಲರನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ತಂದೆ ತಾಯಿಗೆ ಕುಟುಂಬಕ್ಕೆ ಧೈರ್ಯ ಹೇಳುತ್ತಿದ್ದ ಶ್ರೀರಕ್ಷಾ ಇಂದು ನಮ್ಮೊಂದಿಗೆ ಇಲ್ಲ ಎನ್ನುವುದನ್ನು ಈ
ಕುಟುಂಬ ಹೇಗೆ ಈ ನೆನಪುಗಳನ್ನು ಮರೆಯಲು ಸಾಧ್ಯ ಹುಟ್ಟಿದ ಊರಿಗೆ ಜನ್ಮ ನೀಡಿದ ತಂದೆ ತಾಯಿಗೆ ಕುಟುಂಬಕ್ಕೆ ವಿದ್ಯ ನೀಡಿದ ಗುರುಗಳಿಗೆ ಸ್ನೇಹಿತರಿಗೆ ಬಂಧು ಬಳಗಕ್ಕೆ ಶ್ರೀ ರಕ್ಷ ದುಃಖ ಮರೆಸುವ ಶಕ್ತಿಯನ್ನು ಆ ಭಗವಂತನ ನೀಡಲಿ ಶ್ರೀ ರಕ್ಷ ರವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎನ್ನುವ ಅಭಿಲಾಷ ಅಷ್ಟೇ ನಮ್ಮದು.
ಇವರ ಆತ್ಮಕ್ಕೆ ಸಂತಾಪ ಸೂಚಿಸಿದ ಸಮಾಜದ ಮುಖಂಡರಾದ ವಾಟರ್ ಮೆನ್ ನಾಗಣ್ಣ, ಬೈರನಾಯಕ. ತಾಲೂಕು ನಾಯಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತರಾದ ರಾಜು ಜಿ ಪಿ. ತಾಲೂಕಿನ ಗಣ್ಯರು ಸಮಾಜದ ಮುಖಂಡರು ಗ್ರಾಮಸ್ಥರು ಕುಟುಂಬ ವರ್ಗ ಶ್ರೀ ರಕ್ಷಾ ರವರ ಆತ್ಮಕ್ಕೆ ಸಂತಾಪ ಸೂಚಿಸಿದರು
What's Your Reaction?