*_ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ನೋ)ಸಂಸ್ಥಾಪಕ ರಾಜ್ಯಾಧ್ಯಕ್ಷರು ಹು.ಲಿ. ಅಮರನಾಥ್ ಚಾಲನೆ...!*

*_ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ನೋ)ಸಂಸ್ಥಾಪಕ ರಾಜ್ಯಾಧ್ಯಕ್ಷರು ಹು.ಲಿ. ಅಮರನಾಥ್ ಚಾಲನೆ...!*

*_ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೃಷ್ಣರಾಜಪೇಟೆ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭ..!_*

*_ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ನೋ)ಸಂಸ್ಥಾಪಕ ರಾಜ್ಯಾಧ್ಯಕ್ಷರು ಹು.ಲಿ. ಅಮರನಾಥ್ ಚಾಲನೆ...!*

_ಕೃಷ್ಣರಾಜಪೇಟೆ ಪಟ್ಟಣದ ಬಿಜಿಎಸ್ ಕಾಂಪ್ಲೆಕ್ಸ್ ನಲ್ಲಿರುವ ಮಾಧ್ಯಮ ಸ್ಟುಡಿಯೋ ಕಛೇರಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಹು.ಲಿ.ಅಮರನಾಥ್ ರವರ ಅಧ್ಯಕ್ಷತೆಯಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ 69ನೇ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೋಕು ಘಟಕಕ್ಕೆ ಚಾಲನೆ ನೀಡಿದರು,_

_ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಜಿ.ಪಿ.ರಾಜು ಮಾತನಾಡಿ ಕೃಷ್ಣರಾಜಪೇಟೆ ತಾಲೋಕಿನಲ್ಲಿ ಮಾಧ್ಯಮ ಸ್ಟುಡಿಯೋ ಕಛೇರಿಯ ಪತ್ರಿಕಾ ಸಂಮಿತ್ರರೊಂದಿಗೆ ಚರ್ಚೆ ನಡೆಸಿ ಪತ್ರಿಕೋದ್ಯಮ ಸಂವಿಧಾನದ ನಾಲ್ಕನೇ ಅಂಗವಾಗಿದ್ದು ಸಮಾಜದ ಆಗು-ಹೋಗುಗಳ ಬಗ್ಗೆ ಸುದ್ದಿ ಮಾಡಿ ಸಮಾಜದ ಒಳಿತಿಗಾಗಿ ಪತ್ರಿಕಾ ಧರ್ಮವನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ನೂತನವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವನ್ನು ಉದ್ಘಾಟಿಸಲಾಗಿದ್ದು ಸಂತೋಷದ ಸಂಗತಿಯಾಗಿದೆ ಎಂದು ತಿಳಿಸಿದರು._

*_ಸದಸ್ಯತ್ವ ಕಾರ್ಡ್ ವಿತರಣೆ..!_*

_ತಾಲ್ಲೋಕು ಅಧ್ಯಕ್ಷರಾಗಿ ಲೋಕೇಶ್.ವಿ, ಉಪಾಧ್ಯಕ್ಷರಾಗಿ ರಾಜು.ಜಿ.ಪಿ, ಪ್ರಧಾನ ಕಾರ್ಯದರ್ಶಿಯಾಗಿ ಸಾಯಿಕುಮಾರ್. ಎನ್. ಕೆ, ಕಾರ್ಯದರ್ಶಿಯಾಗಿ ಪ್ರದೀಪ್, ಖಜಾಂಚಿಯಾಗಿ ಎಸ್. ರವಿ, ನಿರ್ದೇಶಕರಾಗಿ ಶ್ರೀನಿವಾಸ್, ಮಹೇಶ್ ಸದಸ್ಯರಾಗಿ ಗುಂಡೂ ರಾವ್, ಜಗದೀಶ್, ಮಂಜುನಾಥ್ ಸಂ ತೇಬಾಚಳ್ಳಿ, ರಂಗನಾಥ್ ಮಾಕವಳ್ಳಿ, ಸದಸ್ಯತ್ವ ಕಾರ್ಡ್ ವಿತರಣೆ ಮಾಡಲಾಯಿತು,_

_ಈ ಕಾರ್ಯಕ್ರಮ‌ ಕುರಿತು ಮಾತನಾಡಿದ ತಾಲ್ಲೋಕು ಅಧ್ಯಕ್ಷರಾದ ಲೋಕೇಶ್.ವಿ ಪತ್ರಿಕಾ ಕ್ಷೇತ್ರದಲ್ಲಿ ಹೊಗಳಿಕೆ -ತೆಗಳಿಕೆಗಳು ಸಹಜ, ಯಾರು ಸಾಮಾಜವನ್ನು ಬದಲಾವಣೆ ಮಾಡುವ ಕೆಲಸ ಮಾಡುತ್ತಾರೋ ಅವರಿಗೆ ಹೊಗಳಿಕೆ, ಯಾರು ಆನ್ಯಾಯ ಮಾರ್ಗದಲ್ಲಿ ಇರುತ್ತಾರೋ ಅಂಥವರಿಗೆ ತೆಗಳಿಕೆಗಳು ಸಾಮಾನ್ಯ ಸಮಾಜವನ್ನು ತಿದ್ದುವ ಕೆಲಸ ಮಾಡಿ, ಜೊತೆಗೆ ನಿಮ್ಮೆಲ್ಲರ ಸಹಕಾರ ಸದಾ ಇರಲೆಂದು ತಿಳಿಸಿದರು._

*_ಪತ್ರಕರ್ತರಿಗೆ ಸೂರು.! ಬಸ್ ಪಾಸ್.! ಹು.ಲಿ.ಅಮರನಾಥ್..!_*

_ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕರಾದ ಹು.ಲಿ.ಅಮರನಾಥ್ ಉದ್ಘಾಟನೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೋಕಿನಲ್ಲಿ ನೂತನವಾಗಿ ಲೋಕೇಶ್.ವಿ ಅಧ್ಯಕ್ಷರಾಗಿ ಸಂಘದ ಜವಾಬ್ದಾರಿ ತೆಗೆದುಕೊಂಡಿದ್ದು ನಿಮ್ಮೆಲ್ಲರ ಸಹಕಾರ ಅತ್ಯಮೂಲ್ಯ,ಪತ್ರಕರ್ತರ ಕೆಲಸ ತುಂಬಾ ಕಷ್ಟದ ಕೆಲಸ ಯಾರೂ ಸಹ ಪತ್ರಕರ್ತರಾಗಲು ಮುಂದೆ ಬರೋದಿಲ್ಲ, ಜಾಹಿರಾತುಗಳ ಮೂಲಕ ಪತ್ರಕರ್ತರಿಗೆ ಸಂಪಾದನೆ ಮಾಡಲು ಸಾದ್ಯ ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ಸಂಘದ ಮೂಲಕ ಪ್ರತಿಯೊಬ್ಬರಿಗೂ ಸ್ವಂತ ಸೂರು ಹಾಗೂ ಬಸ್ ಪಾಸ್ ಒದಗಿಸುವುದು ನನ್ನ ಗುರಿಯಾಗಿದೆ, ಸಮಾಜದಲ್ಲಿ ನಡೆಯುವ ಸತ್ಯ ಘಟನೆ, ಒಳ್ಳೆಯ ವಿಚಾರಗಳ ಬಗ್ಗೆ ಬರವಣಿಗೆ ಮೂಲಕ ನೊಂದವರಿಗೆ ನ್ಯಾಯ ಒದಗಿಸುವ,ಅಧಿಕಾರಿಗಳ ಆನ್ಯಾಯದ ವಿರುದ್ಧ ಸುದ್ದಿ ಮಾಡುವ ಮೂಲಕ ಪತ್ರಕರ್ತರ ಜವಾಬ್ದಾರಿಯನ್ನು ಜಾಗೃತೆಯಿಂದ ಹೆಜ್ಜೆ ಇಡುವಂತೆ ತಿಳಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ಕಾರ್ಡ್ ವಿತರಣೆ ಮಾಡಿ ಶುಭ ಹಾರೈಸಿದರು._

_ಈ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಹು.ಲಿ.ಅಮರನಾಥ್, ಕಾನೂನು ಸಲಹೆಗಾರರಾದ ಎನ್.ಎಸ್.ವಸಂತ್ ಕುಮಾರ್, ಬೆಂಗಳೂರು ಜಿಲ್ಲಾ ಪತ್ರಕರ್ತರಾದ ಸುನೀಲ್, ಪತ್ರಕರ್ತರಾದ ಹಲಗೂರು ಪ್ರತಾಪ್. ಎ. ಬಿ ರವರಿಗೆ ಮಾಧ್ಯಮ ಸ್ಟುಡಿಯೋ ಕಛೇರಿಯ ಪತ್ರಿಕಾ ಸಂಮಿತ್ರರು ಸನ್ಮಾನಿಸಲಾಯಿತು,_

_ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಹು.ಲಿ.ಅಮರನಾಥ್, ಕಾನೂನು ಸಲಹೆಗಾರರಾದ ಎನ್.ಎಸ್.ವಂಸತ್ ಕುಮಾರ್, ಸುನೀಲ್, ಪತ್ರಕರ್ತರಾದ ಹಲಗೂರು ಪ್ರತಾಪ್. ಎ. ಬಿ., ಕರುನಾಡು ಯುವಜನ ವೇದಿಕೆಯ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷರು, ಉದಯನ್ಮುಖ ಕವಿಯತ್ರಿ ಧನಲಕ್ಷ್ಮೀ, ತಾಲ್ಲೂಕು ಅಧ್ಯಕ್ಷರಾದ ಲೋಕೇಶ್.ವಿ, ರಾಜು.ಜಿ.ಪಿ, ಸಾಯಿಕುಮಾರ್. ಎನ್. ಕೆ, ಪ್ರದೀಪ್, ಎಸ್.ರವಿ, ಶ್ರೀನಿವಾಸ್,ಮಹೇಶ್ ಗುಂಡೂ ರಾವ್,ಜಗದೀಶ್,ಮಂಜುನಾಥ್ ಸಂತೇಬಾಚಳ್ಳಿ, ಮಾಕವಳ್ಳಿ ರಂಗನಾಥ್ ಸೇರಿದಂತೆ ಮತ್ತಿತರು

ಭಾಗವಹಿಸಿದ್ದರು._

What's Your Reaction?

like

dislike

love

funny

angry

sad

wow