*ಲಾಟರಿಯಲ್ಲಿ ಒಲಿದು ಬಂದ ಅದ್ಯಕ್ಷರ ಸ್ಥಾನ*
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಲಕ್ಷ್ಮೀಪುರ ಗ್ರಾಮ ಪಂಚಾಯತಿಯಲ್ಲಿ ರಾಜೀನಾಮೆ ಇಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು..
16 ಸದಸ್ಯರುಳ್ಳ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಸ್ಥಾನದ ಚುನಾವಣೆಗೆ ತೊಳಸಿ ಗ್ರಾಮದ ಶ್ರೀಮತಿ ನೇತ್ರಾವತಿ ಚಂದ್ರೇಗೌಡ ಮತ್ತು ಲಕ್ಷ್ಮೀಪುರ ಗ್ರಾಮದ ಅನಿತಾ ಬಬೃವಾಹನ ರವರು ಸ್ಪರ್ದೆ ಮಾಡಿದ್ರು ಆದ್ರೆ ಇಬ್ಬರೂ ಅಭ್ಯರ್ಥಿಗಳು ತಲಾ 8 ಮತಗಳನ್ನು ಪಡೆದುಕೊಂಡು ಸಮ ಭಲ ಪಡೆದುಕೊಂಡ ಹಿನ್ನೆಲೆ ಚುನಾವಣಾ ಅಧಿಕಾರಿ ಸಮುಖದಲ್ಲಿ ಲಾಟರಿ ಮೂಲಕ ಶ್ರೀಮತಿ ನೇತ್ರಾವತಿ ಚಂದ್ರೇಗೌಡ ರವರು ಗೆಲುವು ಸಾದಿಸಿದ್ರು..
ನಂತರ ಕೆ.ಪಿ.ಸಿ.ಸಿ ಸದಸ್ಯರಾದ ಕಿಕ್ಕೇರಿ ಸುರೇಶ್ ರವರು ಮಾತನಾಡಿ ಸರ್ವ ಸದಸ್ಯರ ಸಹಕಾರ ಪಡೆದುಕೊಂಡು ಗ್ರಾಮ ಪಂಚಾಯತಿಗೆ ಸೇರಿದ ಗ್ರಾಮಗಳಿಗೆ ಕುಡಿಯವ ನೀರು, ಬೀದಿ ದೀಪ, ಚರಂಡಿಗಳ ಸ್ವಚ್ಚತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶ್ರಮಿಸಬೇಕು ಎಂದು ನೂತನ ಆಧ್ಯಕ್ಷರಿಗೆ ಶುಭ ಹಾರೈಸಿದ್ರು
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ್, ಆಶೋಕ್, ರಘು, ಶ್ರೀಧರ್, ಉಮೇಶ್, ಬಸವರಾಜು, ರಾಜಶೇಖರಮೂರ್ತಿ, ಸ್ವಾಮಿ, ಕನಕ, ಶ್ವೇತ, ಅನಿತಾ, ಚಂದ್ರಕಲಾ, ಪುಷ್ಪಲತಾ, ಮಂಜಳ ಮಮತಾ, ಮುಖಂಡರಾದ ಚಂದ್ರಮೂಹನ್, ಜಾನೇಗೌಡ್ರು, ಲೋಕೇಶ್, ವಿಶ್ವನಾಥ್, ನವೀನ್, ಸುರೇಶ್, ರವಿ, ಮಂಜುನಾಥ್, ಪ್ರಸನ್ನ, ಹರೀಶ್ ಸೇರಿದಂತೆ ಮತ್ತಿತ್ತರರು ಇದ್ದರು....
What's Your Reaction?