*ಕೆ.ಆರ್.ಪೇಟೆ: ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರಲ್ಲಿರುವ ಪ್ರಾಮಾಣಿಕತೆ, ಸರಳತೆ, ಕಾರ್ಯಕ್ಷಮತೆಯಿಂದಲೇ ಅವರಿಗೆ ಹಂತ ಹಂತವಾಗಿ ಗೌರವಾನ್ವಿತ ಸ್ಥಾನಗಳಿಗೆ ಅಲಂಕರಿಸುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸುತ್ತಿದ್ದಾರೆ ಎಂದು ಮುಖಂಡ ಬೂಕನಕೆರೆ ಬಿ.ಟಿ ವೆಂಕಟೇಶ್ ತಿಳಿಸಿದರು.*

*ಕೆ.ಆರ್.ಪೇಟೆ: ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರಲ್ಲಿರುವ ಪ್ರಾಮಾಣಿಕತೆ, ಸರಳತೆ, ಕಾರ್ಯಕ್ಷಮತೆಯಿಂದಲೇ ಅವರಿಗೆ ಹಂತ ಹಂತವಾಗಿ ಗೌರವಾನ್ವಿತ ಸ್ಥಾನಗಳಿಗೆ  ಅಲಂಕರಿಸುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸುತ್ತಿದ್ದಾರೆ ಎಂದು ಮುಖಂಡ ಬೂಕನಕೆರೆ ಬಿ.ಟಿ ವೆಂಕಟೇಶ್ ತಿಳಿಸಿದರು.*

ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ೨0೨೪--೨೯ನೇ ಅವಧಿಗೆ ರಾಜ್ಯ ಪರಿಷತ್ ಸದಸ್ಯರ ಚುನಾವಣೆಯಲ್ಲಿ ಅವಿರೋಧವಾಗಿ ಪರಿಷತ್ ಸದಸ್ಯರಾಗಿ ಆರ್‌ಟಿಓ ಮಲ್ಲಿಕಾರ್ಜುನ್ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ.

ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಆರ್.ಟಿ.ಓ ಮಲ್ಲಿಕಾರ್ಜುನ್ ಕಚೇರಿಯಲ್ಲಿ ಅವರ ಹಿತೈಷಿಗಳು ಮತ್ತು ಅಭಿಮಾನಿಗಳ ಬಳಗದಿಂದ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದ ಮುಖಂಡ ಬೂಕನಕೆರೆ ಬಿ.ಟಿ ವೆಂಕಟೇಶ್ ಆರ್ ಟಿ ಓ ಮಲ್ಲಿಕಾರ್ಜುನ್ ತಾಲೂಕಿನ ಆಲಂಬಾಡಿ ಕಾವಲು ಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಜನಿಸಿ ಶಾಲಾ ಹಂತದಲ್ಲಿ ಶ್ರದ್ಧಾ ಭಕ್ತಿಯಿಂದ ಪರಿಶ್ರಮದ ಮೂಲಕ ಪೋಲಿಸ್ ಇಲಾಖೆಯಲ್ಲಿ. ಘನ ಸಚಿವರ ಕಾರ್ಯದರ್ಶಿಯಾಗಿ ವಿವಿಧ ಸರ್ಕಾರಿ ಇಲಾಖೆಯಲ್ಲಿ ಕಾಯ ವಾಚ ಮನಸ್ಸಿನಿಂದ ಸೇವೆ ಸಲ್ಲಿಸುತ್ತಾ ಪ್ರಸ್ತುತ ನಾಗಮಂಗಲ ಮತ್ತು ಬೆಂಗಳೂರು ಕಚೇರಿಗಳ ಸಹಾಯಕ ಪ್ರಾದೇಶಿಕ ಸಾರಿಗೆ ಮುಖ್ಯ ಅಧಿಕಾರಿಯಾಗಿ ಹಾಗೂ ಆರ್.ಟಿ.ಓ ಸಂಘದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಕಾಯಕವೇ ಕೈಲಾಸ ಎಂದು ತಿಳಿದು ಸರ್ವರನ್ನು ಗೌರವಿಸುತ್ತಾ ತಾಲ್ಲೂಕಿನಲ್ಲೂ ತಮ್ಮದೇ ಆದ ಸಮಾಜಸೇವೆಯನ್ನು ಮಾಡುತ್ತಾ, ಸಂಕಷ್ಟದಲ್ಲಿರುವವರ, ನಿರ್ಗತಿಕರ, ಬಡವರ ಕಷ್ಟಗಳಿಗೆ ಸ್ಪಂಧಿಸಿ ಜನಾನುರಾಗಿಯಾಗಿರುವ ಸರಳ ಸ್ವಭಾವದ ಮಲ್ಲಿಕಾರ್ಜುನ್ ಸಮುದ್ರದಂತಹ ರಾಜ್ಯ ಪರಿಷತ್ ಚುನಾವಣೆಯಲ್ಲಿ ಅವಿರೋಧವಾಗಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ನಮ್ಮ ತಾಲ್ಲೂಕಿನ ಗೌರವೂ ಹೆಚ್ಚಿಸಿದ್ದಾರೆ.ಅವರ ಪ್ರಾಮಾಣಿಕ ಕಾರ್ಯಕ್ಷಮತೆಯಿಂದ ಹಂತ ಹಂತವಾಗಿ ಉತ್ತಮ ಸ್ಥಾನಮಾನ ದೊರಕುತ್ತಿರುವುದು ಸಾಕ್ಷಿಯಾಗಿ ಸೇವಾ ಮನೋಭಾವನೆಯ ಪರಿಶ್ರಮಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಗೌರವಾನ್ವಿತ ಸ್ಥಾನಗಳು ದೊರಕುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಮಾಜ ಸೇವಕ ಹಾಗೂ ರಾಜ್ಯ ಪರಿಷತ್ ನೂತನ ಸದಸ್ಯ ಆರ್.ಟಿ. ಓ ಮಲ್ಲಿಕಾರ್ಜುನ್ ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಮಾತ್ರ ಪ್ರತಿಯೊಬ್ಬ ಮನುಷ್ಯ ಯಶಸ್ವಿಯಾಗಲು ಸಾಧ್ಯ. ಸರ್ಕಾರಿ ಕೆಲಸ ದೇವರ ಕೆಲಸ ಹಾಗೂ ಜನರ ಸೇವೆ ಜನಾರ್ದನ ಸೇವೆ ಎಂಬ ಭಾವನೆಯಿಂದ ನನ್ನ ಆತ್ಮ ತೃಪ್ತಿಯಿಂದ ಸೇವೆ ಸಲ್ಲಿಸಿದ ಫಲವಾಗಿ ಈ ಅಭಿನಂದನಾ ಸಮಾರಂಭ ಸಾಕ್ಷಿಯಾಗಿದೆ. ಈ ಗೌರವ ಅಭಿನಂದನೆಗಳು ನನಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿ ಎಚ್ಚರಿಕೆ ಗಂಟೆಯಾಗಿದೆ. ಅದಕ್ಕೆ ಋಣಿಯಾಗಿ ಸರ್ಕಾರಿ ನೌಕರರ ಹಿತಕ್ಕೆ ಸೇವಕನಾಗಿ.ಕೆ ಆರ್ ಪೇಟೆ ತಾಲೂಕಿನ ಬಡ ಜನತೆಯ ಅಭಿವೃದ್ಧಿಗೆ ಮಗನಾಗಿ ಶ್ರಮ ವಹಿಸುತ್ತೇನೆ ಎಂದರು.

ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಬೆಡದಹಳ್ಳಿ ಶ್ರೀ ಪಂಚಭೂತೇಶ್ವರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.  

 

ಈ ಸಂದರ್ಭದಲ್ಲಿ ಹಿರಿಯ ಮುಖಂಡ ರಾಜಶೇಖರ್,ಪುರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನಟರಾಜು,ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಲಕ್ಷ್ಮಿಪುರ ಪ್ರಸನ್ನ,ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಸದಸ್ಯೆ ಬಿ.ಸಿ.ಮೀನಾಕ್ಷಿ ರಮೇಶ್, ತಾಲ್ಲೂಕು ದರಖಾಸ್ತು ಕಮಿಟಿ ಸದಸ್ಯ ಜಿ.ಎ.ರಾಯಪ್ಪ, ತಾಲೂಕು ಕಸಪಾ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ,ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಪ್ಪನಹಳ್ಳಿ ಅರುಣ್,ರಾಜೇಶ್,ತಾ.ಪಂ.ಮಾಜಿ ಸದಸ್ಯ ವಿನೂತಸುರೇಶ್, ತಾಲ್ಲೂಕು ಪ.ಜಾ,ಪ.ಪಂ.ಶಿಕ್ಷಕರ ಸಂಘದ ಅಧ್ಯಕ್ಷ ಹಳೆಯೂರು ಯೋಗೇಶ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಎಸ್.ಮಂಜು, ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಪುರಸಭಾ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ಕೃಷ್ಣನಾಯಕ,ಮುಖಂಡರಾದ ವಕೀಲ ನಾಗೇಶ್,ಲೋಕಾಕ್ಷಿಜಗದೀಶ್ ಕೆ.ಎಸ್.ಬಸವೇಗೌಡ, ಆಲಂಬಾಡಿಕಾವಲು ಜಯರಾಮೇಗೌಡ, ಮಾರ್ಗೋನಹಳ್ಳಿ ತಮ್ಮೇಗೌಡ,ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ತಾಲ್ಲೂಕು ಕಸಾಪ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಕಾರ್ಯದರ್ಶಿ ಕಟ್ಟೆ ಮಹೇಶ್,,ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಮಾಂಬಳ್ಳಿ ಜಯರಾಂ, ತಾಲ್ಲೂಕು ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್, ಮಡುವಿನಕೋಡಿ ಉಮೇಶ್, ಸಾಧುಗೋನಹಳ್ಳಿ ಲೋಕೇಶ್, ಡಾಬಾ ಮಂಜು, ವಿಜಿಯಣ್ಣ, ರವಿ, ಯೋಗೇಶ್, ಮಧುಕಿರಣ್, ಬಣ್ಣನಕೆರೆ ಅಭಿಷೇಕ್, ಸೇರಿದಂತೆ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು. 

What's Your Reaction?

like

dislike

love

funny

angry

sad

wow