*ವೈವಿದ್ಯತೆಯ ಭಾರತವನ್ನು ಒಗ್ಗೂಡಿಸಿದ ಗಾಂಧೀಜಿಯವರ ಆದರ್ಶ ಪಾಲಿಸೋಣ: ಗೃಹ ಸಚಿವ ಪರಮೇಶ್ವರ*

*ವೈವಿದ್ಯತೆಯ ಭಾರತವನ್ನು ಒಗ್ಗೂಡಿಸಿದ ಗಾಂಧೀಜಿಯವರ ಆದರ್ಶ ಪಾಲಿಸೋಣ: ಗೃಹ ಸಚಿವ ಪರಮೇಶ್ವರ*

-

ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟನೆ 

-ಕೇಂದ್ರ ಸಚಿವ ಸೋಮಣ್ಣ ಅವರೊಂದಿಗೆ ಗಾಂಧಿ ಸ್ಮಾರಕ ಭವನಕ್ಕೆ ಭೇಟಿ

*ತುಮಕೂರು, ಅಕ್ಟೋಬರ್ 2:-* ವಿವಿಧ ಭಾಷೆ, ಸಂಸ್ಕೃತಿಯ ಜನರನ್ನೊಳಗೊಂಡ ಭಾರತವನ್ನು ಒಗ್ಗೂಡಿಸಿದ ಮಹಾತ್ಮ ಗಾಂಧೀಜಿಯವರ ಆದರ್ಶ, ತತ್ವಗಳನ್ನು ಪಾಲಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ವತಿಯಿಂದ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ನಡೆದ 'ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ಹಾಗೂ ಪೌರಕಾರ್ಮಿಕ ದಿನಚಾರಣೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟ ದಿನಗಳು ಹಾಗೂ ಗಾಂಧೀಜಿಯವರ ಆದರ್ಶಗಳನ್ನು ಪರಿಚಯಿಸಬೇಕು. ಜವಾಹರ್ ಲಾಲ್ ನೆಹರೂ ಅವರ ನಂತರ ಜನಾಭಿಪ್ರಾಯವನ್ನು ಗಳಿಸುವಲ್ಲಿ ಯಶಸ್ವಿಯಾದ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಕೊಡುಗೆಯನ್ನು ಸ್ಮರಿಸೋಣ. ಶಾಸ್ತ್ರಿ ಅವರು ಹದಿನೇಳನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು, ಗಾಂಧೀಜಿಯವರ ಅನುಯಾಯಿಯಾಗಿದ್ದರು. ಈ ಇಬ್ಬರು ಮಹಾನ್ ನಾಯಕರ ಜನ್ಮ ದಿನಾಚರಣೆ ಒಂದೇ ದಿನ ಇರುವುದು ಆಶ್ಚರ್ಯಕರ ಎಂದರು.

ಗಾಂಧೀಜಿ ಅವರು ದಕ್ಷಿಣಾ ಆಫ್ರಿಕಾಕ್ಕೆ ಭೇಟಿ ನೀಡಿದಾಗ ಆಳ್ವಿಕೆ ನಡೆಸುತ್ತಿದ್ದ ಬ್ರಿಟೀಷರು, ವರ್ಣಬೇದ ತಾರತಮ್ಯದಿಂದ ಗಾಂಧೀಜಿಯವರನ್ನು ರೈಲಿನಿಂದ ಕೆಳಗೆ ಇಳಿಸಿದ್ದರು. ಅವರು ಅನುಭವಿಸಿದ ಕಷ್ಟವೇ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅಡಿಪಾಯವಾಯಿತು. ಭಾರತಕ್ಕೆ ಆಗಮಿಸಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿಕೊಂಡು ಅಹಿಂಸಾ, ಶಾಂತಿ ಮೂಲಕ ಸ್ವಾತಂತ್ರ್ಯ ತಂದುಕೊಟ್ಟರು. ಮುಂದಿನ ಪೀಳಿಗೆಗು ಗಾಂಧೀಜಿಯವರ ತತ್ವ, ಅಸದರ್ಶಗಳನ್ನು ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.

ಗಾಂಧಿಜಿ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ 1927ರಲ್ಲಿ ತುಮಕೂರಿಗೆ ಬಂದಾಗ ಜನಸಮುದಾಯಕ್ಕೆ ಪ್ರೇರೇಪಣೆ ಮಾಡಿ ಹೋಗಿದ್ದರು. ಜಿಲ್ಲೆಗೆ ಅವರು ಪ್ರೇರೇಪಣೆ ಮಾಡಿರುದನ್ನು ನೆನಪಿಸಬೇಕಿದೆ ಎಂದರು‌

ತುಮಕೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ತುಮಕೂರು ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಒಂಬತ್ತು ದಿವಸ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು,‌ ನವದುರ್ಗೆಯರನ್ನು ಆರಾಧಿಸಗುವುದು. 70 ದೇವರುಗಳ ಮೆರವಣಿಗೆ ಹೊರಡಲಿದೆ ಎಂದು ತಿಳಿಸಿದರು.

ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಶಿವರಾಜ ಕುಮಾರ್, ಸಂಗೀತಾ ನಿರ್ದೇಶಕ ಗುರು ಕಿರಣ್, ಗಾಯಕ ವಿಜಯ ಪ್ರಕಾಶ್ ಅವರು ಆಗಮಿಸಲಿದ್ದಾರೆ. ವಿಂಟೇಜ್ ಕಾರ್‌ ಪ್ರದರ್ಶನ, ಡ್ರೋಣ್ ಶೋ‌, ಲೇಸರ್ ಬೀಮ್ ಶೋ ಹಲವು ನಡೆಸಲಾಗುತ್ತಿದೆ. ಹೆಚ್‌ಎಎಲ್‌ನ ಹೆಲಿಕ್ಯಾಪ್ಟರ್ ಅನ್ನು ಪ್ರದರ್ಶನಕ್ಕೆ ಇಡಲಾಗುವುದು. ನಗರದ ಎಲ್ಲ ಬೀದಿಗಳನ್ನು ದೀಪಗಳಿಂದ ಅಲಂಕಾರಗೊಳಿಸಲಾಗುತ್ತಿದೆ.‌ ಜಿಲ್ಲೆಯ ಎಲ್ಲ ನಾಗರಿಕರು ಭಾಗವಹಿಸಿ ತುಮಕೂರು ದಸರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು‌.

ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ 1927ರಲ್ಲಿ ಮಹಾತ್ಮ ಗಾಂಧೀಜಿ ಅವರು ತುಮಕೂರು ಜಿಲ್ಲೆಗೆ ಆಗಮಿಸಿದ್ದ ವೇಳೆ ನಗರದಲ್ಲಿ ಗಾಂಧೀಜಿ ವಾಸ್ತವ್ಯ ಮಾಡಿದ್ದ 'ಮಹಾತ್ಮ ಗಾಂಧಿ ಸ್ಮಾರಕ ಭವನಕ್ಕೆ ಭೇಟಿ ನೀಡಿದರು. ಕೇಂದ್ರ ಸಚಿವ ವಿ.ಸೋಮಣ್ಣ ಅವರೊಂದಿಗೆ ಗಾಂಧೀಜಿಯವರ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಭಾವಚಿತ್ರಗಳನ್ನು ವೀಕ್ಷಿಸಿದರು.

ತುಮಕೂರು ಮಹಾನಗರ ಪಾಲಿಕೆಯ 81 ಪೌರಕಾರ್ಮಿಕರಿಗೆ ಖಾಯಂ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಯಿತು. ವಿವಿಧ ಶೈಕ್ಷಣಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕರಾದ ಜ್ಯೋತಿಗಣೇಶ್, ಬಿ.ಸುರೇಶ್ ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ, ಜಿಲ್ಲಾ‌ ಪಂಚಾಯತ್ ಸಿಇಒ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಶೋಕ್

ಅವರು ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow