*ಯುವಜನರು ಗುರು ಹಿರಿಯರು ಹಾಗೂ ತಂದೆ ತಾಯಿಗಳನ್ನು* *ಗೌರವಿಸಿ, ಜೀವನದಲ್ಲಿ ಉತ್ತಮವಾದ ಸಂಸ್ಕಾರವನ್ನು ಬೆಳೆಸಿಕೊಳ್ಳಿ* . *ಡಾ.ಮಾದೇಶ್ ಗುರೂಜಿ
ವಿದ್ಯಾವಂತ ಯುವಜನರು ಗುರು ಹಿರಿಯರು ಹಾಗೂ
ತಂದೆತಾಯಿಗಳನ್ನು ಗೌರವಿಸಿ ಉತ್ತಮವಾದ ಸಂಸ್ಕಾರವನ್ನು
ಬೆಳೆಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆಹಾಕಬೇಕು. ಸಾಧನೆ ಮಾಡಲು ಕಷ್ಠವಾದರೂ ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ದಾರಿಯಲ್ಲಿಯೇ ಸಾಗಿ
ಗುರಿ ಮುಟ್ಟಬೇಕು ಎಂದು ಹುಣಸೂರಿನ ದೇವರೂರಿನ ಮಾನವ ಧರ್ಮ ಪೀಠದ ಪೀಠಾಧಿಪತಿ ಧರ್ಮರತ್ನಾಕರ ಡಾ.ಮಾದೇಶ್ ಗುರೂಜಿ ಕರೆ ನೀಡಿದರು.
ಅವರು ಕೃಷ್ಣರಾಜಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬೆಡದಹಳ್ಳಿಯ ಶ್ರೀಪಂಚಭೂತೇಶ್ವರ ಕ್ಷೇತ್ರದಲ್ಲಿ ಆಯೋಜಿಸಿದ್ದ ಮಂತ್ರಾಲಯದ ಶ್ರೀ.ಗುರು ರಾಘವೇಂದ್ರ
ಸಾರ್ವಭೌಮ ಯತಿಗಳ ೩೩೫ನೇ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ
ಗುರುರಾಯರ ಮೂರ್ತಿಗೆ ಅಭಿಷೇಕ ಮಾಡಿ, ವಿಶೇಷ ಪೂಜೆ ಸಲ್ಲಿಸಿ, ಲೋಕ ಕಲ್ಯಾರ್ಥವಾಗಿ ಗುರುರಾಯ ಹೋಮ ನಡೆಸಿ ಪ್ರಾರ್ಥಿಸಿ ನೆರೆದಿದ್ಧ ಭಕ್ತವೃಂದ ಹಾಗೂ ಯುವಜನರನ್ನು ಉದ್ಧೇಶಿಸಿ ಮಾತನಾಡಿ ಆಶೀರ್ವಚನ
ನೀಡಿದರು.
ಗುರುರಾಘವೇಂದ್ರ ಸಾರ್ವಭೌಮ ಯತಿಗಳು ಲೋಕಕಲ್ಯಾಣಕ್ಕಾಗಿ
ತಮ್ಮ ಜೀವನವನ್ನೇ ಮುಡುಪಾಗಿಟ್ಟು ಸೇವೆ ಸಲ್ಲಿಸಿ, ನೊಂದವರು ಹಾಗೂ
ಅನಾಥರ ಬಾಳಿನ ಬೆಳಕಾಗಿ, ಭಗವಂತನ ಸಾಕ್ಷಾತ್ಕಾರಕ್ಕೆ ಆಡಂಬರದ ಪೂಜೆ ಪುರಸ್ಕಾರಗಳು ಬೇಕಾಗಿಲ್ಲ, ನಿಜವಾದ ಭಕ್ತಿ ಹಾಗೂ ಪೂಜೆಗೆ ಭಗವಂತನು ಒಲಿದು ಹರಸಿ ಆಶೀರ್ವಧಿಸುತ್ತಾನೆ ಎಂಬ ಸತ್ಯ ಸಂದೇಶ ನೀಡಿದ ಗುರು ರಾಯರು ಮಂತ್ರಾಲಯದ ಬೃಂದಾವನದಲ್ಲಿ ಜೀವಂತವಾಗಿ ಐಕ್ಯರಾಗಿ ಬೇಡಿ ಬಂದ ಭಕ್ತರನ್ನು ಹರಸಿ ಆಶೀರ್ವಧಿಸುತ್ತಾ ಭಕ್ತರ
ಇಷ್ಠಾರ್ಥಗಳನ್ನು ಈಡೇರಿಸುತ್ತಿದ್ದಾರೆ. ಅತ್ಯಂತ ಸರಳವಾಗಿ ಮಂತ್ರೋಪದೇಶ ಮಾಡಿ ಶ್ರೀಮೂಲ ರಾಮ ಹಾಗೂ ಪಂಚಮುಖಿ
ಆಂಜನೇಯನ ಮಹಿಮೆಯನ್ನು ನಾಡಿನ ಜನತೆಗೆ ತಿಳಿಸಿಕೊಟ್ಟ
ಗುರುರಾಯರು ಕರುಣಾಮಯಿ ಮಾತ್ರವಲ್ಲದೇ ನೊಂದ ಜನರ
ಜೀವನದ ಚೈತನ್ಯ ಶಕ್ತಿಯಾಗಿದ್ದಾರೆ. ಆದ್ದರಿಂದ ಬೆಡದಹಳ್ಳಿಯ ಶ್ರೀ
ಪಂಚಭೂತೇಶ್ವರ ಕ್ಷೇತ್ರದಲ್ಲಿ ಗುರುರಾಯರ ಆರಾಧನಾ
ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ, ಹೋಮ ಹವನಗಳ ಮೂಲಕ ಸತ್ಸಂಗ ಕಾರ್ಯಕ್ರಮ ನಡೆಸಿ ನಮ್ಮ ಜೀವನದ ಮೌಲ್ಯಗಳು ಹಾಗೂ ಸೇವಾ ಮನೋಭಾವನೆ ಮತ್ತು ಪರೋಪಕಾರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಇಂದಿನ ದಿನಮಾನದಲ್ಲಿ
ಯುವಜನರು ಮತ್ತು ವಿದ್ಯಾರ್ಥಿಗಳಿಂದ ಮಾತ್ರ ಆರೋಗ್ಯವಂತ
ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿರುವುದರಿಂದ ಯುವಜನರು ಮಾನವೀಯ ಮೌಲ್ಯಗಳು ಹಾಗೂ ಉತ್ತಮವಾದ ಸಂಸ್ಕಾರವನ್ನು
ಮೈಗೂಡಿಸಿಕೊಂಡು ಹೆಜ್ಜೆ ಹಾಕುವ ಮೂಲಕ ಸಮಾಜಕ್ಕೆ ಆಸ್ತಿಯಾಗಿ ಹುಟ್ಟಿದ ಮಣ್ಣಿನ ಋಣವನ್ನು ತೀರಿಸುವ ಸುಸಂಸ್ಕೃತ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಮಾದೇಶ್ ಗುರೂಜಿ ಕರೆ ನೀಡಿದರು.
ಬೆಡದಹಳ್ಳಿ ಪಂಚಭೂತೇಶ್ವರ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ, ಮಳವಳ್ಳಿಯ ಬೋಸೇಗೌಡನ ದೊಡ್ಡಿಯ ಶ್ರೀ ಗುರು ಸಿದ್ಧರಾಮೇಶ್ವರ ಪೀಠದ
ಶ್ರೀ ಸಿದ್ಧರಾಮ ಶ್ರೀಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ
ಧಾರ್ಮಿಕ ಸಂದೇಶ ನೀಡಿದರು. ಸಮಾಜಸೇವಕ ಆಲಂಬಾಡಿಕಾವಲು ಮಲ್ಲಿಕಾರ್ಜುನ, ಕಿಕ್ಕೇರಿ ಪೋಲಿಸ್ ಠಾಣೆಯ ಸಿಪಿಐ ರೇವತಿ, ಪಂಚಭೂತೇಶ್ವರ
ಪೀಠದ ಕಾರ್ಯದರ್ಶಿ ಕಾಂತರಾಜು, ಸಂಚಾಲಕ ಡಾ.ಕೆ.ಎಸ್.ಚಂದ್ರು, ಮಹಿಳಾ
ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾಂತವ್ವ ಸೇರಿದಂತೆ ಸಾವಿರಾರು ಭಕ್ತಾಧಿಗಳು ಗುರು ರಾಯರ ಆರಾಧನಾ ಮಹೋತ್ಸವ
ಕಾ
ರ್ಯಕ್ರದಲ್ಲಿ ಭಾಗವಹಿಸಿದ್ದರು.
What's Your Reaction?