ಕೆ.ಆರ್.ಪೇಟೆ : ಶೀಳನೆರೆ - ಬೂಕನಕೆರೆ ಹೋಬಳಿ ಘಟಕದ ಅಧ್ಯಕ್ಷ - ಪದಾಧಿಕಾರಿಗಳ ಆಯ್ಕೆ.
ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರುನಾಡು ಯುವಜನ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷರಾದ ಕೆಬಿಸಿ ಮಂಜುನಾಥ್,ರಾಜ್ಯ ಉಪಾಧ್ಯಕ್ಷರಾದ ಲೋಕೇಶ್.ವಿ, ಜಿಲ್ಲಾ ಅಧ್ಯಕ್ಷರಾದ ಎಸ್.ರವಿ, ತಾಲೋಕು ಅಧ್ಯಕ್ಷರಾದ ಯುವರಾಜ್ ರವರ ನೇತೃತ್ವದಲ್ಲಿ ಶೀಳನೆರೆ ಹಾಗೂ ಬೂಕನಕೆರೆ ಹೋಬಳಿಯ ಅಧ್ಯಕ್ಷರು-ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು,
ಇತ್ತೀಚೆಗೆ ತಾಲೋಕಿನ ಬಣ್ಣೇನಹಳ್ಳಿಯ ಮೆಗಾ ಫುಡ್ ಫ್ಯಾಕ್ಟರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಸಹಕರಿಸಿದ ಹಿನ್ನೆಲೆಯಲ್ಲಿ ಸ್ವ-ಇಚ್ಛೆಯಿಂದ ಸಂಘಟನೆಗೆ ಸೇರ್ಪಡೆಗೊಂಡರು,
*ಬೂಕನಕೆರೆ ಹೋಬಳಿ ಘಟಕದ ಆಯ್ಕೆ:*
ಪ್ರಜ್ವಲ್ - ಕಾರ್ಯದರ್ಶಿ,
ರಾಜೇಶ್ - ಉಪಾಧ್ಯಕ್ಷರು,
*ಶೀಳನೆರೆ ಹೋಬಳಿ ಘಟಕದ ಆಯ್ಕೆ:*
ಯೋಗೇಶ್ - ಶೀಳನೆರೆ ಅಧ್ಯಕ್ಷರು,
ರಾಹುಲ್ ಗೌಡ- ಕಾರ್ಯದರ್ಶಿ,
ಪ್ರಸನ್ನ ಕುಮಾರ್ - ಸಂಘಟನಾ ಕಾರ್ಯದರ್ಶಿ,
ವಿನೋದ್ - ಉಪಾಧ್ಯಕ್ಷರು,
ಹರೀಶ್ - ಜಂಟಿ ಕಾರ್ಯದರ್ಶಿ
ಹಾಗೂ ಈ ಸಂದರ್ಭದಲ್ಲಿ ಧರ್ಮೇಶ್,ಗಂಗಾಧರ್, ಪುನೀತ್,ಸಾಗರ್, ಸುನೀಲ್, ಅಭಿಷೇಕ್, ಕಾರ್ತಿಕ್ ಸೇರಿದಂತೆ ಹಲವಾರು ಕಾರ್ಯಕರ್ತರು ಸೇರ್ಪಡೆಗೊಂಡರು,
*ಕನ್ನಡ ರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆ*
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರುನಾಡು ಯುವಜನ ವೇದಿಕೆಯ ವತಿಯಿಂದ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ದಿನಾಂಕ.12.11.2023ನೇ ಭಾನುವಾರ ಕೆಪಿಎಸ್ ಶಾಲೆಯ ಮುಂಭಾಗದಲ್ಲಿರುವ ಚೆನ್ನೇಗೌಡ ಕಾಂಪ್ಲೆಕ್ಸ್ ಬಳಿಯಲ್ಲಿರುವ ಆವರಣದಲ್ಲಿ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಕರುನಾಡು ಯುವಜನ ವೇದಿಕೆಯ ಎಲ್ಲಾ ಅಧ್ಯಕ್ಷರು-ಪದಾಧಿಕಾರಿಗಳ ಸಮ್ಮುಖದಲ್ಲಿ ತೀರ್ಮಾನಿಸಲಾಯಿತು,
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದ ಕೆಬಿಸಿ ಮಂಜುನಾಥ್, ರಾಜ್ಯ ಉಪಾಧ್ಯಕ್ಷರಾದ ಲೋಕೇಶ್.ವಿ, ಜಿಲ್ಲಾಧ್ಯಕ್ಷರಾದ ಎಸ್.ರವಿ,ರಾಜು.ಜಿ.ಪಿ, ಶ್ರೀನಿವಾಸ್.ಹೆಚ್.ಜಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಸಾಯಿಕುಮಾರ್, ತಾಲೋಕು ಅಧ್ಯಕ್ಷರಾದ ಯುವರಾಜ್, ಸುನೀಲ್ ಕುಮಾರ್, ಸುಂದರೇಶ್, ದಿನೇಶ್, ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು,
*ವರದಿ, ರಾಜು ಜಿಪಿ ಕಿಕ್ಕೇರಿ*
What's Your Reaction?