ಕರ್ನಾಟಕ ವೀರ ಸಮರ ಸೇನೆಯ ವತಿಯಿಂದ ನೆನ್ನೆ ರಾತ್ರಿ ಪಂಜಿನ ಮೆರವಣಿಗೆ ಮಾಡುವ ಮೂಲಕ ಬಂದ್ ಗೆ ಬೆಂಬಲ ಸೂಚಿಸಿದರು

ಕರ್ನಾಟಕ ವೀರ ಸಮರ ಸೇನೆಯ ವತಿಯಿಂದ ನೆನ್ನೆ ರಾತ್ರಿ ಪಂಜಿನ ಮೆರವಣಿಗೆ ಮಾಡುವ ಮೂಲಕ ಬಂದ್ ಗೆ ಬೆಂಬಲ ಸೂಚಿಸಿದರು

ಚನ್ನರಾಯಪಟ್ಟಣ: ಕಾವೇರಿ ನೀರು ಹಂಚಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಬಂದ್ ಬಹುತೇಕ ಯಶಸ್ವಿಯಾಗಿದೆ. ವಿನೂತನವಾಗಿ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯುವಲ್ಲಿ ಕನ್ನಡಿಗರು ಯಶಸ್ವಿಯಾಗಿದ್ದಾರೆ.

ಅದೇ ರೀತಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿಯೂ ಕರ್ನಾಟಕ ವೀರ ಸಮರ ಸೇನೆಯ ವತಿಯಿಂದ ನೆನ್ನೆ ರಾತ್ರಿ ಪಂಜಿನ ಮೆರವಣಿಗೆ ಮಾಡುವ ಮೂಲಕ ಬಂದ್ ಗೆ ಬೆಂಬಲ ಸೂಚಿಸಿದರು. ಇದೇ ವೇಳೆ ಮಾತನಾಡಿದ ಕರ್ನಾಟಕ ವೀರ ಸಮರ ಸೇನೆ ಜಿಲ್ಲಾಧ್ಯಕ್ಷರಾದ ಭರತ್ ಗೌಡ, ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ಸರ್ಕಾರವು ನ್ಯಾಯಲಯಕ್ಕೆ ಮನದಟ್ಟು ಮಾಡಿಕೊಟ್ಟಿದ್ದರೇ, ನೀರನ್ನು ಉಳಿಸಿಕೊಳ್ಳಬಹುದಿತ್ತು. ಆದ್ರೆ ಕಳೆದ 2 ತಿಂಗಳಿಂದಲೂ ನಮ್ಮ ರಾಜ್ಯದಲ್ಲಿ ಮಳೆಯಾಗದೇ ಬರಗಾಲ ಬಂದಿದ್ದು, ನೀರಿಗೆ ಹಾಹಾಕಾರ ಬಂದೊದಗಿದೆ. ಇಂತಹ ಸಮಯದಲ್ಲಿ ಕರ್ನಾಟಕ ಸರ್ಕಾರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಮೂಲಕ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿ ರಾಜ್ಯದ ರೈತರ ಹಿತವನ್ನು ಕಾಪಾಡುವ ಕಡೆ ಗಮನ ಹರಿಸಬೇಕು ಎಂದರು. ಚನ್ನರಾಯಪಟ್ಟಣ ಹೊಸ ಬಸ್ ನಿಲ್ದಾಣದಿಂದ ಹೊರಟ ಪಂಜಿನ ಮೆರವಣಿಗೆ ನವೋದಯ ವೃತದ ಮೂಲಕ ಕೆ.ಆರ್. ವೃತ್ತ ಮತ್ತು ಆಸ್ಪತ್ರೆ ವೃತ್ತದಲ್ಲಿ ಸಾಗಿ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ಇದೇ ವೇಳೆ ಸರ್ಕಾರದ ವಿರುದ್ಧ ಮತ್ತು ತಮಿಳುನಾಡಿನ ಉದ್ಧಟತನದ ವಿರುದ್ಧ ಪ್ರತಿಭಟನೆ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಈ ತಕ್ಷಣದಿಂದ ಹರಿಯುತ್ತಿರುವ ಕಾವೇರಿ ನೀರನ್ನು ನಿಲ್ಲಿಸಲದಿದ್ದರೇ ಮುಂದಿನ ದಿನದಲ್ಲಿ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಭರತಗೌಡ,ಸಂದೇಶಗೌಡ, ದಿಂಡಗೂರು ವಾಸು,ಕಾರ್ತಿಕ್,ಗೌಡಗೆರೆ ಮನು,ಜೋಯಿಸರಹಳ್ಳಿ ಪ್ರಭಾಕರ್,ಗಾಂಧಿಸರ್ಕಲ್ ಪ್ರತಾಪ್,ಸಚಿನ್, ಲೋಕೇಶ್,ರವಿ,ಸುನಿಲ್ , ವಜ್ರೇಶ್,ಸೇರಿದಂತೆ ಕರ್ನಾಟಕ ವೀರ ಸಮರ ಸೇನೆಯ ಕಾರ್ಯಕರ್ತರು ಹಾಜರಿದ್ದರು.

What's Your Reaction?

like

dislike

love

funny

angry

sad

wow