*ಕಿಕ್ಕೇರಿ ಹೋಬಳಿಯಲ್ಲಿ ಕಾವೇರಿ ನೀರಿಗಾಗಿ ಪ್ರತಿಭಟನೆ*
*ಕಿಕ್ಕೇರಿ ಹೋಬಳಿಯಲ್ಲಿ ಕಾವೇರಿ ನೀರಿಗಾಗಿ ಪ್ರತಿಭಟನೆ*
ಕೃಷ್ಣರಾಜಪೇಟೆ ತಾಲೋಕು ಕಿಕ್ಕೇರಿಯಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ರೈತಪರ ಹೋರಾಟಗಾರರಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಿದರು
ಮಂಡ್ಯ ಮತ್ತು ಮೈಸೂರು ಭಾಗದ ರೈತರಿಗೆ ಮರಣ ಶಾಸನ ವಾಗಿರುವ ಕಾವೇರಿ ನ್ಯಾಯಾಧೀಕರಣ ಹಾಗೂ ಸುಪ್ರೀಂ ಕೋರ್ಟ್ ತೀರ್ಪು ರೈತ ವಿರೋಧಿಯಾಗಿದೆ. ಕನ್ನಂಬಾಡಿ ಕಟ್ಟೆಯಲ್ಲಿ ನೀರಿಲ್ಲದೆ ಖಾಲಿಯಾಗಿದ್ದು, ಕುಡಿಯುವ ನೀರು ಸೇರಿದಂತೆ ಜನಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿವೆ. ಆದ್ದರಿಂದ ಕಬಿನಿ ಮತ್ತು ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಿ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ರೈತರ ಹಿತ ಕಾಪಾಡಲು ಮುಂದಾಗಬೇಕು.
ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಿಕ್ಕೇರಿ ಹೋಬಳಿ ಗೌರವಧ್ಯಕ್ಷರು ಮೊಟ್ಟೆ ಮಂಜು ರವರು ಅಗ್ರಯಿಸಿದರು
ನಂತರ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರು
ಸಾಸಲು ಗುರುಮೂರ್ತಿ ರವರು
ತಮಿಳುನಾಡಿಗೆ ನೀರು ಹರಿಸಿತಿರುವುದು
. ರೈತರ ಆಕ್ರೋಶಕ್ಕೆ ಕಾರಣವಾಗಿದೆ ರೈತರಿಗೆ ಮೋಸ ಮಾಡಿ ಯಾವ ಸರ್ಕಾರವು ದೃಢವಾಗಿ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ ಎಂಬ ನೈಜ ಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು ರೈತರ ಹಿತ ಕಾಪಾಡಲು ರಾಜ್ಯ ಸರ್ಕಾರವು ಮುಂದಾಗಬೇಕು ಎಂದು ರವರು ತಿಳಿಸಿದರು
ಈ ಸಂದರ್ಭದಲ್ಲಿ ರಾಜ್ಯ ರೈತಸಂಘದ ಮುಖಂಡರು ಎಸ್. ಪಿ. ಮಂಜುನಾಥ್, ಮಿಲ್ ರಾಜಣ್ಣ, ಕೆ. ಪಿ. ಎಸ್. ಶಾಲೆ ಎಸ್. ಡಿ. ಎಮ್. ಸಿ. ಅಧ್ಯಕ್ಷರು ಐಕನಹಳ್ಳಿ ಕೃಷ್ಣೆಗೌಡ್ರು,ಜಿಲ್ಲಾ ಉಪಾಧ್ಯಕ್ಷರು ಗುರುಮೂರ್ತಿ ಕಿಕ್ಕೇರಿ ಹೋಬಳಿ ಗೌರಾವಧ್ಯಕ್ಷರು ಮೊಟ್ಟೆಮಂಜು ಹೋಬಳಿ ಅಧ್ಯಕ್ಷರು ಎಸ್. ಎ. ಪದ್ಮನಾಬಾ ಆನಂದ, ಯೋಗೇಶ್, ಶಿವು, ಪುನೀತ್,ಸಚಿನ್,
*ವರದಿ, ರಾಜು ಜಿಪಿ ಕಿಕ್ಕೇರಿ*
What's Your Reaction?